‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ನೈಸರ್ಗಿಕವಾಗಿ ಸಂಘಟಿತವಾಗಿರುವ ಅತಿ ಸಾಮಾನ್ಯ ಎನಿಸುವ ವಸ್ತುಗಳಲ್ಲಿ ಸಹ ಜಟಿಲ ಗಣಿತಶಾಸ್ತ್ರ ಅಡಗಿದೆ. ಪ್ರಕೃತಿಯ ಪ್ರತಿಯೊಂದು ಚರಾಚರ ವಸ್ತು – ಜೀವಿಗಳಲ್ಲೂ , ಕಣ ಕಣದಲ್ಲೂ ಈ ಸಮರೂಪ ಸಮತೋಲನ ಗೋಚರಿಸುತ್ತದೆ. ಪ್ರಕೃತಿಯಲ್ಲಿನ ಈ ಸಾಮರಸ್ಯವನ್ನು ರೋಹಿಣಿ ದೇವಶರ್ ತಮ್ಮ ಕಲಾಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ.
1968 ರಲ್ಲಿ ಹಂಗೇರಿಯ ಜೀವವಿಜ್ಙಾನಿ ಹಾಗೂ ಸಸ್ಯಶಾಸ್ತ್ರಜ್ಞ, ಆರಿಸ್ಟಿಡ್ ಲಿನ್ಡೇನ್ ಮೇಯರ್ ಅವರು ಎಲ್-ಸಿಸ್ಟಮ್ಸ್ ಎಂಬ ಮಾದರಿ ರಚನೆಯನ್ನು ವಿಕಸನಗೊಳಿಸಿದರು. ಇದು ಮುಖ್ಯವಾಗಿ ಸಸ್ಯ ಬೆಳವಣಿಗೆಯ ಪ್ರಕ್ರಿಯೆಯನ್ನು ಅಧ್ಯನನ ಮಾಡುಲು ಬಳಸಲಾಗುವ ರೂಪರಚನೆ. ಪ್ರಕೃತಿಯ ಪ್ರತಿಯೊಂದು ವಸ್ತುವಿನಲ್ಲೂ ಒಂದು ಬಗೆಯ ಸಾಮ್ಯತೆ ಮತ್ತು ಏಕರೂಪತೆ ಇದೆ, ಈ ಸ್ವಸಾಮ್ಯ ರೂಪಗಳು ಒಟ್ಟಾದಾಗ ಅನೇಕ ಸಾಮ್ಯಸಂಕುಲಗಳು ನೈಸರ್ಗಿಕವಾಗಿ ಕಂಡುಬರುತ್ತವೆ. ಆದರೆ ಇಂತಹ ಕ್ರಮಾವಳಿಗೆ ಯಾವುದೇ ನಿರ್ದಿಷ್ಟ ಸೂತ್ರ ಇಲ್ಲ. ಹೀಗಾಗಿ ವೀಡಿಯೋ ಎಡಿಟಿಂಗ್ ಸಾಫ್ಟ್ ವೇರ್ ಬಳಸಿಕೊಂಡು 700 ಕ್ಕೂ ಹೆಚ್ಚು ಪ್ರತ್ಯೇಕ ವೀಡಿಯೋಗಳನ್ನು, ತಮ್ಮದೇ ರೀತಿಯಲ್ಲಿ ಕ್ರಮಬದ್ದವಾಗಿ ಒಂದರ ಮೇಲೊಂದರಂತೆ ಬಹುಪದರ ಆರೋಪಣೆ ಮಾಡುತ್ತಾರೆ, ಈ ಮೂಲಕ ಅದ್ಭುತವಾದ ಚತ್ರಸಂಕುಲಗಳ ವೃಂದದ ರಚನೆಯಾಗುತ್ತದೆ, ನೈಸರ್ಗಿಕವಾಗಿ ದೊರೆಯುವ ಸಸ್ಯ ರಚನೆಗಳು, ಜೀವಕೋಶಗಳು, ಮರ ಗಿಡಗಳು, ಬ್ಯಾಕ್ಟೀರಿಯಾ, ಹಿಮದ ಪದರಗಳು ಮುಂತಾದ ಅನೇಕ ರೂಪಗಳನ್ನು ಹೋಲುವ ಚಿತ್ರಕಲೆ ನಿರ್ಮಾಣವಾಗುತ್ತವೆ. ಈ ಚಿತ್ರಗಳೆಲ್ಲಾ ಸ್ವನಿರ್ಮಿತ, ಕೃತಕವಾಗಿ ಏನನ್ನೂ ಅಳವಡಿಸಲಾಗಿಲ್ಲ. ಈ ಫುಟೇಜ್ ಅನ್ನು ವೀಡಿಯೋ ಎಡಿಟಿಂಗ್ ಸಾಫ್ಟ್ ವೇರ್ ಮೂಲಕ ವಿಭಜಿಸಿ, ಬಹುಪದರಗಳನ್ನು ಸಂಕಲನಗೊಳಿಸಿ ಕಲಾಕೃತಿಯನ್ನು ಪೂರ್ಣಗೊಳಿಸಲಾಗುತ್ತದೆ.
ಎಲ್ಲಾ ಪ್ರತಿರೂಪಗಳು:ಕೃಪೆ: ಪ್ರಾಜೆಕ್ಟ್ 88.
ಮಾಧ್ಯಮ: ವೀಡಿಯೋ ಮತ್ತು ಪ್ರಿಂಟ್
ವರ್ಷ: 2011
ಕಲಾವಿದರ ಪರಿಚಯ
ರೋಹಿಣಿ ದೇವಶರ್, ಚಿತ್ರಕಲೆಗಾರರು ಮತ್ತು ಪ್ರಿಂಟ್ ಮೇಕರ್. ಇವರು ದ್ವನಿ, ವೀಡಿಯೋ, ಪ್ರಿಂಟ್ ಮತ್ತು ಬೃಹತ್ ಪ್ರಮಾಣದ ಚಿತ್ರಗಳೊಂದಿಗೆ ಕೆಲಸ ಮಾಡುತ್ತಾರೆ. ಸಿಂಗಪುರ ಕಲಾ ಮತ್ತು ವಿಜ್ಞಾನ ಪ್ರದರ್ಶನಾಲಯ, ಕೋಚಿ-ಮುಜಿರಿಸ್ ಬಿಯೆನ್ನಾಲೆ, ಸ್ಪೆನ್ಸರ್ ಕಲಾ ಪ್ರದರ್ಶನಾಲಯ, ಯೂ.ಎಸ್.ಏ, ವ್ಹಾಯಿಟ್ ಚಾಪೆಲ್ ಗ್ಯಾಲರಿ, ಲಂಡನ್ ಮುಂತಾದಲ್ಲಿ ಇವರ ಕೃತಿಗಳು ಪ್ರದರ್ಶನಗೊಂಡಿವೆ. ರೋಹಿಣಿ ದೇವಶರ್ ಅವರ ಕಲಾಕೃತಿಗಳ ಪ್ರತೇಕ ಕಲಾಪ್ರದರ್ಶನಗಳು, ಮುಂಬೈ ನ ಭೌ ದಾಜಿ ಲಾಡ್ ಸಿಟಿ ಪ್ರದರ್ಶನಾಲಯ (2016), ನವ ದೆಹಲಿಯ ಎಕ್ಸಪೀರಿಯನ್ಸ್ ಸೆಂಟರ್ (2016) , ಪ್ರಾಜೆಕ್ಟ್ 88, ಮುಂಬೈ (2013, 2009) ಈ ಪ್ರದರ್ಶನಾಲಯಗಳಲ್ಲಿ ಪ್ರದರ್ಶಿತವಾಗಿವೆ.