ವೈಲ್ಡರ್ನೆಸ್ ಆಟ್ ಹೋಮ್
ಲಾಕಡೌನ್ ಘೋಷಣೆಯಾದಾಗಿನಿಂದ ನಮ್ಮಲ್ಲಿ ಹಲವರು ಹೊರ ಪ್ರಪಂಚದಿಂದ ದೂರಾಗಿದ್ದೇವೆ. ಪರಿಸರ ಸಹಜ ತೋಟಗಾರಿಕೆ ಮತ್ತು ನಗರ ಕಳೆ ಸಂಗ್ರಾಹಕರಾದ ಖುಶ್ ಸೇಥಿ ಅವರು , ಮನೆಯಂಗಳದಲ್ಲಿಯೇ ಪ್ರಕೃತಿಯ ಅನ್ವೇಷಣೆಯಲ್ಲಿ ಭಾಗಿಯಾಗುವುದು ಹೇಗೆ ಎಂದು ತಿಳಿಸುತ್ತಾರೆ.
ಖುಶ್ ಸೇಥಿ ಬೆಳಗ್ಗೆ 10:00 ಗಂಟೆಗೆ | 29 ಆಗಸ್ಟ್ 2020
ಈ ಕಾರ್ಯಾಗಾರವನ್ನು ಎರಡು ಭಾಗಗಳಲ್ಲಿ ನೆಡೆಸಲಾಗುತ್ತೆ:
ಅಡ್ಡಾಡುತ್ತಾ ಮಾತುಕತೆ
ಖುಶ್ ಸೇಥಿ ಅವರು , ಮನೆಯಂಗಳದ ಸಮಗ್ರ ಪರಿಚಯ ನೀಡುತ್ತಾ ಭವನ ನಿರ್ಮಾಣಕ್ಕೂ ಮೊದಲೇ ಆ ಜಾಗವು ಬೃಹತ್ ಜೀವ ಪರಿಸರದಲ್ಲಿರುವ ಸಣ್ಣ ಜೀವ ಪರಿಸರದ ದ್ಯೋತಕವಾಗಿದೆ ಎಂಬ ಸತ್ಯದ ಅರಿವು ಮೂಡಿಸುತ್ತಾರೆ. ಫೋನ್ ಕ್ಯಾಮರಾಗೆ ಲೆನ್ಸ್ ಅಳವಡಿಸಿಕೊಂಡು ತಮ್ಮ ಮನೆಯ ಬಾಲ್ಕನಿಯಿಂದಲೇ ಕುಂಡಗಳ ಒಳಗಿರುವ ಗೊಬ್ಬರ ಕಳೆ, ಗೊಬ್ಬರದ ಗುಂಡಿಯೊಳಗಿನ ನೋಟ, ಉಪ್ಪಿನ ಕಾಯಿ ಜಾಡಿಯೊಳಗೆ, ಪುಸ್ತಕ ಕಪಾಟಿನ ಹಿಂದೆ, ಛಾವಣಿಲ್ಲಿ ಹೀಗೆ ಹತ್ತು ಹಲವು ಕಡೆಯಲ್ಲಿ ಅಡಕವಾಗಿ ವಾಸವಾಗಿರುವ ಜೀವ ಪರಿಸರಗಳ ಪರಿಚಯ ಮಾಡಿಸುತ್ತಾರೆ. ಇಂತಹ ಸ್ಥಳೀಯ ಮಾರ್ಗದರ್ಶಹಿಕೆಗಳನ್ನು ಬಳಸಿಕೊಂಡು ಅವುಗಳು ಏನೆಲ್ಲಾ ಸೂಚಿಸುತ್ತವೆ ಎಂಬುದರ ಅರಿವು ಮೂಡಿಸುತ್ತಾರೆ.
ಬೇಕಾದ ಸಾಮಗ್ರಿಗಳು
ಭೂತ ಕನ್ನಡಿ
ಬೈನಾಕುಲಾರ್ (ದೂರದರ್ಶಕ)
ಸ್ಥಳೀಯ ಸಸ್ಯ/ಪಕ್ಷಿ ವೀಕ್ಷಣ ಮಾರ್ಗದರ್ಶಿ
ಮನೆಯಲ್ಲಿಯೇ ಹೆಕ್ಕಿ ಒಟ್ಟುಗೂಡಿಸಿದ ಸಾಮಗ್ರಿಗಳಿಂದ ನೀವೇ ಬೆಳೆಯಿರಿ
ಇದು ಪ್ರಾಯೋಗಿಕ ಚಟುವಟಿಕೆ. ನಿಮ್ಮ ಕೆಲಸಗಳಿಗೆ ಅನುಕೂಲಕರವಾದ ಇಲ್ಲವೇ ನಿಮ್ಮ ತೋಟದಲ್ಲಿ ಬಳಸಬಹುದಾದ ಕುಂಡದ ವಿನ್ಯಾಸ ಕಾರ್ಯ .
ಬೇಕಾಗುವ ಸಾಮಗ್ರಿಗಳು
ಗಿಡಗಳನ್ನು ಬೆಳೆಯಲು ಕುಂಡಗಳು
ಗಿಡ ಬೆಳೆಯಲು ಸಹಕಾರಿಯಾದ ಮಣ್ಣಿನ ಸಮ್ಮಿಶ್ರಣ- ಮಣ್ಣು, ತೆಂಗಿನ ನಾರಿನ ಪುಡಿ, ಗೊಬ್ಬರ, ಒಣ ಎಲೆಗಳು, ಸಣ್ಣ ಕಲ್ಲುಗಳು, ಕಾಫಿ ಇಲ್ಲವೇ ಚಹದ ಚರಟ
ಬಿತ್ತನೆ ಬೀಜಗಳು/ ಭೇರಿರುವ ಸಸಿಗಳು/ತುಂಡುಮಾಡಿ ನೆಡಲು ಯೋಗ್ಯವಾದ ಗಿಡದ ಕಾಂಡ
ಸಂಯೋಜಕರ ಪರಿಚಯ
ಖುಶ್ ಸೇಥಿ, ತೋಟಗಾರಿಕೆ ಮತ್ತು ಆಯ್ದು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿರುವ ಜೀವ ಪರಿಸರ ತಜ್ಞರು, ದೆಹಲಿಯ ನಿವಾಸಿ. ರಾಸಾಯನಿಕ ಶಾಸ್ತ್ರದಲ್ಲಿ ಔಪಚಾರಿಕ ಪ್ರಶಿಕ್ಷಣ ಪಡೆದಿದ್ದು, ನಂತರ ದೆಹಲಿ ರಿಡ್ಜ್ ನಲ್ಲಿ ಸಂಶೋಧನಾ ಕಾರ್ಯನಿರ್ವಹಿಸುವಾಗ ನಗರ ಜೀವ ಪರಿಸರದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ತರಬೇತಿ ಪಡೆದು, ನಂತರ ಸಸ್ಯ ವಿಜ್ಞಾನ ಮತ್ತು ತೋಟಗಾರಿಕೆಯಲ್ಲಿ ತೊಡಗಿದ್ದಾರೆ. ಸ್ವಯಂ ಪುನಃ ಚೇತನಗೊಳ್ಳುವ ಅರಣ್ಯ ಜೀವ ಪರಿಸರಗಳಿಂದ ಪ್ರೇರಣೆ ಪಡೆದ ಇವರು, ನಾಗರೀಕ ತೋಟಗಾರಿಕೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು, ಅವುಗಳನ್ನು ಸರಿಯಾಗಿ ತಿಳಿದುಕೊಂಡು ಸಮಸ್ಯೆಗಳ ಪರಿಹಾರಕ್ಕಾಗಿ , ಸ್ವಯಂ ಚೇತರಿಸಿಕೊಂಡು ಬೆಳೆಯುವ ವಿಧಾನಗಳನ್ನು ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.