ಎರಡು ದಿನಗಳ ಈ ಅನ್ವೇಷಣೆಯು ಬೆಂಗಳೂರಿನ ಜನರಿಗೆ ಆಹಾರವನ್ನು ಒದಗಿಸುವ ವಿವಿಧ ಸಂಸ್ಥೆಗಳನ್ನು ಕುರಿತಾಗಿದೆ. ಇದು ಸಹಭಾಗಿತ್ವ ಸಂಶೋಧನಾ ಯೋಜನೆಯಾಗಿದ್ದು, ಸಮುದಾಯ ಚಿಂತನೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.
ಎರಡನೇ ದಿನ: ಎರಡನೇ ದಿನ ಹಲವು ಸಣ್ಣ ಸಂಭಾಷಣಗಳೊಂದಿಗೆ ಅಡಿಗೆ ಕಾರ್ಯಕ್ರಮವೂ ಸೇರಿರುತ್ತದೆ.
ಬೆಂಗಳೂರು ಮತ್ತು ಸುತ್ತ ಮುತ್ತಲಿನ ಆಹಾರ ವ್ಯವಸ್ಥೆಯನ್ನು ರೂಪಿಸುವ ಸಾಗುವಳಿ-ಸಂಸ್ಕೃತಿ ಪರಿಸರಗಳುU
ಶೀತಲ್ ಪಾಟಿಲ್, ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ
ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಶೀತಲ್ ಪಾಟಿಲ್ ಅಧ್ಯಯನ ನೆಡೆಸುತ್ತಿದ್ದಾರೆ. ಹಳ್ಳಿಗಾಡು ಹಾಗೂ ನಗರ ಅಂಚಿನ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಕೃಷಿ ಭೂಮಿಯಲ್ಲಿ ಸತತ ಪರಂಪರಾಗತ ಕೃಷಿ ಯನ್ನು ಕುರಿತಂತೆ ಗಹನ ಅಧ್ಯನ ನಡೆಸಿದ್ದಾರೆ, ಇಂತಹ ಸಾಗುವಳಿ ಪರಿಸರ ಹಾಗೂ ಸಾಮಾಜಿಕ ಹಿತಾಸಕ್ತಿ ಯು ಇವರ ಸಂಶೋಧನೆಯ ಮೂಲ ವಿಷಯವಾಗಿರುತ್ತದೆ.
ನಗರ ಕೃಷಿ: ನಗರ ಕೃಷಿ, ಸಾರ್ವಜನಿಕ ಹಿತಾಸಕ್ತಿ ಮತ್ತು ನಿರ್ವಹಣೆ
ಚಾಂದನಿ ಸಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್
ಡಾ.ಚಾಂದನಿ ಸಿಂಗ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್ ಸಂಸ್ಥೆಯಲ್ಲಿ ಸಂಶೋಧಕರು ಮತ್ತು ಉಪನ್ಯಾಸಕ ಸದಸ್ಯರು. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ವಿಕಸನʼ ಇವರ ಅಧ್ಯನದ ವಿಷಯವಾಗಿದ್ದು, ಕೃಷಿ ಜೀವನ ಹಾಗೂ ಹಳ್ಳಿಗಳಿಂದ ನಗರ ವಲಸೆಯ ವಿಷಯದಲ್ಲಿ ವಿಶೇಷ ಕೇಂದ್ರವಾಗಿದೆ.
ಮಾಡಿ ಕಲಿ: ಬೆಂಗಳೂರಿನಲ್ಲಿ ನಗರ ಕೃಷಿ ಅನುಭವಗಳು
ಪ್ರತಿಜ್ಞ ಪೂನಾಚ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್
ಪ್ರತಿಜ್ಞ ಪೂನಾಚ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್ಮೆಂಟ್ಸ್ ಸಂಸ್ಥೆಯಲ್ಲಿ ಸಂಶೋಧಕರು ಮತ್ತು ಉಪನ್ಯಾಸಕ ಸದಸ್ಯರು. ಹವಾಮಾನ ಬದಲಾವಣೆಯ ಪ್ರಭಾವ ಮತ್ತು ನಗರ ಪ್ರದೇಶ ಮತ್ತು ಸುತ್ತಲಿನ ಭೂಗೋಳಿಕತೆಯಲ್ಲಿ ಉಂಟಾಗುವ ಪರಿಣಾಮಗಳು ಮತ್ತು ಪರಸ್ಪರ ಪ್ರಭಾವವನ್ನು ಕುರಿತಂತೆ ಇವರು ಅಧ್ಯನ ನೆಡೆಸುತ್ತಿದ್ದಾರೆ.
ನಾಲ್ಕು ಆಹ್ವಾನಿತ ವೃತ್ತಿಪರರ ಜೊತೆಗೆ ಪ್ರತಿಜ್ಞ ಅವರು ಸಂಭಾಷಣೆ ನೆಡೆಸಿಕೊಡುತ್ತಾರೆ, ನಂತರ ಪ್ರಶ್ನೋತ್ತರ ಕಾರ್ಯಕ್ರಮ ಇರುತ್ತದೆ. ಭಾಗಿಯಾಗುವ ವೃತ್ತಿ ಪರರು -
ಮೀನಾಕ್ಷಿ – ಗೃಹ ತೋಟಗಾರಿಕೆ ಯಲ್ಲಿ ನಿರತರಾಗಿದ್ದಾರೆ
ಹರಿರಾಮ್ – ತಾರಸಿ ತೋಟಗಾರಿಕೆ ಯಲ್ಲಿ ನಿರತರಾಗಿದ್ದಾರೆ
ಅನಾಮಿಕ ಬಿಸ್ಟ್ – ಸಮೂಹ ಕೃಷಿ ಉದ್ದಿಮೆಯ ಸಂಸ್ಥಾಪಕರು – ಹಳ್ಳಿಯ ಗಾಥೆ
ಪೂಜಾ ವಸಂತ್ – ಐ.ಐ.ಎಚ್.ಎಸ್ ಆವರಣದಲ್ಲಿ ತಾರಸಿ ಕೃಷಿ ಪ್ರಾರಂಭಿಸಿದವರು
‘ಕುಕ್ ಅಲಾಂಗ್’ (ಜೊತೆಯಲ್ಲಿಯೇ ಅಡಿಗೆ ತಯಾರಿಸಿ) – ಆಹಾರ, ನಗರ ಮತ್ತು ನಾವು
‘ಲೋರ್’ ಸಂಸ್ಥೆಯಿಂದ ಚೆಫ್ ಜಾನ್ಸನ್, ಚೆಫ್ ಮೈತ್ರೇಯಿ, ಚೆಫ್ ಅವಿನಾಶ್
‘ಕುಕ್ ಅಲಾಂಗ್’ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅಧ್ಯಯನ ಸೂಚಿ -
ಹೂ ಫೀಡ್ಸ್ ಬೆಂಗಳೂರು ? (ಬೆಂಗಳೂರಿಗೆ ಆಹಾರವನ್ನು ಒದಗಿಸುವವರು ಯಾರು ?) ಬೆಂಗಳೂರು ಸಸ್ಟೇನಬಿಲಿಟಿ ಫೋರಮ್ʼ ಸಹಾಯ ವತಿಯಿಂದ ಹಾಗೂ ʼಎಡಿಬಲ್ ಇಶ್ಯೂಸ್ʼ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ.
‘ಬೆಂಗಳೂರು ಸಸ್ಟೇನಬಿಲಿಟಿ ಫೋರಮ್’, ನಗರದೊಳಗೆ ಹಾಗೂ ನಗರ ಅಂಚಿನ ಭೂಭಾಗಳಲ್ಲಿ ಬಹುಕಾಲದ ವರೆಗೂ ಪರಿಣಮಿಸಬಹುದಾದ ಅನೇಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ವಿಭಿನ್ನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟ. ನೀರು, ಗಾಳಿ ಮತ್ತು ಮಣ್ಣನ್ನು ಒಳಗೊಂಡು, ಇವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಂಪತ್ತು ಹಾಗೂ ನಗರದ ಸರ್ವಮಾನ್ಯ ಸಾಮಗ್ರಿಗಳ ಅಧ್ಯಯನ ಮಾಡುತ್ತಿದ್ದಾರೆ.
‘ಎಡಿಬಲ್ ಇಶ್ಯೂಸ್’ ಆಹಾರ ಕೂಟವಾಗಿದ್ದು, ಹೊಸ ರೀತಿಯಲ್ಲಿ ಭಾರತೀಯ ಆಹಾರ ಪದ್ಧತಿಯ ಬಗೆಗೆ ಚಿಂತನೆ ಅಧ್ಯಯನ ನೆಡೆಸಿದ್ದಾರೆ, ಸಂಶೋಧನೆ, ಒಕ್ಕೂಟ, ಸಭೆಗಳ ಸಂಯೋಜನೆ ಮುಂತಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸಹಭಾಗಿತ್ವ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ .