ಫಾರ್ ದಿ ಲವ್ ಆಫ್ ಪ್ಲಾಂಟ್ಸ್
ಸಸ್ಯಶಾಸ್ತ್ರ ಕಲಾರಂಗವು ವಿಜ್ಞಾನ ಮತ್ತು ಕಲೆಯ ಬಹು ಮುಖ ಸಂಗಮವಾಗಿದೆ. ಸಸ್ಯಶಾಸ್ತ್ರ ಚಿತ್ರಕಾರರು ಸಸ್ಯಗಳ ತಾಣ, ರೂಪ, ರಚನೆ, ಬಣ್ಣ, ಆಕಾರ, ಜೀವನ ಚಕ್ರ ಹೀಗೆ ಹತ್ತು ಹಲವು ಬಗೆಯಲ್ಲಿ ಸಸ್ಯ ಅಧ್ಯಯನ ನೆಡೆಸುವುದಲ್ಲದೇ ಮನಸೂರೆಗೊಳ್ಳುವ ಪ್ರತಿರೂಪಗಳನ್ನೂ ಸೃಷ್ಟಿಸುತ್ತಾರೆ . ಶತ ಶತಮಾನಗಳಿಂದ ನೆಡೆದು ಬಂದ ವೈಜ್ಞಾನಿಕ ಕಲಾ ಪರಂಪರೆ ಇದಾಗಿದೆ.
ನಿರುಪಾ ರಾವ್ ಒಬ್ಬ ಸಸ್ಯಶಾಸ್ತ್ರ ಚಿತ್ರಕಾರರು, ಸಸ್ಯದ ವಿಶೇಷ ವರ್ಣನೆಯನ್ನು ಪ್ರಸ್ತುತ ಪಡಿಸುತ್ತಾ ಸಹಭಾಗಿಗಳನ್ನು ತಮ್ಮೊಂದಿಗೆ ಈ ಪ್ರಕ್ರಿಯೆಯ ಕ್ರಮಾವಳಿಯ ಮೂಲಕ ಕರೆದೊಯ್ಯಲಿದ್ದಾರೆ.
ನಿರುಪಾ ರಾವ್ | ಬೆಳಗ್ಗೆ 10:00 ಗಂಟೆಗೆ | 30 ಆಗಸ್ಟ್ 2020
ಬೇಕಾಗುವ ಸಾಮಗ್ರಿಗಳು
ಬಿಳಿ ಕಾಗದ
ಪೆನ್, ಪೆನ್ಸಿಲ್, ಎರೇಸರ್, ಶಾರ್ಪನರ್
ರೂಲರ್
ಸಹ ಲೇಖನ ಸಾಮಗ್ರಿ (ಪೆನ್, ಬಣ್ಣದ ಪೆನ್ಸಿಲ್, ವಿವಿಧ ಬಣ್ಣಗಳು)
ಒಂದು ಹೂವು/ಎಲೆ/ಸುಲಭದಲ್ಲಿ ದೊರಕುವ ಯಾವುದೇ ಸಸ್ಯ
ಸಂಯೋಜಕರ ಪರಿಚಯ
ನಿರುಪಾ ರಾವ್ ಬೆಂಗಳೂರಿನ ಸಸ್ಯಶಾಸ್ತ್ರ ಚಿತ್ರಕಾರರು. ಇವರು ನ್ಯಾಶನಲ್ ಜಿಯೋಗ್ರಾಫಿಕ್ ಅನ್ವೇಷಕರು, ತಮ್ಮ ಪುಸ್ತಕ ʼಹಿಡನ್ ಕಿಂಗ್ಡಮ್-ಫಂಟಾಸ್ಟಿಕಲ್ ಪ್ಲಾಂಟ್ಸ್ ಆಫ್ ವೆಸ್ಟರ್ನ್ ಘಾಟ್ಸ್ʼ ಕ್ಕೆ ಅನುದಾನ ಪಡೆದಿದ್ದಾರೆ. ನೇಚರ್ ಕಂಜರ್ವೇಶನ ಫೌಂಡೇಶನ್ ನ ಪ್ರಕೃತಿ ವಿಜ್ಞಾನಿಗಳಾದ ದಿವ್ಯಾ ಮುದಪ್ಪ ಮತ್ತು ಟಿ.ಆರ್ ಶಂಕರ್ ಅವರ ಸಹಭಾಗಿತ್ವದಲ್ಲಿ , ʼಪಿಲ್ಲರ್ಸ್ ಆಫ್ ಲೈಫ್-ಮಗ್ನಿಫಿಸೆಂಟ್ ಟ್ರೀಸ್ ಆಫ್ ವೆಸ್ಟರ್ನ್ ಘಾಟ್ಸ್ʼ ಎಂಬ ಕೃತಿಯನ್ನು ಸಹ ಪ್ರಕಾಶಿಸಿದ್ದಾರೆ. ಇವರು ಅಮಿತವ್ ಘೋಶ್ ಅವರ ಇತ್ತೀಚಿನ ಕಾದಂಬರಿ, ʼ ಗನ್ ಐಲಾಂಡ್ʼ ಪುಸ್ತಕದ ಹೊರ ಆವರಣವನ್ನು ಚಿತ್ರಿಸಿದ್ದಾರೆ. ಮತ್ತು ಪೆಂಗ್ವಿನ್-ರಾಂಡಮ್ ಹೌಸ್ ನ ನಾಲ್ಕು ಮುಂಚಿನ ಕಾದಂಬರಿಗಳಿಗೆ ಹೊಸತಾಗಿ ಆವರಣ ಪುಟವನ್ನು ಚಿತ್ರಿಸಿದ್ದಾರೆ. ಇತ್ತೀಚೆಗೆ, ಇವರು, ಹಾರ್ವರ್ಡ್ ವಿಶ್ವವಿದ್ಯಾಲಯದ ಡಂಬರ್ಟನ್ ಓಕ್ಸ್ ಕೆಂದ್ರದಲ್ಲಿ ನೆಡೆದ ಸಸ್ಯ-ಮಾನವ ಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. “ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ “ ವತಿಯಿಂದ ಶಾಲೆಗೆ ಹೋಗುವ ಹಳ್ಳಿಗಾಡಿನ ಮಕ್ಕಳಿಗಾಗಿ ಹಮ್ಮಿಕೊಳ್ಳುವ ಪರಿಸರ ಶಿಕ್ಷಣ ಕಾರ್ಯಕ್ರಮ “ವೈಲ್ಡ್ ಶಾಲೆ” ಯಲ್ಲಿ ಸಹಭಾಗಿಯಾಗಿದ್ದಾರೆ.