‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

IMG_20171123_104915_twitter.jpg

ಒಪೆರಸಿ ಕಸಾವಾ

ಮರಗೆಣಸಿನ ಮೂಲಕ ನೆನಪಿನಾಗರ ದೊಳಗೆ

ಒಪೆರಸಿ ಕಸಾವಾ ಯೋಜನೆಯು ಮರಗೆಣಸಿನ ಗಿಡದೊಂದಿಗೆ ಹೆಣೆದುಕೊಂಡಿರುವ ಮಲೇಶಿಯಾದ ಸಂಸ್ಕೃತಿಯ ನಿರೂಪಣೆ. ಆನ್ ಲೈನ್ ಮೂಲಕ ಮರಗೆಣಸಿನ ಬಗೆಗೆ ವಿವರಣೆಗಳನ್ನು ಸಂಗ್ರಹಿಸುತ್ತಾ ಹೋದಂತೆಲ್ಲಾ ಮಾನವ ಮತ್ತು ಸಸ್ಯಗಳ ನಡುವಣ ಸೂಕ್ಷ್ಮ ಅವಿನಾಭಾವ ಸಂಬಂಧ ಗೋಚರವಾಯಿತು. ಈ ಸಂಶೋಧನೆಯು, ಮರಗೆಣಸನ್ನು ಆಹಾರವಾಗಿ ಸೇವಿಸುವ ಜನರು ಮತ್ತು ಮಲೇಶಿಯಾದ ಸಂಸ್ಕೃತಿಯ ಪರಿಚಯವನ್ನು ನೀಡುವುದಲ್ಲದೇ, ತಂತ್ರಜ್ಙಾನದ ಮೂಲಕ ಮಾನವೇತರ ಅನುಭವಗಳ ಅನೇಕ ಚಿತ್ರಣವನ್ನೂ ಬಣ್ಣಿಸುತ್ತದೆ 

ಇದು ಪ್ರಾಯೋಗಿಕ ಘಟಕವಾಗಿದ್ದು, ಸಸ್ಯಗಳ ಜೀವ ಪ್ರಕ್ರಿಯೆಯನ್ನು ಅರಿಯಲು ಅವುಗಳ ಆಂತರಿಕ ಜೀವಸತ್ವವನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಕ್ರಮಬದ್ಧವಾಗಿ ವಿವರಣೆಗಳ ಏಕೀಕರಣ ಮತ್ತು ವಿಶ್ಲೇಷಣೆಯ (ಐ.ಒ.ಟಿ) ಮೂಲಕ ಮಾನವರ ಮತ್ತು ಸಸ್ಯಗಳ ನಡುವಣ ಸಂಬಂಧವನ್ನು ಅರ್ಥೈಸುವ ಮತ್ತು ಸಸ್ಯಗಳ ಬಗೆಗೆ ನಮ್ಮ ಸಮಗ್ರ ದೋರಣೆಯನ್ನು ಉತ್ತಮಗೊಳಿಸುವ ಪ್ರಯತ್ನವಾಗಿದೆ. 2012 ರಲ್ಲಿ ಪ್ರಾರಂಭವಾದ ʼಒಪೆರಸಿ ಕಸಾವಾʼ, ಈ ಪರಿಕಲ್ಪನೆಯು, ಹಲವು ತಿರುವುಗಳನ್ನು ಪಡೆದಿದೆ, ಕೃಷಿ ವಿಜ್ಞಾನಿಗಳು, ಇಂಜಿನಿಯರ್‌ಗಳು, ಮಾಹಿತಿ ಶಾಸ್ತ್ರಜ್ಞರು ಮುಂತಾದ ವಿಭಿನ್ನ ಕ್ಷೇತ್ರದ ಸಂಶೋಧಕರು ಮತ್ತು ಶಿಕ್ಷಣ ತಜ್ಞರನ್ನು ತೊಡಗಿಸಿಕೊಂಡಿದೆ. ಪ್ರಾಯೋಗಿಕ ಸಂಶೋಧನೆ ಮತ್ತು ತಂತ್ರಜ್ಞಾನವು ಸೇರಿದಂತೆ ಮಾನವ ಮತ್ತು ಸಸ್ಯಗಳ ನಡುವಣ ಸಾಮರಸ್ಯ ದ ಅನ್ವೇಷಣೆ ಸಾಗಿದ್ದು, ಅನೇಕ ಸಂಯೋಜಕ ಕಾರ್ಯಗಳು, ಡಿಜಿಟಲ್‌ ಕಲಾಕೃತಿಗಳು, ಸಂಶೋಧಕ ಪತ್ರಗಳು ಮತ್ತು ಪ್ರಕಾಶನಗಳಿಗೆ ಎಣೆಮಾಡಿಕೊಟ್ಟಿದೆ.

ಇವರ ಸಂಗ್ರಹಾಲಯಕ್ಕೆ ದೇಣಿಗೆ ನೀಡಲು ಇಲ್ಲಿ ಕ್ಲಿಕ್‌ ಮಾಡಿ

ಮಾಧ್ಯಮ: ಆನ್ಲೈನ್‌ ವಿವರಣೆಗಳನ್ನು ಬಳಸುವ ಘಟಕ  

ವರ್ಷ: 2012 – ಇಲ್ಲಿಯವರೆಗೂ (ಮುಂದುವರೆದಿದೆ)

 

ಸೈಬರ್‌ ತಂತ್ರಜ್ಞಾನದ ಮೂಲಕ ಸಾವಯವ ತತ್ವ ಮತ್ತು ಡಿಜಿಟಲ್‌ ತತ್ವವಗಳನ್ನು ಮೇಳೈಸುವ ಕಲಾವಿದರ ಭಾವನೆ


ರಚನಕಾರರ ಪರಿಚಯ

profile_lky.jpg

ಲಿಮ್‌ ಕಾಕ್‌ ಯೂಂಗ್‌ ಮಲೇಶಿಯಾದ ಮಾಧ್ಯಮಗಳಲ್ಲಿ, ಕಲಾವಿದರಾಗಿ ನವ- ಮಾಧ್ಯಮ ಮತ್ತು ಡಿಜಿಟಲ್‌ ತಂತ್ರಜ್ಙಾನದೊಡನೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೇಶಿಯಾದ ಮಲ್ಟಿಮೀಡಿಯಾ ವಿಶ್ವವಿದ್ಯಾಲಯದಲ್ಲಿ, ಸೃಜನಾತ್ಮಕ ಬಹು- ಮಾಧ್ಯಮ ಬೋಧನಾಂಗದ, ಕಲಾ ವಿಭಾಗದ ಹಿರಿಯ ಉಪನ್ಯಾಸಕರು. ಮಾನಸಿಕ ಪ್ರವೃತ್ತಿ, ಮಾಧ್ಯಮ ಪರಿಸರ ಮತ್ತು ಕಾರ್ಯಗತಿಯ ಬಗೆಗೆ ಇವರ ಅಧ್ಯಯನ ಸಾಗಿದೆ, ಸೈದ್ಧಾಂತಿಕ ಮತ್ತು ರೂಢಿಗತ ಕೃತಿಗಳ ಮೂಲಕ ಮಾನವ ಪರಿಸ್ಥಿತಿಗಳ ಬಗೆಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ.

DSC_4134 copy.jpg

ರೂಪೇಶ್‌ ಸೀತಾರಾಮ್‌, ಶಿಕ್ಷಣ ತಜ್ಞರು, ಸಂಶೋಧಕರು, ಸಂಗ್ರಹಾಲಯ ಪರಿಪಾಲಕ ಮತ್ತು ಕಲಾಕಾರರು. ಇವರು ಮಲೇಶಿಯಾದ ಸಮಕಾಲೀನ ಕಲೆ, ನವ ಮಾಧ್ಯಮ ಸಂಸ್ಕೃತಿ ಮತ್ತು ವಸ್ತು ಸಂಗ್ರಹಾಲಯ ಪರಿಪಾಲನೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಪ್ರಸಕ್ತ, ಇವರು ಮಲೇಶಿಯಾದ ಸೈಬರ್ಜಯದಲ್ಲಿರುವ ಮಲ್ಟಿಮೀಡಿಯಾ ವಿಶ್ವವಿದ್ಯಾಲದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಂಶೋಧನೆಗಳನ್ನು ನೆಡೆಸಿದ್ದಾರೆ. ಏ.ಪಿ.ಐ.ಸಿ.ಟಿ.ಏ, ಗ್ವಾಂಗ್ಜು ಬಿಯಾನೇಲ್‌, ಐ.ಎಸ್.ಈ.ಏ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ, ಇವರ ಬರಹಗಳು ಸ್ಥಳೀಯ ಮತ್ತು ಅಂತರ್ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಾಶನಗೊಂಡಿವೆ. ನವ ಮಾಧ್ಯಮ ಕಲೆಯ ವ್ಯಾಖ್ಯಾನ ಮತ್ತು ನಿರ್ಮಾಣ ದ ಮೂಲ್ಯ ಹಾಗೂ ತಾತ್ಪರ್ಯ ಪರಿಧಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.


Kannada_Read.png

Kannada_Attend.png
 

ಹಿಂದಿನ ಪ್ರದರ್ಶಿಕೆ

ವೀಟ್‌ ರಸ್ಟ್

 

ಮುಂದಿನ ಪ್ರದರ್ಶಿಕೆ

ಆರ್ಬೋರಿಯಲ್‌