‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಜಾನಕಿ ಅಮ್ಮಾಳ್ (1897- 1984) , ಭಾರತದ ಕೊಯಂಬತೂರು ಸಕ್ಕರೆ ಸಂವರ್ಧನೆ ಕೇಂದ್ರದಲ್ಲಿ ಸಲ್ಲಿಸಿರುವ ಸೇವೆಗೆ ಸ್ಮರಿಸಲಾಗುತ್ತಾರೆ, ಇವರು, ಹೆಚ್ಚು ಸಕ್ಕರೆ ಅಂಶ ಉಳ್ಳ ಕಬ್ಬಿನ ಕಸಿ ತಳಿಗಳನ್ನು ಬೆಳೆಸಿದ್ದಾರೆ. ಜಾನ್ ಇನ್ನ್ಸ್ ಸೆಂಟರ್ ನಲ್ಲಿ ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರೊಡಗೂಡಿ ರಚಿಸಿರುವ “ಕ್ರೋಮೋಸೋಮಲ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್ʼ ಬರಹ ಕೃತಿಯು, ಆರ್ಥಿಕ ಸಸ್ಯಗಳ ಕೋಶ-ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಕೃತಿಯಾಗಿದೆ. 1948, ರಲ್ಲಿ ಭಾರತಕ್ಕೆ ಹಿಂದಿರುಗಿದ ಮೇಲೆ ಸೆಂಟ್ರಲ್ ಬಟಾನಿಕಲ್ ಲ್ಯಾಬೊರೇಟರಿ ಆಫ್ ಇಂಡಿಯ (ಲಖನೌ) ಸಂಸ್ಥೆಯ ಮೊದಲ ನಿರ್ದೇಶಕರಾಗಿ ನೇಮಕಗೊಂಡರು.
ಈ ಪ್ರದರ್ಶಿಕೆಯಲ್ಲಿ ವಿನಿತ ದಾಮೋದರನ್ ಅವರು ಜಾನಕಿ ಅಮ್ಮಾಳ್ ಇವರ ಜೀವನ ಮತ್ತು ವೈಜ್ಞಾನಿಕ ಕೊಡುಗೆಯನ್ನು ಕುರಿತಂತೆ ರಚಿಸಿರುವ ಪ್ರಬಂಧಗಳು ಒಳಗೊಂಡಿವೆ. ಇವರ ಭಾವಚಿತ್ರಗಳೂ ಪ್ರದರ್ಶನಗೊಂಡಿವೆ:ಕೊಡುಗೆ ವಿನಿತ ದಾಮೋದರನ್ ಮತ್ತು ಜಾನ್ ಇನ್ನ್ಸ್ ಸೆಂಟರ್.
ಜೆಂಡರ್, ನೇಶನ್, ರೇಸ್ ಆಂಡ್ ಸೈನ್ಸ್ ಇನ್ ಟ್ವೆಂಟಿಯತ್- ಸೆಂಚುರಿ ಇಂಡಿಯ: ದಿ ಲೈಫ್ ಆಂಡ್ ಲೆಟರ್ಸ್ ಆಫ್ ಈ.ಕೆ. ಜಾನಕಿ ಅಮ್ಮಾಳ್
ಈ.ಕೆ. ಜಾನಕಿ ಅಮ್ಮಾಳ್ , ಇವರು 1940-45 ತಮ್ಮ ವೃತ್ತಿ ಜೀವನವನ್ನು, ಲಂಡನ್ ನ ಜಾನ್ ಇನ್ನ್ಸ್ ಹಾರ್ಟಿಕಲ್ಚರಲ್ ಇನ್ಸ್ಟಿಟ್ಯೂಟ್ ಮುಖೇಣ ಪ್ರಾರಂಭಿಸಿದರು, ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಇಲ್ಲಿ ಸಸ್ಯ ಕೃಷಿಯ ಉದ್ಭವ ಮತ್ತು ವಿಕಸನದ ಅಧ್ಯಯನ ನೆಡೆಸಿದರು. ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರೊಡಗೂಡಿ “ಕ್ರೋಮೋಸೋಮಲ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್” ಎಂಬ ಕೃತಿಯನ್ನು ರಚಿಸಿದರು, ಇದು ಆರ್ಥಿಕ ಸಸ್ಯಗಳ ಕೋಶ-ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಕೃತಿಯಾಗಿದೆ. 1948, ರಲ್ಲಿ ಭಾರತಕ್ಕೆ ಹಿಂದಿರುಗಿದ ಮೇಲೆ ರಾಷ್ಟ್ರದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದರು, ಅನುವಂಶಿಕ ವಿಜ್ಞಾನ ಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸುವ ಕನಸು ಕಂಡಿದ್ದರು. ಲಖನೌ ಅಲ್ಲಿರುವ ಭಾರತ ಸರಕಾರದ ʼಸೆಂಟ್ರಲ್ ಬಟಾನಿಕಲ್ ಲ್ಯಾಬೊರೇಟರಿ ಆಫ್ ಇಂಡಿಯʼ ಸಂಸ್ಥೆಯ ಮೊದಲ ನಿರ್ದೇಶಕರಾಗಿ ನೇಮಕಗೊಂಡಾಗ ಇವರ ಕನಸು ನನಸಾಯಿತು. ಇವರಿಗೆ ಹಲವು ಗೌರವಗಳು ಸಂದವು. ಲಿನೇಯನ್ ಸೊಸೈಟಿ ಆಫ್ ಲಂಡನ್ , ರಾಯಲ್ ಜಿಯೋಗ್ರಫಿಕಲ್ ಸೊಸೈಟಿ , ದಿ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್, ಫೆಲೋಶಿಪ್, ದಿ ರಾಯಲ್ ಏಶಿಯಾಟಿಕ್ ಸೊಸೈಟಿ, ಲಂಡನ್ ಮತ್ತು ದಿ ಇಂಡಿಯನ್ ಅಕಾಡಮಿ ಆಫ್ ಸೈನ್ಸಸಸ್ ಸಂಸ್ಥೆಗಳ ಫೆಲೋಶಿಪ್ ದೊರೆಯಿತು. ಇಂಡಿಯನ್ ಅಕಾಡಮಿ ಯ ಸಂಸ್ಥಾಪಕ ಸದಸ್ಯರು ಮತ್ತು ಮೊದಲ ಮಹಿಳಾ ಸದಸ್ಯೆಯಾದರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮಾಡಿದರು. 1955 ಯಲ್ಲಿ ಮಿಚಿಗನ್ ವಿಶ್ವವಿದ್ಯಾಲಯವು ಇವರಿಗೆ ಗೌರವ ಲೆಗೂಮ್ ಡಾಕ್ಟಾರಿಸ್ ನೀಡಿ ಸತ್ಕರಿಸಿತು. ಮುಂದುವರೆದ ಅಧ್ಯಯನ ಕೇಂದ್ರ, ಮದ್ರಾಸ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಇವರ ಸಮಕಾಲೀನ ವಿಜ್ಞಾನಿ, ಸಿ.ಎಸ್.ಸುಬ್ರಹ್ಮಣಿಯನ್ ಅವರು, ಸಸ್ಯಗಳು, ಕೃಷಿ ಬೆಳೆ, ಉದ್ಯಾನವನಕ್ಕೆ ಸೂಕ್ತ ಗಿಡಗಳು, ತೋಟದ ಸಸ್ಯಗಳು, ಔಷದ ಸಸ್ಯಗಳು, ಮತ್ತು ಬುಡಕಟ್ಟು ಸಸ್ಯಗಳ ಬಗೆಗೆ ಜಾನಕಿ ಅಮ್ಮಾಳ್ ಅವರಿಗಿದ್ದ ಆಸಕ್ತಿಯನ್ನು ಅಭಿಲೇಖಿಸಿದ್ದಾರೆ. ಮೂಲ ಚಿಂತಕರಾಗಿ ವಿಜಾತೀಯ ಕಸಿ ಸಸಿಗಳನ್ನು ಬೆಳೆಸುವ ಕಾರ್ಯದಲ್ಲಿ ಜಾನಕಿ ಅಮ್ಮಾಳ್ ಯುಗಪರಿವರ್ತಕ ಸೇವೆ ಸಲ್ಲಿಸಿದ್ದರು. ಸ್ಯಾಖರಮ್ /ಜೀ, ಸ್ಯಾಖರಮ್ /ಏರಿಯಾಮಥಸ್, ಸ್ಯಾಖರಮ್/ಇಂಪರೆಟಾ, ಸ್ಯಾಖರಮ್/ಸೋರ್ಗಮ್ ಮುಂತಾದ ತಳಿ ಜೋಡಿಗಳ ಕಸಿ ತಯಾರಿಸಿದ್ದರು. ಸ್ಯಾಖರಮ್ ಅಫೀಶಿನೇರಮ್ (ಕಬ್ಬು) ನ ಕೋಶ ಅನುವಂಶಿಕತೆ, ಅಂತರ-ಪ್ರಭೇದ (ಬೇರೆ ಬೇರೆ ಗುಂಪಿಗೆ ಸೇರಿದ ತಳಿಗಳ ನಡುವೆ ಕಸಿಕಾರ್ಯ) ಮತ್ತು ಅಂತರ-ಜೆನೆರ(ಬೇರೆ ಬೇರೆ ಗುಂಪಿಗೆ ಸೇರಿದ ತಳಿಗಳ ನಡುವೆ ಕಸಿಕಾರ್ಯ) ಹಾಗೂ ಇದೇ ಹುಲ್ಲು ಜಾತಿಗೆ ಸೇರಿದ ದೂರದ ಸಂಬಂಧವಿರುವ ಬಿದಿರು (ಬೊಂಬು) ಈ ಸಸ್ಯಗುಂಪುಗಳ ಮಿಲನದಿಂದ ಕಸಿ ತಳಿಗಳನ್ನು ವಿಕಸನಗೊಳಿಸಿದರು, ಇದು ಸಸ್ಯಶಾಸ್ತ್ರಕ್ಕೆ ಅವಿಸ್ಮರಣೀಯ ಕೊಡುಗೆಯಾಗಿದೆ. ಡಾರ್ಲಿಂಗ್ಟನ್ ಅವರೊಂದಿಗೆ ನೆಡೆಸಿದ ಸಂಶೋಧನ ಕಾರ್ಯವನ್ನು ಮುಂದುವರಿಸಿ, ಅಂತರ-ಪ್ರಭೇದ ಕಸಿ ತಂತ್ರವು ಹೂವಿನ ಗಿಡಗಳ ವಿಕಸನ ಪ್ರಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆಯೇ ಎಂದು ಅರಿಯಲು, ಪೀಳಿ ಕಟ್ಟು (ಕ್ರೊಮೊಸೋಮ್) ಸಂಖ್ಯೆ ಮತ್ತು ಪ್ಲಾಯ್ಡಿ ಕುರಿತಂತೆ ಗಹನ ಅಧ್ಯಯನ ನೆಡೆಸಿದರು. 1944 ರಲ್ಲಿ “ದಿ ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿ” , ವಿಸ್ಲಿ ಯಲ್ಲಿ ಸಂಬಳ ಪಡೆದ ಮೊದಲ ಮಹಿಳಾ ಕಾರ್ಮಿಕರಾಗಿ, “ಕಾಲ್ಚಿಸಿನ್” ನ ಅಧ್ಯಯನ ನೆಡೆಸಿದ್ದರು, ಪೋಲಿಪ್ಲಾಯ್ಡಿ ಉಂಟುಮಾಡಲು, “ಕಾಲ್ಚಿಸಿನ್” ಬಳಕೆ ಸೂಕ್ತವೇ ಎಂದು ಅರಿಯಲು ಪ್ಯತ್ನಿಸಿದ್ದರು. ಭಾರತಕ್ಕೆ ಹಿಂತಿರುಗಿದ ನಂತರವೂ ಪೋಲಿಪ್ಲಾಯ್ಡಿ ಮತ್ತು ಸಸ್ಯ ಸಂಕುಲದ ವಿಕಸನದ ಮೇಲಿನ ಸಂಶೋಧನೆಯನ್ನು ಮುಂದುವರೆಸಿದರು, ಸೊಲಾನಮ್, ದತುರಾ, ಮೆಂಥಾ, ಸಿಂಬೋಪೋಗನ್ ಮತ್ತು ಡಯೋಸ್ಕೋರಿಯಾ ಹಾಗೂ ಅನೇಕ ಸಸ್ಯ ತಳಿಗಳೂ ಔಷದೀಯ ಸಸ್ಯಗಳ ಸಂಶೋಧನೆ ನೆಡೆಸಿದರು. ಈಶಾನ್ಯ ಭಾರತದಲ್ಲಿ, ಭಾರತೀಯ ಹೂವಿನ ತಳಿಗಳೊಂದಿಗೆ ಚೀನಾ ಮತ್ತು ಮಲಯಾ ದೇಶಗಳ ಹೂವಿನ ತಳಿಗಳು ನೈಸರ್ಗಿಕವಾಗಿ ಬೆರೆತು ಕಸಿಯಾಗಿ ವೈವಿದ್ಯಮಯ ಹೂವುಗಳ ತಳಿಗಳು ಸೃಷ್ಟಿಯಾಗಿವೆ ಎಂದು ಇವರು ನಂಬಿದ್ದರು. ಸ್ವಾತಂತ್ರೋತ್ತರ ಭಾರತದಲ್ಲಿ, “ಬಟಾನಿಕಲ್ ಸರ್ವೇ ಆಫ್ ಇಂಡಿಯ" ಸಂಸ್ಥೆಯನ್ನು ಪುನರ್ರಚಿಸಲು ವಿಶೇಷ ಅಧಿಕಾರಿಯಾಗಿ ನೇಮಕಗೊಂಡರು. “ಜಾನಕಿ ಅಮ್ಮಾಳ್, ಅವರು ಕೋಟೆ ಕೋಶ ವಿಜ್ಞಾನವಾಗಿದ್ದರೂ, ಅವರ ಸಂಶೋಧನೆಯು ಅನುವಂಶಿಕತೆ, ವಿಕಸನ ಸಿದ್ಧಾಂತ, ಸಸ್ಯ-ಖಗೋಳಶಾಸ್ತ್ರ ಮತ್ತು ಬುಡಕಟ್ಟು-ಸಸ್ಯವಿಜ್ಞಾನ ಇವೆಲ್ಲಾ ಕ್ಷೇತ್ರವನ್ನೂ ಆವರಿಸಿತ್ತು” ಎಂದು ಸುಬ್ರಹ್ಮಣಿಯಮ್ ಅಭಿಲೇಖಿಸಿದ್ದಾರೆ.
1930-1980 ರ ನಡುವೆ ಅಮ್ಮಾಳ್ ಅವರು ಲಂಡನ್ ನ ಜಾನ್ ಇನ್ನ್ಸ್ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥರಾದ, ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರೊಂದಿಗೆ ಹಾಗೂ ಭಾರತದ ಮತ್ತು ಅನ್ಯ ದೇಶಗಳ ಸಸ್ಯವಿಜ್ಞಾನಿಗಳೊಂದಿಗೂ ಪತ್ರ ಸರಣಿಗಳ ಮುಖೇಣ ಸತತ ಸಂಪರ್ಕದಲ್ಲಿದ್ದರು. ಜಾನಕಿ ಅಮ್ಮಾಳ್ ಮತ್ತು ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರ ನಡುವಣ ಕಾಗದ ಪತ್ರಗಳನ್ನು ಬೋಡಿಯನ್ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ. ಇವರಿಬ್ಬರ ನಡುವಣ ಸಂಬಂಧವು ವಿಭಿನ್ನ ಖಂಡಗಳ, ಜಾತಿ , ಲಿಂಗಗಳನ್ನು ಮೀರಿದ ಅಪರೂಪದ ವಿಶಿಷ್ಟ ವೈಜ್ಞಾನಿಕ ಸಂಬಂಧವಾಗಿತ್ತು. 1930 ರಲ್ಲಿ ಅಮ್ಮಾಳ್ , ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ಅತಿ ನವ್ಯ, ಸೃಜನಾತ್ಮಕ, ಜಾತಿಯ ದೃಷ್ಟಿಯಿಂದಲೂ ಅತಿ ವಿರಳವಾದ, ಬಿಳಿ ಜನಾಂಗದ ಪುರುಷ ಪ್ರಧಾನ ವೈಜ್ಞಾನಿಕ ಕ್ಷೇತ್ರದಂತಹ ಅಪರೂಪವಾದ ಮಾರ್ಗವನ್ನು ಹಿಡಿದಿದ್ದರು, ಸ್ವಾತಂತ್ರೋತ್ತರ ಭಾರತದಲ್ಲಿ , ರಾಷ್ಟ್ರವಾದಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು.
ಅಮ್ಮಾಳ್ ಅವರ ಸಂಶೋಧನೆಯ ಮೆಲ್ವಿಚಾರಣೆ ನೆಡೆಸುತ್ತಿದ್ದ, ಹ್ಯಾರಿ ಬಾರ್ಟ್ಲೆಟ್ ಅವರ ಸಲಹೆಯ ಮೇರೆಗೆ, ಸಿರಿಲ್ ಡೀನ್ ಡಾರ್ಲಿಂಗ್ಟನ್ ಅವರಿಗೆ ಮೊದಲ ಬಾರಿ ಪತ್ರ ಬರೆದಿದ್ದರು, ತಾವು ಪಿ ಎಚ್.ಡಿ, ಪೂರ್ಣಗೊಳಿಸಿದ ನಂತರ ಭಾರತಕ್ಕೆ ಹಿಂದಿರುಗುವಾಗ ಅವರನ್ನು ಭೇಟಿ ಮಾಡಬಹುದೇ ಎಂದು ನಯವಾಗಿ ಕೇಳಿದ್ದರು. ಪತ್ರಗಳ ಸಂಗ್ರಹಣದಲ್ಲಿ ಈ ಪತ್ರವು ಲಭ್ಯವಿದೆ. ಮಿಚಿಗನ್ ಅಲ್ಲಿ ಎರಡು ಆವರ್ತಿಗಳನ್ನು ಈಗಾಗಲೇ ಕಳೆದಿದ್ದರು. 1924 ರಲ್ಲಿ ಬಾರ್ಬೌರ್ ಸ್ಕಾಲರ್‌ಶಿಪ್ ಫಾರ್ ಓರಿಯಂಟಲ್ ವಿಮೆನ್ ವಿದ್ಯಾರ್ಥಿವೇತನವನ್ನು , ಮತ್ತು 1928ರಲ್ಲಿ ಬಾರ್ಬೌರ್ ಫೆಲೋಶಿಪ್ ಪಡೆದಿದ್ದರು. 1917 ರಲ್ಲಿ, ಲೆವಿ ಲೆವಿಸ್ ಬಾರ್ಬೌರ್ ಇವರು, ನಿಧಿ ಒಟ್ಟುಗೂಡಿಸಿದ್ದರು, ಯೂರೇಶಿಯಾದ ಮಹಿಳೆಯರಿಗೆ ತರಬೇತಿ ನೀಡಿ, ವಿಶ್ವವಿದ್ಯಾಲಯದಲ್ಲಿ ಅಧ್ಯಯನದ ನಂತರ, ಅಲ್ಲಿ ಗಳಿಸಿದ ಜ್ಞಾನ ಮತ್ತು ಕುಶಲತೆಯನ್ನು ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ಬಳಸಿಕೊಂಡು, ತಮ್ಮ ನಾಡಿನ ಜನರ ಜೀವನವನ್ನು ಉತ್ತಮ ಗೊಳಿಸಲಿ ಎಂಬ ಸದುದ್ದೇಶ್ಯ ಹೊಂದಿದ್ದರು. ಇದು ಸ್ಪರ್ಧಾತ್ಮಕ ವಿದ್ಯಾರ್ಥಿ ವೇತನವಾಗಿತ್ತು. ಅರ್ಜಿಗಳನ್ನು ಸಲಹಾಸಮಿತಿಯು ಪೂರ್ಣವಾಗಿ ಪರಿಶೀಲಿಸಿದ ಸಂತರ ನಿರ್ಣಯ ತೆಗೆದುಕೊಳ್ಳಲಾಗುತ್ತಿತ್ತು.
“ಪೂರ್ವ ದೇಶಗಳಿಂದ ಹೆಣ್ಣು ಮಕ್ಕಳನ್ನು ಆರಿಸಿ, ಅವರಿಗೆ ಪಾಶ್ಚಾತ್ಯ ಶಿಕ್ಷಣ ಒದಗಿಸುವುದು, ಮತ್ತು ಕಲಿಕೆಯ ಲಾಭವನ್ನು, ತಮ್ಮ ಜನಾಂಗಕ್ಕೆ ತಲುಪಿಸುವುದು, ಓರಿಯಂಟಲ್ ಸ್ಕಾಲರ್ಶಿಪ್” ನ ಮೂಲ ಉದ್ದೇಶ್ಯ”: ಎಂದು ಸ್ವತಃ ಬಾರ್ಬೌರ್ ಹೇಳಿದ್ದಾರೆ
1928 ರಲ್ಲಿ ಬಾರ್ಬೌರ್ ಫೆಲೋಶಿಪ್ ಯಿಂದ ಹೆಚ್ಚಿನ ಸ್ಟೈಫಂಡ್ ಹಣವು, ಏಷಿಯಾದ ಬಹಳಷ್ಟು ಮಹಿಳೆಯರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನದ ನಡುವೆ, ಸ್ವತಂತ್ರವಾಗಿ ಸ್ವಂತ ಸಂಶೋಧನೆ ಮತ್ತು ಅನ್ವೇಷಣೆ ಕಾರ್ಯದಲ್ಲಿ ತೊಡಗಲು ಸಹಕಾರಿಯಾಗಿತ್ತು. 1928ರಲ್ಲಿ ಬಾರ್ಬೌರ್ ಫೆಲೋಶಿಪ್ ಗೆ ಪಾತ್ರರಾದ ಮೊದಲ ಮಹಿಳೆಯರಲ್ಲಿ ಅಮ್ಮಾಳ ಒಬ್ಬರಾಗಿದ್ದರು, ಅಲ್ಲದೇ ಮಿಚಿಗನ್ ಅಲ್ಲಿಯೇ ಉಳಿಯಲು ಸಹಕಾರಿಯಾಯಿತು. ಮಿಚಿಗನ್ ಅಲ್ಲಿ ಇವರೊಂದಿಗೆ ಹಲವು ಚೀನಾದ ಮತ್ತು ಜಪಾನಿನ ಮಹಿಳೆಯರೂ ಇದ್ದರು, ಅನ್ಯ ಭಾರತೀಯ ಮಹಿಳೆಯರಲ್ಲಿ ಹೆಸರಾಂತ ವಿದ್ಯಾರ್ಥಿನಿ, ಶರ್ಕೇಶ್ವರಿ ಅಘಾ ಅಲಹಾಬಾದ್ ನ ʼಕ್ರಾಸ್ಥ್ ವೈಟ್ ಕಾಲೇಜಿನʼ ಮುಖ್ಯಸ್ಥರಾದರು. ಜಾನಕಿಯವರು ಸಂಯುಕ್ತ ರಾಜ್ಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದಂತಹ ಮೊದಲ ಮಹಿಳೆ. ವರ್ತಮಾನದಲ್ಲಿ ಇವರ ಸಾಧನೆಯನ್ನು ಗುರುತಿಸಿ, ವಿಶ್ವವಿದ್ಯಾಲಯದ ಸ್ನಾತಕ ಶಾಲೆಯ ಜಾಲತಾಣದಲ್ಲಿ ಸ್ಮರಿಸಲಾಗಿದೆ. ಅಮೇರಿಕದ ಅಂದಿನ ಜೀವನ ಬಹು ವಿಭಿನ್ನವಾಗಿತ್ತು. ಮಹಿಳಾ ವಿದ್ಯಾರ್ಥಿ ನಿಲಯಗಳಲ್ಲಿ, ಅಮೇರಿಕಾದ ಅನ್ಯ ವಿದ್ಯಾರ್ಥಿಗಳೊಡನೆ ಅಮೇರಿಕ ಶೈಲಿಯ ಆಹಾರವನ್ನು ಸೇವಿಸಬೇಕಾಗಿತ್ತು.ಇದನ್ನು ಬಹಳ ಜನ ವಿರೋಧಿಸಿದ್ದರು. ಬಹಳಷ್ಟು ಮಂದಿ ಕ್ಷಯರೋಗಕ್ಕೆ ತುತ್ತಾದರು. ಅಮ್ಮಾಳ್ ಅವರ ಡಿಸರ್ಟೇಶನ್ (ವಿದ್ವತ್ ಪ್ರಬಂಧ) ವು, “ಕ್ರೋಮೋಸೋಮ್ ಸ್ಟಡೀಸ್ ಇನ್ ನಿಕಾಂದ್ರ ಫೈಸಲಾಯ್ಡ್ಸ್” ವಿಷಯವಾಗಿತ್ತು. 1931 ರಲ್ಲಿ ಇವರು ತಮ್ಮ ವಿಜ್ಞಾನ ಡಾಕ್ಟರೇಟ್ ಪೂರ್ಣಗೊಳಿಸಿದರು. ಎಚ್.ಎಚ್. ಬಾರ್ಟ್ಲೆಟ್ ಅವರೊಂದಿಗೆ ಸಂಶೋಧನೆ ನೆಡೆಸುತ್ತಿರವಾಗ,ತಮ್ಮ ಪತ್ರದಲ್ಲಿ ಹೇಳಿರುವಂತೆ, ಹೈಬ್ರೀಡ್ ಟ್ರಿಪ್ಲಾಯ್ಡ್ ಬದನೆಗಿಡವನ್ನು ಸಂಸ್ಕರಿಸಿ ಬೆಳೆದಿದ್ದರು, ಇದು “ಜಾನಕಿ ಬ್ರೆಂಗಾಲ್” ಎಂದು ಹೆಸರಾಗಿದೆ.
ದಕ್ಷಿಣ ಲಂಡನ್ ನ ವಿಲಿಯಮ್ ಬೇಟ್ಸನ್ ನ ಮೆರ್ಟಾನ್ ಪ್ರದೇಶದಲ್ಲಿ, 1910 ರಲ್ಲಿ ಸ್ಥಾಪಿತವಾದ ಬ್ರಿಟೇನ್ ನ ಜಾನ್ ಇನ್ನ್ಸ್ ಹಾರ್ಟಿಕಲ್ಚರಲ್ ಇನ್ಸ್ಟಿಟ್ಯೂಟ್ ಸೇರಿದರು. 1900 ರಲ್ಲಿ ಸಸ್ಯ ಸಮ್ಮಿಶ್ರಣವನ್ನು ಕುರಿತಂತೆ, ಮೆಂಡಲ್ ಅವರ ಸಂಶೋಧನೆ ಯ ಪುನಃ-ಶೋಧನೆಯು ಆಧುನಿಕ ಅನುವಂಶ ವಿಜ್ಞಾನದ ಬುನಾದಿ ಎಂದು ಪರಿಗಣಿಸಲಾಗಿದೆ. ಬೇಟ್ಸನ್ ಮೊದಲ ಬಾರಿಗೆ ಬ್ರಿಟನ್ ನಲ್ಲಿ ಈ ವಿಷಯವನ್ನು ಪರಿಚಯಿಸಿದರು. ಜೆ.ಬಿ.ಎಸ್ ಹಾಲ್ಡೇನ್ ಈ ಅಂತರವನ್ನು ತುಂಬಬೇಕಿತ್ತು. ಇತ್ತ, ಅಮ್ಮಾಳ್ ಅವರು ಸಿ.ಡಿ.ಡಾರ್ಲಿಂಗ್ಟನ್ ಅವರನ್ನು ಅರಸುತ್ತಾ ಬಂದರು. ಅವರೊಂದಿಗೆ ಅಮ್ಮಾಳ್ ಒಂದು ವರ್ಷ ಕಾಲ ಜಾನ್ ಇನ್ನ್ಸ್ ಕೇಂದ್ರದಲ್ಲಿ, ಕೋಶ-ವಿಜ್ಞಾನದ ಸಂಶೋಧನೆ ನೆಡೆಸಿದರು. ನಂತರ ಬಾರತಕ್ಕೆ ತೆರಳಿ ಕೊಯಂಬತೂರಿನ ಸಕ್ಕರೆ ತಳಿವರ್ಧನೆ ಸಂಸ್ಥೆಯಲ್ಲಿ ಕಾರ್ಯನಿರತರಾದರು.
ಅಮ್ಮಾಳ್ ಅವರ ವೃತ್ತಿ ಜೀವನದಲ್ಲಿ, 1912-42 ವರೆಗೂ ಅನೇಕ ಸಂದರ್ಭಗಳಲ್ಲಿ, ಜಾತಿ, ಲಿಂಗಭೇದ , ಪುರುಷ ಪಕ್ಷಪಾತ ಹಾಗೂ ಪೂರ್ವಗ್ರಹಗಳನ್ನು ಎದುರಿಸಬೇಕಾಯಿತು, ಬ್ರಿಟನ್ ಅಲ್ಲಿ, ಹಲವರು ಈ ರೀತಿಯ ಭೇದಭಾವ ತೋರಿದ್ದರು. ಭಾರತೀಯ ಪುರುಷ ವಿಜ್ಞಾನಿಗಳಿದ್ದಂತಹ, ಸಕ್ಕರೆ ತಳಿ-ವರ್ಧನೆ ಸಂಸ್ಥೆಯ ಮುಖ್ಯಸ್ಥರಾದ ಟಿ.ಎಸ್.ವೆಂಕಟರಾಮನ್ ಮುಂತಾದವರೂ ಸಹ ಇದೇ ಪ್ರವೃತ್ತಿ ಹೊಂದಿದ್ದರು, ಸ್ವಯಂ ಡಾರ್ಲಿಂಗ್ಟನ್ ಕೂಡ ಇಂತಹ ನೆಡತೆಗೆ ಹೊರತಲ್ಲ ಎಂದು ತಮ್ಮ ಪತ್ರಗಳಲ್ಲಿ ಅಮ್ಮಾಳ್ ವಿವರಿಸಿದ್ದಾರೆ. ಸಕ್ಕರೆ ತಳಿವರ್ಧನೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ, 1938 ರಲ್ಲಿ ಜೀವವಿಜ್ಞಾನಿ ರೆಜಿನಾಲ್ಡ್ ರುಗಲ್ಸ್ ಗೇಟ್ಸ್ ಕೊಯಂಬತೂರಿಗೆ ಭೇಟಿ ನೀಡಿದ್ದರು, ಎಂದು ಅಮ್ಮಾಳ್ ಆಗಸ್ಟ್, 1938 ರಲ್ಲಿ ಬರೆದ ಪತ್ರದಲ್ಲಿದೆ.
“ಕೊಯಂಬತೂರಿನಲ್ಲಿ ಗೇಟ್ಸ್ ಇದ್ದ ಆ ಒಂದು ದಿನದಲ್ಲಿಯೇ ಅವರು ಮಾಡಿದ ಹಾನಿಯನ್ನು ಸರಿ ಪಡಿಸಲು ಏಳು ತಿಂಗಳ ಕಾಲ ಹಿಡಿಯಿತು. ಕೊಯಂಬತೂರಲ್ಲಿ ನೆಡೆಯುತ್ತಿದ್ದ ಸಂಶೋಧನೆಯಲ್ಲಿ ಪ್ರೊಫೆಸರ್ ತೆಗೆದುಕೊಂಡ ಆಸಕ್ತಿ, ಅವರ ವಿಷಯ ಬಂಢಾರ, ನಾಜೂಕು ನಡೆ, ನುಡಿ ಯಿಂದ ಶ್ರೀಯುತ.ವೆಂಕಟರಾಮನ್ ಅವರು ಪೂರ್ಣವಾಗಿ ಪ್ರಭಾವಗೊಂಡಿದ್ದರು. ಗೇಟ್ಸ್, ಸಾಖರಮ್-ಜೀ ಗೆ ಸಂಬಂಧಿಸಿದ ಸಂಶೋಧನೆಯ ಮೌಲ್ಯತೆಯ ಬಗ್ಗೆ ತಮಗೆ ಮೂಡಿದ ಸಂಶಯವನ್ನು ನನ್ನ ಬಳಿ ಚರ್ಚಿಸದೆ, ವೆಂಕಟರಾಮನ್ ಅವರಿಗೆ ವ್ಯಕ್ತ ಪಡಿಸಿದರು. ಇದರ ಪರಿಣಾಮವಾಗಿ, ನಾನು “ನೇಚರ್” ಪತ್ರಿಕೆಯಲ್ಲಿ ಪ್ರಕಟ ಗೊಳಿಸಲು ಸಿದ್ಧ ಪಡಿಸಿದ್ದ ಟಿಪ್ಪಣಿಯನ್ನು ಕೃಷಿ ಇಲಾಖೆಯ ನಿರ್ದೇಶಕರ ಅನುಮತಿಗಾಗಿ ಕಳುಹಿಸಲೇ ಇಲ್ಲ. ವಿದೇಶದಲ್ಲಿ ಯಾವುದೇ ವಿಷಯವನ್ನು ಪ್ರಕಟಿಸಬೇಕಾದರೆ ಆಡಳಿತ ನೀತಿಯ ಪ್ರಕಾರ ಕೃಷಿ ಇಲಾಖೆಯ ನಿರ್ದೇಶಕರ ಅನುಮತಿಯ ಅವಶ್ಯಕತೆ ಇತ್ತು. ಈ ಘಟನಾವಳಿಯಿಂದಾಗಿ ನಾನು ಈ ಸಂಸ್ಥೆಯಿಂದ ಹೊರ ಬರುವ ಎಲ್ಲಾ ಯೋಚನೆಗಳನ್ನೂ ಮಾಡಿದ್ದೆ. ಜೀವನ ಜಟಿಲವಾಯಿತು. ಆದರೆ ಸುಲಭದಲ್ಲಿ ಸೋಲು ಒಪ್ಪಿಕೊಳ್ಳಲು ಮನಸ್ಸಿರಲಿಲ್ಲ. ಕೊನೆಗೂ ವೆಂಕಟರಾಮನ್ ಅವರು , ನಾನು ವಿಕಸನಗೊಳಿಸಿದ್ದ ಕಸಿ ತಳಿ ಪ್ರಾಮಾಣಿಕವಾದದ್ದು ಎಂದು ಒಪ್ಪಿಕೊಂಡರು” . 1938 ರಲ್ಲಿ ಅಮ್ಮಾಳ್ ಅವರ ಸಂಶೋಧನ ಪತ್ರ ನೇಚರ್ ಪತ್ರಿಕೆಲ್ಲಿ ಪ್ರಕಟಗೊಂಡಿತು. ಮುಂದಿನ ತಮ್ಮ ವೃತ್ತಿ ಜೀವನದಲ್ಲಿ ಭಾರತೀಯ ವಿಜ್ಞಾನದ ಅಂದಿನ ಪ್ರಯೋಜನವಾದಿ ಸಂಕುಚಿತ ಸ್ವಭಾವಕ್ಕೆ ವ್ಯತಿರಿಕ್ತವಾಗಿ, ಅಗ್ರಮಾನ್ಯ ರಾಷ್ಟ್ರವಾದಿ ವಿಜ್ಞಾನಿಯಾಗಿ, ಸೇವೆ ಸಲ್ಲಿಸಿದರು. ಭಾರತದಲ್ಲಿ ರಾಷ್ಟ್ರವಾದಿ ವಿಜ್ಞಾನವು ಮೂಡುತ್ತಿದ್ದ 1950ರ ದಶಕದಲ್ಲಿ ವೈಜ್ಞಾನಿಕ ಔದ್ಯೋಗಿಕೀಕರಣವು ನೆಲೆಕಂಡಿತು. ಹಲವಾರು ಮೂಲಗಳಿಂದ ಭಾರತದ ರಾಷ್ಟ್ರೀಯ ಭವಿಷ್ಯ ರೂಪಗೊಳ್ಳುತ್ತಿತ್ತು. ಆಭಾಸ ಎಂದರೆ ಭಾರತೀಯ ಪರಿಸರ ಮತ್ತು ಔಷಧ ಪದ್ಧತಿಯಲ್ಲೂ ಈ ಬದಲಾವಣೆಗಳು ಕಂಡು ಬಂದವು. ಅಗ್ರಗಣ್ಯ ರಾಷ್ಟ್ರೀಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಾ, ಅಮ್ಮಾಳ್ ಅವರು ಲಿಂಗ ಆಧಾರಿತ ದೇಶೀಯ ಪರಂಪರೆಯ ನಿಲುವನ್ನು ಪರಿವರ್ತಿಸುವಲ್ಲಿ ಬಹಳ ಶ್ರಮ ವಸಿದ್ದಾರೆ.
ಅಮ್ಮಾಳ್ ಅವರ ಜೀವನದ ಯಾವುದೇ ಹಂತವನ್ನು ವೀಕ್ಷಿಸಿದರೂ, ವೈಜ್ಞಾನಿಕ ಸಂಶೋಧಕರ ವೈಯಕ್ತಿಕ ಜೀವನವು, ಅವರ ಸಾಧನೆ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಸ್ಪಷ್ಟವಾಗಿ ಕಾಣಬರುತ್ತದೆ. ಇಂತಹವರ ಸ್ವಂತ ಚಿಂತನೆಗಳು, ಮತ್ತು ತಮ್ಮ ವ್ಯಕ್ತಿತ್ವ ಬಿಂಬಗಳು, ಅನ್ಯರಿಗೆ ಹೇಗೆ ಪ್ರೇರಣೆಯಾಗುತ್ತವೆ ಎಂದು ತಿಳಿಯ ಬಹುದು. ವಿಭಿನ್ನ ದೇಶ, ಖಂಡಗಳ ಭ್ರಮಣೆ ಮಾಡಿದ ಅಮ್ಮಾಳ್ ಅಂತಹವರ ವೃತ್ತಿ ಜೀವನವನ್ನು ವಿಮರ್ಶಿಸಿದರೆ, ಲಿಂಗ ಭೇದ-ಭಾವ, ರಾಷ್ಟ್ರ, ಜಾತಿ ಮತ್ತು ವಿಜ್ಞಾನ ಇವೆಲ್ಲದರ ಐತಿಹಾಸಿಕ ಚರ್ಚೆಯ ವಿಷಯಗಳ ಕುರಿತಂತೆ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ.
ಅಮ್ಮಾಳ್ –ಡಾರ್ಲಿಂಗ್ಟನ್ ನಡುವಣ ಪತ್ರ ವ್ಯವಹಾರದಿಂದ ವಿಜ್ಙಾನದ ಇತಿಹಾಸದ ಬಹು ಮುಖ್ಯ ಅಂಶಗಳು ಗೋಚರವಾಗುತ್ತವೆ, ಸ್ವಾತಂತ್ರೋತ್ತರ ಭಾರತದಲ್ಲಿ ರೂಪಾಂತರಗೊಳ್ಳುತ್ತಿದ್ದ ವೈಜ್ಞಾನಿಕ ಸ್ವಾತಂತ್ರ ಹಾಗೂ ಇದಕ್ಕೆಸಂಬಂಧಿಸಿದ ಅನೇಕ ಸವಾಲುಗಳು ಚರ್ಚೆಯ ವಿಷಯಗಳು. ಕೋಶ-ಅನುವಂಶಿಕತೆ ವಿಜ್ಞಾನ (ಸೈಟೋ ಜೆನೆಟಿಕ್ಸ್) ಮತ್ತು ಕೋಶ-ಖಗೋಳ ಶಾಸ್ತ್ರ (ಸೈಟೋ ಜಿಯೋಗ್ರಫಿ) ಕ್ಷೇತ್ರಗಳ ಸಂಶೋಧನೆಗೆ ಹೊಸ ಆಯಾಮ ನೀಡಿದ, ಓರ್ವ ಮಹಿಳಾ ವಿಜ್ಞಾನಿಯ ಆಶಯ, ವೃತ್ತಿಜೀವನ, ವೈಜ್ಞಾನಿಕ ಲೋಕದ ಜೀವನ ಎಲ್ಲದರ ಪರಿಚಯವಾಗುತ್ತದೆ. ಈ ಪತ್ರಗಳ ಮೂಲಕ “ಬಟಾನಿಕಲ್ ಸರ್ವೇ ಆಫ್ ಇಂಡಿಯಾ” ಸಂಸ್ಥೆಯ ಮುಖ್ಯಸ್ಥರಾಗಿ ಸಂಸ್ಥಾನ ಸ್ಥಾಪಿಸುವ ಅವರ ಕ್ಷಮತೆ ಮತ್ತು ಬಾರತಕ್ಕೆ ಇವರ ದಾರ್ಶನಿಕ ಕೊಡುಗೆಯ ಬಗೆಗೂ ಅರಿವು ಮೂಡುತ್ತದೆ. ಅಮ್ಮಾಳ್ ಅವರ ದೃಷ್ಟಿಯಿಂದ ಭಾರತ ಪರಂಪರೆಯ ಸಿರಿ ಸಂಪದವು, ಕೇವಲ ಪುರಾತನ ಸಂಸ್ಕೃತಿ ಮತ್ತು ಬುಡಕಟ್ಟು ಜನಾಂಗದ ಪದ್ಧತಿಗಳನ್ನೂ ಒಳಗೊಂಡ ಪರಂಪರೆ ಅಷ್ಟೇ ಅಲ್ಲದೇ ತಲತಲಾಂತರದ ದೇಶದ ಪ್ರಾಕೃತಿಕ ಸಂಪತ್ತು, ಪ್ರಾಣಿ ಸಂಕುಲ, ಸಸ್ಯ ಸಿರಿ, ಅರಣ್ಯಗಳು ಎಲ್ಲವೂ ಸೇರಿವೆ. ಸಂಗ್ರಹಣದಲ್ಲಿ, ಡಾರ್ಲಿಂಗ್ಟನ್ ಅವರಿಗೆ ಅಮ್ಮಾಳ್ ಬರೆದ ಬಹಳಷ್ಟು ಪತ್ರಗಳು ಹಾಗೂ ಅಂದಿನ ಕಾಲದ ಅನ್ಯ ಪ್ರಖ್ಯಾತ ಸಸ್ಯ ವಿಜ್ಞಾನಿಗಳಿಂದ ಅಮ್ಮಾಳ್ ಅವರಿಗೆ ಬಂದ ಪತ್ರಗಳು ಸೇರಿವೆ, ಕೆಲವು ಪತ್ರಗಳು, “ಕ್ರೋಮೋಸೋಮಲ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್” ವಿಷಯ ಕುರಿತಂತೆ ಮುಂದುವರಿದ ಭಾಗದ ಪ್ರಕಾಶನಕ್ಕೆ ಸಂಬಂಧಿಸಿವೆ. ವಿಪರ್ಯಾಸ ಎಂದರೆ, ಅಮ್ಮಾಳ್ ಅವರಿಗೆ ಬಂದ ಪತ್ರಗಳು ಇಲ್ಲ, ನಾಶವಾಗಿವೆ, ಅವರ ಪಿತ್ರಾರ್ಜಿತ ಮನೆ ಮಾರಾಟವಾದಾಗ ಅವರ ಸ್ವಂತ ಸಸ್ಯ ಸಂಗ್ರಹಣ ಗ್ರಂಥವೂ (ಹರ್ಬೇರಿಯಮ್) ನಾಶವಾಗಿದೆ, ಅವರ ಪತ್ರಗಳು ಮತ್ತು ಸ್ವಂತ ಪುಸ್ತಕ ಭಂಡಾರ ಎಲ್ಲವೂ ಮಾಯವಾಗಿವೆ. ದುರಂತ ಎಂದರೆ, ಇಂತಹ ಅಪರೂಪದ, ಅಸಾಧಾರಣ ವ್ಯಕ್ತಿತ್ವದ ವೃತ್ತಿ ಜೀವನವನದ ಭಾಗಶಃ ವಿವರಣೆಗಳು ಮಾತ್ರವೆ ಲಭ್ಯವಾಗಿವೆ.
ಬರಹಗಾರರ ಪರಿಚಯ
ವಿನಿತ ದಾಮೋದರನ್, ಆಧುನಿಕ ಭಾರತದ ಇತಿಹಾಸಕಾರರು, ಇಡೀ ದಕ್ಷಿಣ ಭೂಭಾಗದ ಸತತ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು, ಬಿಹಾರದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಿಂದ ಹಿಡಿದು ದಕ್ಷಿಣ ಏಷಿಯಾದ ಪರಿಸರ ಇತಿಹಾಸದ ವರೆಗೂ, ಹಿಂದು ಮಹಾ ಸಾಗರದಲ್ಲಿ ಉಂಟಾಗುವ ಹವಾಮಾನ ಬದಲಾವಣೆಗಳನ್ನು ಒಳಗೊಂಡಂತೆ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಜಾನ್ ಇನ್ನ್ಸ್ ಸೆಂಟರ್ ಒಂದು ಪರಿಚಯ
ಜಾನ್ ಇನ್ನ್ಸ್ ಸೆಂಟರ್ , ಸಂಯುಕ್ತ ರಾಷ್ಟ್ರಗಳಲ್ಲಿ ನಾರ್ವಿಚ್ ನಲ್ಲಿರುವ ಸ್ವಾಯತ್ತ ಅಂತರ್ರಾಷ್ಟ್ರೀಯ ಸಂಸ್ಥೆ, ಸಸ್ಯ ವಿಜ್ಞಾನ, ಅನುವಂಶಿಕತೆ ಮತ್ತು ಸೂಕ್ಷ್ಮ ಜೀವ ವಿಜ್ಞಾನ ದ ಅತ್ಯುತ್ಕೃಷ್ಟತೆಯ ಕೇಂದ್ರ.
ಹೊಸ ಬಗೆಯ ಸಂಶೋಧನೆಗಳ ಮೂಲಕ ಸಸ್ಯ ಕುಲ ಮತ್ತು ಸೂಕ್ಷ್ಮಾಣು ಜೀವಿಗಳ ಬಗ್ಗೆ ಜ್ಞಾನ ವರ್ಧನೆ, ಭವಿಷ್ಯದ ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವುದು ಮತ್ತು ಆಡಳಿತವರ್ಗ ಹಾಗೂ ಸಾರ್ವಜನಿಕ ರೊಂದಿಗೆ ಒಡಗೂಡುವುದೇ ಜಾನ್ ಇನ್ನ್ಸ್ ಸೆಂಟರ್ ನ ಮುಖ್ಯ ಉದ್ದೇಶ್ಯ. ಇಂತಹ ಒಗ್ಗೂಡಿಕೆ, ಪ್ರಾಕೃತಿಕ ವಿವಿಧತೆಯನ್ನು ಅರಿತು, ಕೃಷಿ, ಪರಿಸರ, ಮಾನವ ಸ್ವಾಸ್ಥ್ಯ ಮತ್ತು ಒಳಿತಿಗೆ ಲಾಭದಾಯಕ.