WFB_thumbnail_WFB Website.png

ಋತುಗಳಿಗೆ ಅನ್ವಯಿಸುವ ಸಸ್ಯಗಳನ್ನು ಬಳಸಿಕೊಂಡು, ತಯಾರಿಸಿದ  ತಿನಿಸಿನೊಂದಿಗೆ , ನಗರ ಮತ್ತು ನಿಮ್ಮ ನಡುವಣ ನಂಟಿನ ವಿಚಾರ ವಿಮರ್ಶೆ.

ಎರಡನೇ ದಿನ: ‘ಕುಕ್‌ ಅಲಾಂಗ್‌’ ಕಾರ್ಯಾಗಾರ  ನಿರ್ವಹಣೆ


Team Lore_final.jpg

‘ಲೋರ್’  ಸಂಸ್ಥೆಯಿಂದ ಚೆಫ್‌ ಜಾನ್ಸನ್‌, ಚೆಫ್‌ ಮೈತ್ರೇಯಿ, ಚೆಫ್‌ ಅವಿನಾಶ್‌ ಅವರೊಂದಿಗೆ ವೀಡಿಯೋ ಕರೆಯ ಮೂಲಕ ʼಕುಕ್‌ ಅಲಾಂಗ್‌ ʼ ಕಾರ್ಯಾಗಾರ  ಸಂಯೋಜಿಸಲಾಗಿದೆ. ವೃತ್ತಿಪರ ಬಾಣಸಿಗರು , ಜಾನಪದ ಸಂಪದ ಗಾಥೆಯೊಂದಿಗೆ ತಿನಿಸುಗಳನ್ನು ತಯಾರಿಸುವ ವಿಧಾನವನ್ನು ಅರಿಕೆ ಮಾಡಿ ಕೊಡುತ್ತಾರೆ. ಈ ಮೇಳದಲ್ಲಿ ಸಹಭಾಗಿಗಳಿಂದ  ಹಲವು ಹೊಸ ರುಚಿಕರ ಅಡಿಗೆ, ಜಾನಪದ ಮತ್ತು ಗಾಥೆಗಳನ್ನು ಸಂಗ್ರಹಿಸಿ ವಿಶೇಷ ಪುಸ್ತಕ ರೂಪದಲ್ಲಿ ಸಂಕಲನ ಮಾಡಲಾಗುವುದು.

ಋತು ಕಾಲಿಕ ಮಾಹಿತಿ ಪಟ್ಟಿ:

‘ಕುಕ್‌ ಅಲಾಂಗ್‌’ ಕಾರ್ಯಕ್ರಮದ ಅಂಗವಾಗಿ, ಹರಿಯಾಲಿ ಸೀಡ್ಸ್‌ ಸಂಸ್ಥೆಯ ಡಾ.ಪ್ರಭಾಕರ್‌ ರಾವ್‌, ಇವರ ಸಹಭಾಗಿತ್ವದಲ್ಲಿ ಈ ಋತು-ಕಾಲಿಕ ಮಾಹಿತಿಪಟ್ಟಿಯನ್ನು ತಯಾರಿಸಿದ್ದು, ಬೆಂಗಳೂರಿನಲ್ಲಿ ಶ್ರಾವಣ ಮಾಸದಲ್ಲಿ ದೊರೆಯುವ ಕೃಷಿ ಉತ್ಪನ್ನಗಳ  ವಿವರಣೆಯನ್ನು ಒಳಗೊಂಡಿರುತ್ತದೆ.  ಜೊತೆಗೆ, ಈ ಉತ್ಪನ್ನಗಳನ್ನು ಒದಗಿಸುವ ಸ್ಥಳೀಯ ಉತ್ಪಾದಕರ ಪಟ್ಟಿಯೂ ಲಭ್ಯವಿರುತ್ತದೆ.  ಈ ಸಾಮಗ್ರಿಗಳನ್ನು ಖರೀದಿಸಲು, ಅವುಗಳು ದೊರೆಯುವ ಸ್ಥಳ ಮತ್ತು ಪಡೆಯುವ ಬಗೆಯನ್ನು ಅರಿಯಲು  ಈ ಲಿಂಕ್‌ ಸಹಾಯಕ.

ಋತು ಕಾಲಿಕ ಮಾಹಿತಿ ಪಟ್ಟಿಯನ್ನು ಡೌನ್ಲೋಡ್‌ ಮಾಡಲು ಇಲ್ಲಿಗೆ ಭೇಟಿ ನೀಡಿ.

ಕಾರ್ಯಾಗಾರ ತಯಾರಿ

  • ಋತು ಕಾಲಿಕ ಮಾಹಿತಿ ಪಟ್ಟಿಯನ್ನು ವೀಕ್ಷಿಸಿ.

  • ನಿಮಗೆ ಬೇಕಾಗುವ ಸಾಮಗ್ರಿಗಳನ್ನು ಅಣಿ ಮಾಡಿಕೊಳ್ಳಿ.

  • ʼಕುಕ್‌ ಅಲಾಂಗ್‌ ʼ ದಿನದಂದು ಸರಿಯಾದ ಇಂಟರ್ನೆಟ್‌ ಸಂಪರ್ಕ ಕಲ್ಪಿಸಿಕೊಳ್ಳಿ.

  • ‘ಕುಕ್‌ ಅಲಾಂಗ್‌ ʼ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಿಮ್ಮ ಪ್ರತಿಕ್ರಿಯೆಯನ್ನು ನಂತರ ಕಳುಹಿಸಿ


ಹೂ ಫೀಡ್ಸ್‌ ಬೆಂಗಳೂರು ? (ಬೆಂಗಳೂರಿಗೆ ಆಹಾರವನ್ನು ಒದಗಿಸುವವರು ಯಾರು ?) ಬೆಂಗಳೂರು ಸಸ್ಟೇನಬಿಲಿಟಿ ಫೋರಮ್‌ʼ ಸಹಾಯ ವತಿಯಿಂದ ಹಾಗೂ ʼಎಡಿಬಲ್‌ ಇಶ್ಯೂಸ್‌ʼ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ.

‘ಬೆಂಗಳೂರು ಸಸ್ಟೇನಬಿಲಿಟಿ ಫೋರಮ್‌ʼ, ನಗರದೊಳಗೆ ಹಾಗೂ ನಗರ ಅಂಚಿನ ಭೂಭಾಗಳಲ್ಲಿ ಬಹುಕಾಲದ ವರೆಗೂ ಪರಿಣಮಿಸಬಹುದಾದ ಅನೇಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ವಿಭಿನ್ನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟ. ನೀರು, ಗಾಳಿ ಮತ್ತು ಮಣ್ಣನ್ನು ಒಳಗೊಂಡು, ಇವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಂಪತ್ತು ಹಾಗೂ ನಗರದ ಸರ್ವಮಾನ್ಯ  ಸಾಮಗ್ರಿಗಳ ಅಧ್ಯಯನ ಮಾಡುತ್ತಿದ್ದಾರೆ.

‘ಎಡಿಬಲ್‌ ಇಶ್ಯೂಸ್’  ಆಹಾರ  ಕೂಟವಾಗಿದ್ದು ,  ಹೊಸ ರೀತಿಯಲ್ಲಿ  ಭಾರತೀಯ ಆಹಾರ ಪದ್ಧತಿಯ ಬಗೆಗೆ ಚಿಂತನೆ ಅಧ್ಯಯನ ನೆಡೆಸಿದ್ದಾರೆ, ಸಂಶೋಧನೆ, ಒಕ್ಕೂಟ, ಸಭೆಗಳ ಸಂಯೋಜನೆ ಮುಂತಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸಹಭಾಗಿತ್ವ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ .