‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಕಾಲವನ್ನು ಅರಿಯಲು ಹೂವುಗಳು ಅರಳುವುದನ್ನು, ಎಲೆಗಳು ಬೀಳುವುದನ್ನು ಗಮನಿಸುತ್ತೇವೆ, ಆದರೆ ಸಮಯವನ್ನು ಸೂಚಿಸಲು ಗಡಿಯಾರ ಮತ್ತು ಕ್ಯಾಲಂಡರ್ ಕಡೆಗೆ ತಿರುಗುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯ ಪರಿಸರಕ್ಕೆ ತಕ್ಕಂತಹ , ನಿಸರ್ಗದ ರುಧ್ರ-ರಮ್ಯತೆಯಿಂದ ಕೂಡಿದ ‘ಕಾಡಿನ ಗಡಿಯಾರ’ ವನ್ನು ಅಳವಡಿಸಬಹುದೇ, ಅಂತಹ ಗಡಿಯಾರ ಏನು ಸೂಚಿಸುತ್ತದೆ? ಜಂಗಲ್ ಘಡಿ ಎಂಬ ಪ್ರಸಕ್ತ ಸಂಶೋಧನೆಯ ಅಂಗವಾಗಿ , ಹತ್ತು ಸ್ಲೈಡ್ ಗಳನ್ನು ಒಳಗೊಂಡ ʼಹೀಟ್ʼ ಸರಣಿಯಲ್ಲಿ ಸಂಯುಕ್ತ ಶರ್ಮ, ಇವರು ತಮ್ಮ ಸುತ್ತಲಿನ ಪರಿಸರಕ್ಕೆ ಅನುಗುಣವಾಗಿ ಒಂದು ಕ್ಯಾಲಂಡರ್ ರಚಿಸಿದ್ದಾರೆ.
ಸಸ್ಯ ಭಾಗಗಳನ್ನು ಪಾರದರ್ಶಕ ಶೀಟ್ ಗಳ ನಡುವೆ ಭದ್ರವಾಗಿ ಇಟ್ಟು ಮೂಲ ಸ್ಲೈಡ್‌ಗಳನ್ನು ತಯಾರಿಸಲಾಗಿದೆ. ಈ ಸ್ಲೈಡ್‌ಗಳನ್ನು ಬಳಸಿಕೊಂಡು, ಪ್ರೊಜೆಕ್ಟರ್ ಮೂಲಕ ಹಿಂಬೆಳಕಿನ ಸಹಾಯದಿಂದ ಬೃಹತ್ ಗಾತ್ರದ ಪ್ರಿಂಟ್ ಅಥವಾ ಡಿಜಿಟಲ್ ಪರದೆಯ ಮೇಲೆ ಚಿತ್ರರೂಪಗಳನ್ನು ಮೂಡಿಸಲಾಗುತ್ತದೆ. 2014 ರಿಂದ ಈ ಸಂಶೋಧನೆಯು ಮುಂದುವರೆದಿದ್ದು ಖೋಜ್ ಗ್ಯಾಲರಿ, ನವದೆಹಲಿಯಲ್ಲಿ, ಕಾನ್‌ಫ್ಲಿಕ್ಟಿಂಗ್ ಸ್ಪೇಸಸ್, ಹೌರಾಹ್, ಪಶ್ಚಿಮ ಬಂಗಾಳ ಮತ್ತು ಮಾಲ್ಮೊ, ಸ್ಡೀಡನ್ ಅಲ್ಲಿ ಪ್ರದರ್ಶನಗೊಂಡಿದೆ. ಜನರು ತಮ್ಮ ಸುತ್ತಲಿನ ಪರಿಸರವನ್ನು ಆಧಾರವಾಗಿರಿಸಿ ವೈಯಕ್ತಿಕ, ಸ್ಥಳೀಯ ಮತ್ತು ಋತುಗಳಿಗೆ ಅನುಸಾರವಾಗಿ ಕಾಲಮಾಪನ ಮಾಡಲು, ಈ ಸರಳ ಉಪಕಹಣವು ಪ್ರೇರೇಪಣೆಯಾಗಿದೆ.
ವರ್ಷ: 2014 – ಪ್ರಸಕ್ತ
ಕಲಾಕೃತಿಗಾರರ ಪರಿಚಯ
ಸಂಯುಕ್ತ ಶರ್ಮ, ಭಾರತೀಯ ಫಿಲಮ್ ಅಂಡ್ ಟೆಲಿವಿಜನ್ ಇಂಸ್ಟಿಟ್ಯೂಟ್ ನಲ್ಲಿ ಚಲನಚಿತ್ರ ನಿರ್ದೇಶನದಲ್ಲಿ ಪದವಿ ಪಡೆದಿದ್ದಾರೆ. ಇವರು ಉತ್ತರಾಖಂಡ್, ಕೊಲ್ಕತ್ತಾ ಮತ್ತು ದೆಹಲಿಯಲ್ಲಿ ಚಲನಚಿತ್ರ ಮತ್ತು ಶ್ರವ್ಯ-ದೃಶ್ಯ ಮಾಧ್ಯಮ ಕಲಾವಿರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.