ಹೂ ಫೀಡ್ಸ್ ಬೆಂಗಳೂರು?
ಆಹಾರ ಸಂಬಂಧಿ ವಿಷಯಗಳು | ಬೆಳಗ್ಗೆ 10:00 ಗಂಟೆ ಇಂದ | 22 ಮತ್ತು 23 ಆಗಸ್ಟ್ 2020
ಎರಡು ದಿನಗಳ ಈ ಅನ್ವೇಷಣೆಯು ಬೆಂಗಳೂರಿನ ಜನರಿಗೆ ಆಹಾರವನ್ನು ಒದಗಿಸುವ ವಿವಿಧ ಸಂಸ್ಥೆಗಳನ್ನು ಕುರಿತಾಗಿದೆ. ಇದು ಸಹಭಾಗಿತ್ವ ಸಂಶೋಧನಾ ಯೋಜನೆಯಾಗಿದ್ದು, ಸಮುದಾಯ ಚಿಂತನೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.
ಸೆಂಟಿನಲ್ಸ್ ಆಫ್ ಲೇಕ್
ಸುಮಿತಾ ಭಟ್ಟಾಚಾರ್ಯ | ಸಂಜೆ 5:00 ಗಂಟೆ | 22 ಮತ್ತು 30 ಆಗಸ್ಟ್ 2020
ಜಲ ಸಸ್ಯಗಳು, ತೋಟಗಳಿಗೆ ಮತ್ತು ಅಕ್ವೇರಿಯಮ್ ಗಳಿಗೆ ಕಳೆಕಟ್ಟುವುದಲ್ಲದೆ ಪರಿಸರ ಸಮತೋಲನವನ್ನು ಕಾಪಾಡುವುದರಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ . ಕೆಲವು ತಳಿಗಳು ಸ್ಥಳೀಯ ಜಲ ಸಂಪನ್ಮೂಲಗಳಲ್ಲಿ ನೀರಿನ ಗುಣಮಟ್ಟವನ್ನು ಅರಿಯಲು ಸಹಾಯಕವಾಗಿವೆ. ಸುಮಿತಾ ಭಟ್ಟಾಚಾರ್ಯ ಇವರು, “ಎಟ್ರೀ”(ಎ.ಟಿ.ಆರ್.ಈ.ಈ) ಸಂಸ್ಥೆಯಲ್ಲಿ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು , ನೀರಿನ ಗುಣಮಟ್ಟವನ್ನು ಜೀವಸೂಚಕಗಳ ಮೂಲಕ ಹೇಗೆ ಕಂಡುಕೊಳ್ಳ ಬಹುದು ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ವೈಲ್ಡರ್ನೆಸ್ ಆಟ್ ಹೋಮ್
ಖುಶ್ ಸೇಥಿ ಬೆಳಗ್ಗೆ | 10:00 ಗಂಟೆಗೆ | 29 ಆಗಸ್ಟ್ 2020
ಲಾಕಡೌನ್ ಘೋಷಣೆಯಾದಾಗಿನಿಂದ ನಮ್ಮಲ್ಲಿ ಹಲವರು ಹೊರ ಪ್ರಪಂಚದಿಂದ ದೂರಾಗಿದ್ದೇವೆ. ಪರಿಸರ ಸಹಜ ತೋಟಗಾರಿಕೆ ಮತ್ತು ನಗರ ಕಳೆ ಸಂಗ್ರಾಹಕರಾದ ಖುಶ್ ಸೇಥಿ ಅವರು , ಮನೆಯಂಗಳದಲ್ಲಿಯೇ ಪ್ರಕೃತಿಯ ಅನ್ವೇಷಣೆಯಲ್ಲಿ ಭಾಗಿಯಾಗುವುದು ಹೇಗೆ ಎಂದು ತಿಳಿಸುತ್ತಾರೆ.
ಸಸ್ಟೇನಬಲ್ ಡಾರ್ಕ್ ರೂಂ ಪ್ರಾಜೆಕ್ಟ್
ಹಾನ್ನ್ಹಾ ಫ್ಲೆಚರ್ | ಮಧ್ಯಾಹ್ನ 2:00 ಗಂಟೆ | 29 ಆಗಸ್ಟ್ 2020
ಛಾಯಾಚಿತ್ರ ಸಂವರ್ಧನೆಯು ಒಂದು ಕಲೆ, ಫಿಲ್ಮ್ ಅಥವಾ ಕಾಗದವನ್ನು ರಾಸಾಯನಿಕ ಪ್ರಕ್ರಿಯೆಗೆ ಒಳ ಪಡಿಸಿ ನಂತರ ಬೆಳಕಿಗೆ ತಂದು ಛಾಯಾಚಿತ್ರ ರೂಪಗೊಳ್ಳುತ್ತದೆ. ನೀವು ಎಂದಾದರೂ ಇಂತಹ ಛಾಯಾಚಿತ್ರ ಸಂವರ್ಧನೆ ಮಾಡುವ ಕತ್ತಲೆ ಕೋಣೆಗೆ ಭೇಟಿ ಕೊಟ್ಟಿದ್ದರೆ, ಅಲ್ಲಿನ ರಾಸಾಯನಿಕ ಆಮ್ಲಗಳಿಂದ ಹೊರಹೊಮ್ಮುವ ತೀಕ್ಷ್ಣ ಘಾಟು, ದುರ್ವಾಸನೆನ್ನು ಸೇವಿಸಿರಬಹುದು. ಸಸ್ಯ ಮೂಲದ ರಾಸಾಯನಿಕಗಳನ್ನು ಬಳಸಿ ಇಂತಹ ಛಾಯಾಚಿತ್ರ ರೂಪಗಳನ್ನು ಸೃಜಿಸುವಂತಾದರೆ ಹೇಗಿರುತ್ತದೆ?
ಹಾನ್ನ್ಹಾ ಫ್ಲೆಚರ್ , ʼಲಂಡನ್ ಆಲ್ಟರ್ನೇಟಿವ್ ಫೋಟೋಗ್ರಫಿ ಕಲೆಕ್ಟೀವ್ʼ ಕತ್ತಲು ಕೋಣೆಯ ಸ್ವಸ್ಥಿರ ಯೋಜನೆಯಡಿಯಲ್ಲಿ ಸಸ್ಯ ಮೂಲದ ರಾಸಾಯನಿಕಗಳನ್ನು ಬಳಸಿ ಛಾಯಾಚಿತ್ರಗಳನ್ನು ಸೃಜಿಸುವ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಫಾರ್ ದಿ ಲವ್ ಆಫ್ ಪ್ಲಾಂಟ್ಸ್
ನಿರುಪಾ ರಾವ್ | ಬೆಳಗ್ಗೆ 10:00 ಗಂಟೆಗೆ | 30 ಆಗಸ್ಟ್ 2020
ಸಸ್ಯಶಾಸ್ತ್ರ ಕಲಾರಂಗವು ವಿಜ್ಞಾನ ಮತ್ತು ಕಲೆಯ ಬಹು ಮುಖ ಸಂಗಮವಾಗಿದೆ. ಸಸ್ಯಶಾಸ್ತ್ರ ಚಿತ್ರಕಾರರು ಸಸ್ಯಗಳ ತಾಣ, ರೂಪ, ರಚನೆ, ಬಣ್ಣ, ಆಕಾರ, ಜೀವನ ಚಕ್ರ ಹೀಗೆ ಹತ್ತು ಹಲವು ಬಗೆಯಲ್ಲಿ ಸಸ್ಯ ಅಧ್ಯಯನ ನೆಡೆಸುವುದಲ್ಲದೇ ಮನಸೂರೆಗೊಳ್ಳುವ ಪ್ರತಿರೂಪಗಳನ್ನೂ ಸೃಷ್ಟಿಸುತ್ತಾರೆ . ಶತ ಶತಮಾನಗಳಿಂದ ನೆಡೆದು ಬಂದ ವೈಜ್ಞಾನಿಕ ಕಲಾ ಪರಂಪರೆ ಇದಾಗಿದೆ.
ನಿರುಪಾ ರಾವ್ ಒಬ್ಬ ಸಸ್ಯಶಾಸ್ತ್ರ ಚಿತ್ರಕಾರರು, ಸಸ್ಯದ ವಿಶೇಷ ವರ್ಣನೆಯನ್ನು ಪ್ರಸ್ತುತ ಪಡಿಸುತ್ತಾ ಸಹಭಾಗಿಗಳನ್ನು ತಮ್ಮೊಂದಿಗೆ ಈ ಪ್ರಕ್ರಿಯೆಯ ಕ್ರಮಾವಳಿಯ ಮೂಲಕ ಕರೆದೊಯ್ಯಲಿದ್ದಾರೆ.