ಎರಡು ದಿನಗಳ ಈ ಅನ್ವೇಷಣೆಯು ಬೆಂಗಳೂರಿನ ಜನರಿಗೆ ಆಹಾರವನ್ನು ಒದಗಿಸುವ ವಿವಿಧ ಸಂಸ್ಥೆಗಳನ್ನು ಕುರಿತಾಗಿದೆ. ಇದು ಸಹಭಾಗಿತ್ವ ಸಂಶೋಧನಾ ಯೋಜನೆಯಾಗಿದ್ದು, ಸಮುದಾಯ ಚಿಂತನೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.
ಮೊದಲ ದಿನ: ಮೊದಲ ದಿನ 30 ನಿಮಿಷಗಳ ಭಾಷಣ ಹಾಗೂ 15 ನಿಮಿಷಗಳ ಪ್ರಶ್ನೋತ್ತರ ಸಮಾವೇಶ ಸರಣಿ ಕಾರ್ಯಕ್ರಮ ಇರುತ್ತದೆ.
ಬಿತ್ತನೆ ಬೀಜ ಸಂಗ್ರಾಹಕರ ಕಥೆಗಳು
ಡಾ.ಪ್ರಭಾಕರ್ ರಾವ್, ಹರಿಯಾಲಿ ಸೀಡ್ಸ್
ಡಾ.ಪ್ರಭಾಕರ್ ರಾವ್ ಇವರು ಬೆಂಗಳೂರು ನಗರ ಪ್ರದೇಶದ ಸ್ಥಳೀಯ ಬೀಜಗಳು ಹಾಗೂ ಸೇವಿಸ ಬಹುದಾದ ವಿವಿಧ ಸಸ್ಯಸಂಪತ್ತು , ಅವು ಏಕೆ ಮರೆಯಾಗುತ್ತಿವೆ ಮತ್ತು ಹೇಗೆ ನಮ್ಮ ಭವಿಷ್ಯವನ್ನು ಉಳಿಸಿಕೊಳ್ಳ ಬಹುದು ಎಂಬುದರ ಬಗೆಗೆ ಮಾಹಿತಿ ನೀಡಲಿದ್ದಾರೆ.
ಡಾ.ಪ್ರಭಾಕರ್ ರಾವ್ ಅವರು 25 ಕ್ಕೂ ಹೆಚ್ಚು ವರ್ಷಗಳಿಂದ ಬಿತ್ತನೆ ಬೀಜ ಸಂಗ್ರಾಹಕರಾಗಿದ್ದು, ಮರೆಯಾಗುತ್ತಿರುವ ಅನೇಕ ಸ್ಥಳೀಯ ತರಕಾರಿ ಬೀಜಗಳನ್ನು ಸಂಗ್ರಹಿಸಿದ್ದಾರೆ. ಇವರು ವಿಶ್ವದೆಲ್ಲೆಡೆ ಸುತ್ತಿ ವಿದೇಶದ ಅನೇಕ ಹಿರಿಯ ಪೀಳಿಗೆಯ ರೈತರನ್ನು ಭೇಟಿ ಮಾಡಿದ್ದಾರೆ, ಮರೆಯಾಗುತ್ತಿರುವ ವಿಭಿನ್ನ ತಳಿಗಳ ವಿವರ ಪಡೆದಿದ್ದಾರೆ. 2011 ರಲ್ಲಿ ಭಾರತಕ್ಕೆ ಹಿಂತಿರುಗಿದ ನಂತರ, ಬೆಂಗಳೂರಿನ ತಮ್ಮ ಕೃಷಿ ಭೂಮಿಯಲ್ಲಿ , ಬೀಜಗಳ ಅನುವಂಶಿಕ ಸ್ಥಿರತೆ ಮತ್ತು ಪರಿಸರ ಸೂಕ್ತತೆಯನ್ನು ಪರಿಶೀಲಿಸಲು, 500 ಕ್ಕೂ ಹೆಚ್ಚು ತಳಿಗಳ ಗಹನ ಪರೀಕ್ಷೆ ನೆಡೆಸಿದ್ದಾರೆ. ದೇಶ ವಿದೇಶಗಳಿಂದ ಒಟ್ಟುಗೂಡಿಸಿದ 140 ಕ್ಕೂ ಹೆಚ್ಚು ಸ್ಥಳೀಯ ವಿರಳ ತರಕಾರಿ ತಳಿಗಳನ್ನು ಭದ್ರ ಪಡಿಸಿದ್ದಾರೆ. ಅವರ ಕೃಷಿ ಭೂಮಿ ʼ ಹರಿಯಾಲಿ ಸೀಡ್ಸ್ʼ ಮೂಲಕ ಹಲವು ಬೀಜ ಸಂರಕ್ಷಕರು, ರೈತರು ಮತ್ತು ನಗರ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದವರಿಗೆ ನೆರವಾಗುತ್ತಿದ್ದಾರೆ, ಮರೆಯಾಗುತ್ತಿರುವ ಈ ವಿರಳ ತರಕಾರಿ ತಳಿಗಳ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಸಮಗ್ರವಾಗಿ ದುಡಿಯುತ್ತಿದ್ದಾರೆ.
ರೆಸ್ಟರಂಟ್ ಸಂಸ್ಕೃತಿಗೆ ಸ್ಫೂರ್ತಿಯಾದ ತರಕಾರಿ ಬೆಳೆ
ನಮೀತ್ ಎಮ್, ಸಕುರ ಫ್ರೆಶ್
‘ಫಸ್ಟ್ ಆಗ್ರೋ’, ಪ್ರಾರಂಭಿಸಲು ಮೂಲ ಕಾರಣವೇನು ಮತ್ತು ಆಸ್ವಾದಕ್ಕಾಗಿ ಬೆಳೆಯುವ ಸಸ್ಯಗಳನ್ನು ಬಳಸಿಕೊಂಡು ಬೆಂಗಳೂರಿನ ಅಡಿಗೆ ಭಟ್ಟರು ಮತ್ತು ರೆಸ್ಟೋರೆಂಟ್ ಗಳು ವಿವಿಧ ಆಹಾರವನ್ನು ತಯಾರಿಸಿ ಬಡಿಸುವ ಬಗೆಗೆ, ನಮೀತ್, ವಿವರಣೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.
ನಮೀತ್, ʼಫಸ್ಟ್ ಆಗ್ರೋʼ ದ ಸಹ-ಸಂಸ್ಥಾಪಕರು ಮತ್ತು ಚೀಫ್ ಪ್ರೊಡಕ್ಷನ್ ಹೆಡ್ (ಉತ್ಪಾದನಾ ಮುಖ್ಯಸ್ಥರು) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ರೈತರು ಮತ್ತು ವಿಮಾನ ಚಾಲಕರು, ಎರಡು ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ನಮೀತ್ ತರಕಾರಿ ಸಂಸ್ಕರಣೆ, ಭೂರಹಿತ ಬೆಳೆ ವರ್ಧನೆ ಮತ್ತು ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಯಲ್ಲಿ ಪರಿಣಿತರು. ಬ್ರಿಟಿಷ್ ಕೊಲಂಬಿಯ, ಕ್ಯನಡಾ ಮುಂತಾದ ವಾಣಿಜ್ಯ ಬೆಳೆಗಾರರೊಂದಿಗೆ ಹಲವು ವರ್ಷಗಳ ಕಾಲ ಸತತವಾಗಿ ನೇರ ಅನುಭವ ಪಡೆದಿದ್ದಾರೆ, ನೈಸರ್ಗಿಕ ಪದ್ಧತಿಯಿಂದ ವಿಶ್ವ ಮಟ್ಟದಲ್ಲಿ ಕೀಟನಾಶಕ ರಹಿತ ಬೆಳೆಗಳ ಅಭಿವೃದ್ಧಿ ಕಾರ್ಯದ ಮುಂಚೂಣಿಯಲ್ಲಿದ್ದಾರೆ.
ಸಸ್ಯ ಆಧಾರಿತ ಉತ್ಪನ್ನಗಳ ನಗರಿ
ಸ್ಪೂರ್ತಿ ರವಿ, ಗುಡ್ ಮಿಲ್ಕ್ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರು
ಬೆಂಗಳೂರಿನ ಸಸ್ಯಾಹಾರ ಚಳುವಳಿಯ ಇತಿಹಾಸವನ್ನು ನಮ್ಮೊಂದಿಗೆ ಸ್ಪೂರ್ತಿ ಹಂಚಿಕೊಳ್ಳುತ್ತಾರೆ, ಸಸ್ಯಾಹಾರಕ್ಕೆ ಸಂಬಂಧಿಸಿದಂತೆ ವಿವಿಧ ಪರಿಭಾಷೆಗಳನ್ನು ಕುರಿತು ಮಾತನಾಡುತ್ತಾರೆ. ಬೆಂಗಳೂರು ನಗರದಲ್ಲಿ ಪರಿಸರ ಸಂರಕ್ಷಿಸಿ, ಪೌಷ್ಟಿಕಾಂಶವನ್ನು ಕಾಯ್ದುಕೊಂಡು ಸಸ್ಯಗಳಿಂದ ಸೃಜನಾತ್ಮಕವಾಗಿ ಉತ್ಪಾದಿಸಲಾಗುವ ಹಲವು ತಿನಿಸುಗಳು , ವಸ್ತುಗಳ ಬಗೆಗೆ ದೃಷ್ಟಿ ಹರಿಸುತ್ತಾರೆ.
ಸ್ಪೂರ್ತಿ, ಭಾರತ ದೇಶದ ಬೆಂಗಳೂರಿನಲ್ಲಿ ಬೆಳೆದವರು. ಇವರು ತಮ್ಮ ಬಾಲ್ಯವನ್ನು ಕೃಷಿ ಭೂಮಿ ಮತ್ತು ತೋಟಗಳಲ್ಲಿ ಕಳೆದಿರುತ್ತಾರೆ, ಆಹಾರ, ಸ್ವಾದ ಹಾಗೂ ಬೆಳೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದಾರೆ. ಇವರು ಹಲವು ದೇಶ ವಿದೇಶಗಳನ್ನು ಸುತ್ತಿದ್ದಾರೆ, ಸ್ಥಳೀಯ ಅಡಿಗೆ ವಿಧಾನವನ್ನು ಅರಿಯುವುದು ಇವರ ಮೂಲ ಹವ್ಯಾಸ. ಹಾಲಿಗೆ ಸಮನಾದ ಸಸ್ಯ ಮೂಲದ ಉತ್ಪನ್ನವನ್ನು ಅಭಿವೃದ್ಧಿ ಪಡಿಸಲು ಪ್ರಾರಂಭಿಸಿರುವ ಕಾರ್ಖಾನೆಯಾದ ʼಗುಡ್ ಮಿಲ್ಕ್ʼ ಸಂಸ್ಥೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈನು ಪದಾರ್ಥಗಳನ್ನು ಇಷ್ಟ ಪಡುವ, ಆದರೆ ಈ ಭೂಮಿ ಮತ್ತು ಇಲ್ಲಿನ ಜೀವರಾಶಿಗಳ ಬಗೆಗೆ ಕಾಳಜಿ ಇದ್ದು, ಸಸ್ಯ ಉತ್ಪನ್ನಗಳನ್ನು ಮಾತ್ರ ಸೇವಿಸುವ ಇಚ್ಛೆ ಹೊಂದಿರುವ ಜಾಗರೂಕ ಭಾರತೀಯ ಗ್ರಾಹಕರಿಗಾಗಿ ಇಂತಹ ಕ್ರಾಂತಿಕಾರಿ ಕೈಗಾರಿಕೆ ಪ್ರಾರಂಭವಾಗಿದೆ.
ನಿಮ್ಮ ಕೈ ಕೆಸರಾಗಿಸುವುದು ಹೇಗೆ – ವೀಡಿಯೋ ಮೂಲಕ
ಗೀತಾಂಜಲಿ ರಾಜಮಣಿ, ಫಾರ್ಮಿಜೆನ್
ನಮ್ಮ ಆಹಾರ ಪದ್ಧತಿಯ ಮೇಲೆ ತಂತ್ರಜ್ಞಾನವು ಹಲವು ವಿಧದಲ್ಲಿ ಪ್ರಭಾವ ಬೀರಿದೆ. ಗೀತಾಂಜಲಿಯವರು, ನಾವು ಸೇವಿಸುವ ಸಸ್ಯ ಸಂಪದಕ್ಕೆ ಹತ್ತಿರವಿರುವುದು ಹೇಗೆ ಸೂಕ್ತ ಎಂಬ ಅರಿವನ್ನು ಮೂಡಿಸಿ ʼಫಾರ್ಮಿಜೆನ್ʼ ಕಾರ್ಯಾಚರಣೆಯ ಬಗೆಗೆ ಹೆಚ್ಚು ಮಾಹಿತಿ ನೀಡುತ್ತಾರೆ. ಗೀತಾಂಜಲಿ ರಾಜಮಣಿ, ʼಫಾರ್ಮಿಜೆನ್ʼ ಸಂಸ್ಥೆಯ ಸಹ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕೃಷಿ-ತಂತ್ರಜ್ಞಾನ ಕಂಪನಿಯ ಮೂಲಕ ರೈತರು ಮತ್ತು ಗ್ರಾಹಕರ ನಡುವಣ ನೇರ ಸಂಪರ್ಕ ಕಲ್ಪಿಸಲು ಶ್ರಮ ವಹಿಸಿದ್ದಾರೆ. ಇವರು “ಗ್ರೀನ್ ಮೈ ಲೈಫ್”, ನಗರ ತೋಟಗಾರಿಕೆ ಮತ್ತು ಭೂ ವಿನ್ಯಾಸ ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರವಹಣಾ ಅಧಿಕಾರಿಗಳು ಸಹ. ಇವರು ಉದ್ದಿಮೆಯಲ್ಲಿ ತೊಡಗುವ ಮುನ್ನ 12 ವರ್ಷಗಳ ಕಾಲ, ಬೃಹತ್ ಪ್ರಮಾಣದ ಔಷದಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ಸಂಶೋಧನೆಯಲ್ಲಿ ತೊಡಗಿದ್ದರು. ʼಅಂತರ್ರಾಷ್ಟ್ರೀಯ ನಿರ್ವಹಣೆʼ ವಿಷಯದಲ್ಲಿ ಎಂ.ಬಿ.ಎ ಪದವಿ ಪಡೆದಿದ್ದಾರೆ. ಇವರು ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ , ಹೈದರಾಬಾದ್ ಸಂಸ್ಥಾನದ ಗೋಲ್ಡ್ಮನ್ ಸಾಶ್ 10,000 ವಿಮನ್ ಪ್ರೊಗ್ರಾಮ್, 2016 ಬ್ಯಾಚ್ ನ ವಿದ್ಯಾರ್ಥಿನಿ. ಜಾಗತಿಕ ಮಟ್ಟದಲ್ಲಿ, 2018 ರ ಸಾಲಿನ ʼಫಾರ್ಚೂನ್ ಆಂಡ್ ಗೋಲ್ಡ್ಮನ್ ಸಾಶ್ ಗ್ಲೋಬಲ್ ವಿಮನ್ ಲೀಡರ್ʼ ಪುರಸ್ಕಾರ ಪಡೆದಂತಹ ಇಬ್ಬರು ಮಹಿಳೆಯರಲ್ಲಿ, ಇವರು ಒಬ್ಬರು.
ನಗರ ಅನ್ವೇಷಕ
ತಾನ್ಶಾ ಒಹ್ರಾ, ಪರ್ಮಾಕಲ್ಚರಿಸ್ಟ್
ನಗರದಲ್ಲಿ ಆಹಾರಕ್ಕಾಗಿ ಸಸ್ಯಗಳನ್ನು ಹುಡುಕಿ ಆರಿಸಿಕೊಳ್ಳುವುದು ಸಹ ಒಂದು ಕಲೆ. ನಮ್ಮ ಪರಿಸರ ಹಾಗೂ ಜನರೊಂದಿಗೆ ಅರಿತು ಬೆರೆತು ಸಸ್ಯ ಸಂಪದದೊಡನೆ ಒಡನಾಡುತ್ತಾ ಅವುಗಳ ವೈಜ್ಞಾನಿಕ ಹೆಸರು ಮತ್ತು ಗುಣ, ಸ್ವಾದಗಳನ್ನು ಅರಿತು, ಅಡಿಗೆಯಲ್ಲಿ ಬಳಸುವ ವಿಧಾನವನ್ನು ಕಂಡುಕೊಳ್ಳಬೇಕು. ಯಾವ ಸಸ್ಯಗಳನ್ನು ನಾವು ಸೇವಿಸಬಹುದು ಎಂದು ತಿಳಿದುಕೊಳ್ಳುಲು ವಿಭಿನ್ನವಾಗಿ ನಗರ ಅನ್ವೇಷಣೆ ಕಾರ್ಯ ದಲ್ಲಿ ತೊಡಗಿದ್ದಾರೆ.
ತಾನ್ಶಾ ಒಹ್ರಾ ಅವರು ಪ್ರಸಕ್ತ ನಗರದ ಗಡಿಬಿಡಿಯ ನಡುವೆಯೂ ಮಾನವ ಸಹಜ ರೀತಿಯಲ್ಲಿ ಪರಿಹಾರ ಅರಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಗರದಲ್ಲಿನ ತಮ್ಮ ಪೂರ್ಣ ಪ್ರಮಾಣದ ವೃತ್ತಿಯನ್ನು ತೊರೆದು ಸಹಜ ಕೃಷಿಯ ಅಭ್ಯಾಸ ನೆಡೆಸುತ್ತಿದ್ದಾರೆ. ಗೋವಾದ ಸಹಜಕೃಷಿ ತಾಣಕ್ಕೆ ತೆರಳಿ ಒಂದು ವರ್ಷ ಕೆಲಸ ಸಲ್ಲಿಸಿ, ತಾರಸಿಯಲ್ಲಿ ತಮ್ಮ ಆಹಾರವನ್ನು ತಾವೇ ಬೆಳೆದುಕೊಳ್ಳುತ್ತಿದ್ದಾರೆ. ಇವರು ಬರಹಗಾರರು, ಆಹಾರ ಸೇವಿಸುವ ಮುನ್ನ ಅದರ ಪೂರ್ಣ ಮಾಹಿತಿ ಪಡೆಯುತ್ತಾರೆ.
ಅಧ್ಯಯನ ಸೂಚಿ -
ಹೂ ಫೀಡ್ಸ್ ಬೆಂಗಳೂರು? ಬೆಂಗಳೂರು ಸಸ್ಟೇನಬಿಲಿಟಿ ಫೋರಮ್ʼ ಸಹಾಯ ವತಿಯಿಂದ ಹಾಗೂ ʼಎಡಿಬಲ್ ಇಶ್ಯೂಸ್ʼ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ.
‘ಬೆಂಗಳೂರು ಸಸ್ಟೇನಬಿಲಿಟಿ ಫೋರಮ್’, ನಗರದೊಳಗೆ ಹಾಗೂ ನಗರ ಅಂಚಿನ ಭೂಭಾಗಳಲ್ಲಿ ಬಹುಕಾಲದ ವರೆಗೂ ಪರಿಣಮಿಸಬಹುದಾದ ಅನೇಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ವಿಭಿನ್ನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟ. ನೀರು, ಗಾಳಿ ಮತ್ತು ಮಣ್ಣನ್ನು ಒಳಗೊಂಡು, ಇವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಂಪತ್ತು ಹಾಗೂ ನಗರದ ಸರ್ವಮಾನ್ಯ ಸಾಮಗ್ರಿಗಳ ಅಧ್ಯಯನ ಮಾಡುತ್ತಿದ್ದಾರೆ.
‘ಎಡಿಬಲ್ ಇಶ್ಯೂಸ್’ ಆಹಾರ ಕೂಟವಾಗಿದ್ದು , ಹೊಸ ರೀತಿಯಲ್ಲಿ ಭಾರತೀಯ ಆಹಾರ ಪದ್ಧತಿಯ ಬಗೆಗೆ ಚಿಂತನೆ ಅಧ್ಯಯನ ನೆಡೆಸಿದ್ದಾರೆ, ಸಂಶೋಧನೆ, ಒಕ್ಕೂಟ, ಸಭೆಗಳ ಸಂಯೋಜನೆ ಮುಂತಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸಹಭಾಗಿತ್ವ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ .