ಸೆಂಟಿನಲ್ಸ್ ಆಫ್ ಲೇಕ್
ಜಲ ಸಸ್ಯಗಳು, ತೋಟಗಳಿಗೆ ಮತ್ತು ಅಕ್ವೇರಿಯಮ್ ಗಳಿಗೆ ಕಳೆಕಟ್ಟುವುದಲ್ಲದೆ ಪರಿಸರ ಸಮತೋಲನವನ್ನು ಕಾಪಾಡುವುದರಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತವೆ . ಕೆಲವು ತಳಿಗಳು ಸ್ಥಳೀಯ ಜಲ ಸಂಪನ್ಮೂಲಗಳಲ್ಲಿ ನೀರಿನ ಗುಣಮಟ್ಟವನ್ನು ಅರಿಯಲು ಸಹಾಯಕವಾಗಿವೆ. ಸುಮಿತಾ ಭಟ್ಟಾಚಾರ್ಯ ಇವರು, “ಎಟ್ರೀ”(ಎ.ಟಿ.ಆರ್.ಈ.ಈ) ಸಂಸ್ಥೆಯಲ್ಲಿ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು , ನೀರಿನ ಗುಣಮಟ್ಟವನ್ನು ಜೀವಸೂಚಕಗಳ ಮೂಲಕ ಹೇಗೆ ಕಂಡುಕೊಳ್ಳ ಬಹುದು ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
22 ಆಗಸ್ಟ್ ಸಂಜೆ 5.00 ಗಂಟೆ ಮತ್ತು | 30 ಆಗಸ್ಟ್ 2020 ಮಧ್ಯಾಹ್ನ 2 ಗಂಟೆ ಯ ವೇಳಾಪಟ್ಟಿ
ದಿನ 1: ಮಾಡಿ ತಿಳಿಯಿರಿ ಚಟುವಟಿಕೆ. ಸಹಭಾಗಿಗಳು ನೀರಿನ ಗುಣಮಟ್ಟವನ್ನು ಅರಿಯಲು ಜಲ ಸಸ್ಯಗಳನ್ನು ಬಳಸುವ ಬಗ್ಗೆ ಕಲಿಕೆ ನೆಡೆಸುತ್ತಾರೆ. ಬೆಂಗಳೂರಿನ ಹಲವು ಕೆರೆಗಳಲ್ಲಿ ದೊರಕುವ ಸಸ್ಯರಾಶಿಯ ಮತ್ತು ವಿವಿಧತೆಯ ಬಗ್ಗೆ ವಿವರಣೆ ಕಲೆ ಹಾಕಲು ಜನ ವಿಜ್ಞಾನದ ಲಾಭ ಪಡೆಯುವುದರ ಬಗ್ಗೆಯೂ ಚರ್ಚೆ ನೆಡೆಯುತ್ತದೆ.
ದಿನ 2: ಕಾರ್ಯಾಗಾರದಲ್ಲಿ ಜಲ ಸಸ್ಯಗಳ ವಿಶೇಷ ಕ್ಷಮತೆಯನ್ನು ಕುರಿತಂತೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ. ಒಳ್ಳೆಯ ಗುಣಮಟ್ಟದ ನೀರಿನಲ್ಲಿ ಬೆಳೆಯುವ ಸಸ್ಯಗಳು, ಹಾಗೂ ನೀರಿನ ಗುಣ ಮಟ್ಟ ಏರುಪೇರು ಆದಾಗ ಬೆಳೆಯುವ ಸಸ್ಯಗಳು, ನೀರಿನ ಗುಣ ಅವಗುಣಗಳನ್ನು ಸಸ್ಯಗಳ ಮೂಲಕ ತಿಳಿಯುವ ಬಗೆ ಮತ್ತು ಈ ಕಲೆಯನ್ನು ಹಲವು ದೇಶಗಳಲ್ಲಿ ಹೇಗೆ ಬಳಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು -
ದೊಡ್ಡ ಬಾಯಿ ಇರುವ ಬಿಳಿ ಅಥವಾ ತಿಳಿ ಬಣ್ಣದ ಪ್ಲಾಸ್ಟಿಕ್ ಪಾತ್ರೆ/ ಕುಂಡಗಳು, ( 6-10) ಸಂಖ್ಯೆ.
ನಿರ್ಧಿಷ್ಟ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರ, ಸಾರಜನಕ/ ರಂಜಕ/ ಪೊಟ್ಯಾಶಿಯಮ್/ ಎನ್.ಪಿ.ಕೆ 20-20-20
ಮಾನಕ ಟೇಬಲ್/ಟೀ ಚಮಚ
ನಲ್ಲಿಯ ನೀರು
ನಿಮ್ಮ ಸುತ್ತಮುತ್ತಲಿನ ಹತ್ತಿರದ ಕೆರೆ ಅಂಚಿನಲ್ಲಿ ಬೆಳೆದ / ನೀರಿನಲ್ಲಿ ತೇಲುವ ಸಣ್ಣ ಗಿಡಗಳು
ಉತ್ತಮ ಬೆಳಕು ಇರುವ ತಾರಸಿ ಅಥವಾ ಹೊರಾಂಗಣ
ಕ್ಯಾಮೆರಾ
ಮೂಲ ಲೇಖನ ಸಾಮಗ್ರಿ ( ಬರೆಯಲು ಪುಸ್ತಕ, ಪೆನ್, ಪೆಂಸಿಲ್, ಎರೇಸರ್, ಕತ್ತರಿ, ಪೇಪರ್ ಕಟರ್ )
ಪ್ಲಾಸ್ಟಿಕ್ ಕುಂಡ /ಪಾತ್ರೆಗಿಂತ ಸ್ವಲ್ಪ ಅಗಲವಿರುವ ಸುಮಾರು ಚೌಕಾಕಾರದ ಗಟ್ಟಿ ರಟ್ಟು
ಪೇಪರ್ ಪಿನ್ ಹಾಗೂ ಬೋರ್ಡ್ ಪಿನ್ ಗಳು
ಬೇರೆ ಬೇರೆ ಬಣ್ಣ ಇಲ್ಲವೇ ಗಾತ್ರದ ದಾರದ ಉಂಡೆ
ಸೆಲೋಟೇಪ್ ಇಲ್ಲವೇ ಗೋಂದು
1 ಎಮ್ ಎಮ್ ಏ4 ಗ್ರಾಫ್ ಪೇಪರ್ (ಪಾರದರ್ಶಕ ಪ್ಲಾಸ್ಟಿಕ್ ಶೀಟ್ ಹಾಗೂ ಪರಮನೆಂಟ್ ಮಾರ್ಕರ್ ಪೆನ್) (ಇವು ಇದ್ದರೆ ಬಹಳ ಉಪಯೋಗಕಾರಿ ಸಾಮಗ್ರಿಗಳು).
ಸಂಯೋಜಕರ ಪರಿಚಯ
ಸುಮಿತಾ ಭಟ್ಟಾಚಾರ್ಯಾ ಏಟ್ರೀ ಸಂಸ್ಥೆಯಲ್ಲಿ 2019 ರಿಂದ ಪಿ.ಎಚ್.ಡಿ ವ್ಯಾಸಂಗ ನೆಡೆಸುತ್ತಿದ್ದು, ಸದ್ಯದಲ್ಲಿ ಜಲ ಪ್ರದೂಷಣ ಮತ್ತು ಈ ಸಂಬಂಧ ಬೆಂಗಳೂರಿನ ಕೆರೆಗಳ ನೀರಿನ ತಪಾಸಣೆ ಕ್ಷೇತ್ರದಲ್ಲಿ ಅಧ್ಯಯನ ಸಂಶೋಧನೆ ನೆಡೆಸುತ್ತಿದ್ದಾರೆ. ಇವರು ದೆಹಲಿ ವಿಶ್ವವಿದ್ಯಾಲಯ ದಿಂದ ಸಸ್ಯ ಶಾಸ್ತ್ರದಲ್ಲಿ ಸ್ನಾತಕ ಪದವಿ ಹಾಗೂ ಡೆಹ್ರಾಡೂನ್ ನ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ (ಅರಣ್ಯ ಸಂಶೋಧನಾ ಸಂಸ್ಥೆ) ಯಿಂದ ಪರಿಸರ ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಲ ಪ್ರದೂಷಣ, ಜನಮನವನ್ನು ಒಗ್ಗೂಡಿಸಿಕೊಂಡು ಜೈವಿಕ ಸೂಚಕಗಳ ಬಳಕೆಯಿಂದ ನೀರಿನ ಗುಣಮಟ್ಟದ ತಪಾಸಣೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ.