‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು.  ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

858505-74431-dwpjbgamjj-1511270232_twitter.jpg

ಅವರ ನುಡಿ ಕೇಳಿ ಬರುತ್ತಿದೆಯೇ?

ಜಗದೀಶ್‌ ಚಂದ್ರ ಬೋಸ್‌ ಮತ್ತು ಮಿಮೋಸ ಪುಡಿಕ (ಮಟ್ಟಿದರೆ ಮುನಿ ಗಿಡ)

ಜಗದೀಶ್‌ ಚಂದ್ರ ಬೋಸ್‌  (1858 - 1937)  ತಂತಿ ರಹಿತ ಸಂಪರ್ಕ ಸಾಧನೆಯ ಅವಿಷ್ಕಾರಕ್ಕೆ ಹೆಸರಾದವರು.  ಇವರು ರೇಡಿಯೋ ಸಂವೇದನೆಗಳನ್ನು ಪತ್ತೆ ಮಾಡಲು  ಅರೆವಾಹಕ ಜಂಟಿಗಳನ್ನು ಬಳಸಿದ ಮೊದಲ ಭೌತವಿಜ್ಞಾನಿ.  ಶ್ರೀ ಜಗದೀಶ್‌ ಚಂದ್ರ ಬೋಸರು  ಸಸ್ಯ ಪ್ರಪಂಚದೆಡೆಗೆ ತಮ್ಮ ಗಮನ ಹರಿಸಿದರು,  ಮಿಮೋಸ ಪುಡಿಕ (ಮಟ್ಟಿದರೆ ಮುನಿ)  ಗಿಡದ ಅಧ್ಯಯನವನ್ನು ಕೈಗೊಂಡು ಸಸ್ಯ ಚೇತನ, ಪ್ರಜ್ಞೆಯ ಅಧ್ಯಯನಕ್ಕಾಗಿ “ಕ್ರೆಸ್ಕೋಗ್ರಾಫ್‌” ಎಂಬ ಉಪಕರಣವನ್ನು ಅವಿಷ್ಕರಿಸಿದರು. ಆ ಮೂಲಕ ಸಸ್ಯಗಳ ತುಡಿತ, ಮಿಡಿತ, ಜರಗುವಿಕೆ, ನಡುಕ, ಕಂಪನ ಎಲ್ಲವನ್ನೂ ಕಂಡುಕೊಳ್ಳ ಬಹುದಾಗಿತ್ತು. ಇದು ಸಸ್ಯ ಜಗತ್ತಿನ ಅಧ್ಯಯನದಲ್ಲಿ ಹೊಸ ತಿರುವು ಸೃಷ್ಟಿಸಿತು.

ಸಸ್ಯಗಳು ನಿಷ್ಕ್ರಿಯ ಸ್ಥಾವರ ಜೀವಿಗಳು ಎಂಬ ಜಗತ್ತಿನ ವಾದವನ್ನು ಏರು ಪೇರು ಮಾಡಿದ  ಬೋಸರ ಸಂಶೋಧನೆಯನ್ನು ವಿವರಿಸುವ, ಎಮಿಲಿಯ ಟೆರೆಸಿಯಾನೋ ರಚಿಸಿರುವ ಪ್ರಬಂಧಗಳು, “ಕ್ರೆಸ್ಕೋಗ್ರಾಫ್‌” ಛಾಯಾಚಿತ್ರಗಳು , ಬೋಸರ ಸಂಶೋಧನ ಪುಸ್ತಕದಿಂದ ಆಯ್ದ ಪುಟಗಳು ಮತ್ತು ಕಲಾವಿದ ಗಗನೇಂದ್ರನಾಥ ಠಾಗೋರರು, ಬೋಸರ ಸಂಶೋಧನೆಯನ್ನು ತೋರಲು ರಚಿಸಿರುವ ಬಣದ ಚಿತ್ರಣ(ಕುಂಚಕಲಾಕೃತಿಗಳು), ಈ ಪ್ರದರ್ಶಿಕಯ ಪ್ರಮುಖ ವಸ್ತುಗಳು.

ʼಇನ್‌ ಆನಿಮೇಟ್‌ ಸ್ಕ್ರೀಮ್‌ʼ, ಪ್ರೊಫೆಸರರ ತಾಳಕ್ಕೆ ಪ್ರತಿಕ್ರಿಯೆ ತೋರುತ್ತಿರುವ ಅಚಲ ನಿಸರ್ಗ , ಗಗನೇಂದ್ರನಾಥ ಠಾಗೋರ್‌ ಇವರು 1921 ರಲ್ಲಿ ಕಾಗದದ ಮೇಲೆ ಬಿಡಿಸಿರುವ ಜಲಾಧಾರಿತ ವರ್ಣಚಿತ್ರ. ರಿಫಾರ್ಮ್‌ ಸ್ಕ್ರೀಮ್ಸ್‌ ಸರಣಿಯಿಂದ ಆಯ್ದುಕೊಂಡು ಆಧುನಿಕ ರೀತಿಯಲ್ಲಿ ಪುನಃ ಪ್ರಸ್ತುತ ಪಡಿಸಲಾಗಿದೆ.ಸಂ. xxx (1), ಜುಲೈ, 1921, ಪುಟ ಸಂಖ್ಯೆ ಲಭ್ಯವಿಲ್ಲ.

ಜಗದೀಶ್‌ ಚಂದ್ರ ಬೋಸ್‌ ಇವರಿಗೆ ರಾಯಲ್‌ ಸೊಸೈಟಿಯ ಫೆಲೋಶಿಪ್‌ ಗೆ ನಾಮಾಂಕನಗೊಳಿಸುವ ಪ್ರಮಾಣಪತ್ರ, (1920) ಕೃಪೆ: ʼದಿ ರಾಯಲ್‌ ಸೊಸೈಟಿʼ

ಜಗದೀಶ್‌ ಚಂದ್ರ ಬೋಸ್‌ರ ಹಸ್ತಾಕ್ಷರವಿರುವ ಚಾರ್ಟರ್‌ ಪುಸ್ತಕದ ಪುಟ ಸಂ . 96 ಕೃಪೆ: ʼದಿ ರಾಯಲ್‌ ಸೊಸೈಟಿʼ

ಜಗದೀಶ್‌ ಚಂದ್ರ ಬೋಸ್‌ ಇವರು ʼದಿ ರಾಯಲ್‌ ಸೊಸೈಟಿʼ ಗೆ ಪ್ರಸ್ತುತ ಪಡಿಸಿದ ಸಂಶೋಧನಾ ಪತ್ರಗಳ ಮೊದಲ ಪುಟ, “ಆನ್‌ ಮೆಖಾನಿಕಲ್‌ ಆಂಡ್‌ ಎಲೆಕ್ಟ್ರಿಕಲ್‌ ರೆಸ್ಪಾಂಸ್‌ ಇನ್‌ ಪ್ಲಾಂಟ್ಸ್". ಕೃಪೆ: ʼದಿ ರಾಯಲ್‌ ಸೊಸೈಟಿʼ

ʼಬಟಾನಿಕಲ್‌ ಸ್ಕೆಚ್‌ʼ, ಗಗನೇಂದ್ರನಾಥ ಠಾಗೋರರು 1915 ರಲ್ಲಿ ಪೋಸ್ಟ್‌ ಕಾರ್ಡ್ ಮೇಲೆ ಬಿಡಿಸಿರುವ ಜಲಾಧಾರಿತ ವರ್ಣಚಿತ್ರ. ಕೃಪೆ:ದಿ ವಿಕ್ಟೋರಿಯ ಆಂಡ್‌ ಆಲ್ಬರ್ಟ್‌ ಮ್ಯೂಸಿಯಮ್‌, ಲಂಡನ್.‌

ಬಿಸ್ವರೂಪ್‌ ಗಂಗುಲಿ, ಜಗದೀಶ್‌ ಚಂದ್ರ ಬೋಸರು ಇಪ್ಪತ್ತನೇ ಶತಮಾನದ ಆದಿಯಲ್ಲಿ ನಿರ್ಮಿಸಿ ಬಳಸಿದ ದ್ಯುತಿಸಂಶ್ಲೇಷಕ ಬುದ್ಬುದ ಮತ್ತು ಮುದ್ರಣ ಯಂತ್ರ, ಈ ಉಪಕರಣದ ಮೂಲಕ , ಜಲಸಸ್ಯಗಳ ದ್ಯುತಿಸಂಶ್ಲೇಷಕ ಪ್ರಕ್ರಿಯೆಯ ಗತಿಯನ್ನು ಸ್ವಯಂಚಾಲಿತವಾಗಿ ಮುದ್ರಿಸ ಬಹುದಾಗಿತ್ತು. ಕೃಪೆ:ವಿಕಿಮೀಡಿಯ ಕಾಮನ್ಸ್

ದ್ವನಿಸುರುಳಿ ಮತ್ತು ಸಂಪರ್ಕ ಮಾಧ್ಯಮಕ್ಕೆ ಸಂಬಂಧಿಸಿದಂತಹ ರೇಡಿಯೋ ಮತ್ತು ದೂರವಾಣಿ ತಂತ್ರಜ್ಞಾನಗಳು, ಶಬ್ದ, ಸೂಕ್ಷ್ಮದನಿ ಕಂಪನಗಳಿಗೆ ಸಂಬಂಧಿಸಿದ ಸಂಶೋಧನೆಗೆ ಎಣೆ ಮಾಡಿಕೊಟ್ಟಿತ್ತು.  ಈ ಅವಿಶ್ಕಾರಗಳು ಮಾನವ ಮತ್ತು ಮಾನವೇತರ ಜಗತ್ತಿನ ಸಜೀವ –ನಿರ್ಜೀವ ವಸ್ತುಗಳ ನಡುವೆ ಸಂಬಂಧ ಸೃಷ್ಟಿಸಿ, ಸಂವೇದನೆಗಳನ್ನು ದೂರ ದೂರಕ್ಕೆ ಕಳಿಸುವ ಹೊಸ ತಂತ್ರಕ್ಕೆ ದಾರಿ ಮಾಡಿಕೊಟ್ಟಿತು. ರೇಡಿಯೋ ಸಂವೇದನೆಗಳನ್ನು ಪತ್ತೆ ಮಾಡಲು,  ಅರೆವಾಹಕ ಜಂಟಿಗಳನ್ನು ಬಳಸಿದ ಬೆಂಗಾಲಿ ಭೌತವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌  (1858 - 1937) ಇವರ ಕೊಡುಗೆ ಶ್ಲಾಘನೀಯ. ಸೂಕ್ಷ್ಮವಾಹಕಗಳು ಮತ್ತು ತಂತಿ ರಹಿತ ಸಂಪರ್ಕ ಮಾಧ್ಯಮದ ಅವಿಶ್ಕಾರಗಳು, ಇಂದಿನ ಆಧುನಿಕ ಉಪಗ್ರಹ ಸಂಪರ್ಕ ತಂತ್ರಜ್ಞಾನದ ವಿಕಸನಕ್ಕೆ ಕಾರಣವಾಗಿವೆ .  ಸೂಕ್ಷ್ಮ ವಾಹಕ ಕಣಗಳು ಬೋಸರ ಕುತೂಹಲ ಹೆಚ್ಚಿಸಿದ್ದವು.

ಸಸ್ಯಗಳ ಸ್ವಭಾವವನ್ನು ಅರಿಯುವ ಬೋಸರ ಪ್ರಯೋಗಕ್ಕೆ, ಈ ಕಾಣದ ಕಣಗಳ ವಹನ ಕ್ರಿಯೆಯು ಸಹಕಾರಿಯಾಯಿತು. ಸಸ್ಯಗಳು ಸಕ್ರಿಯ ಜೀವಿಗಳು, ಅನ್ವೇಷಣಾತ್ಮಕ  ಸ್ವಭಾವದವು, ಮಾನವರಂತೆಯೇ ಪೂರ್ವ ಅನುಭವದ ಸಂವೇದನೆಗಳನ್ನು ನೆನಪಿಟ್ಟುಕೊಂಡು ಪ್ರತಿಕ್ರಿಯೆ ತೋರುವ ಶಕ್ತಿ ಉಳ್ಳವು ಎಂದು ಬೋಸರು ನಂಬಿದ್ದರು.  ವತ್ತಡ ಮತ್ತು ಉದ್ದೀಪನಕ್ಕೆ ಮಾನವರಂತೆ ಸಸ್ಯಗಳೂ ಪ್ರತಿಕ್ರಿಯೆ ತೋರುತ್ತವೆ.  ಬೋಸರು ತಮ್ಮ ಈ ಅನಿಸಿಕೆಯ ಸತ್ಯವನ್ನು ನಿರೂಪಿಸಲು, ಸಸ್ಯಗಳ ಉದ್ದೀಪನ ಕಂಪನಗಳನ್ನು ಅರಿಯಲು,  “ಕ್ರೆಸ್ಕೋಗ್ರಾಫ್‌” ಎಂಬ ಉಪಕರಣವನ್ನು ಅವಿಷ್ಕರಿಸಿದರು.

ಬೋಸರು ತಮ್ಮ ಪ್ರಯೋಗಗಳನ್ನು ಉಷ್ಣ ಪ್ರದೇಶದ ಸಸ್ಯಗಳು, ಮಿಮೋಸ ಪುಡಿಕ (ಮುಟ್ಟಿದರೆ ಮುನಿ) ಮತ್ತು ಕಾರ್ಡಿಯೋ ಕೇಲಿಕ್ಸ್‌ (ಟೆಲಿಗ್ರಾಫ್‌ ಸಸ್ಯ , ತುರಿಕೆ ಸೊಪ್ಪಿನ ಗಿಡ) ಗಿಡಗಳ ಮೇಲೆ ನೆಡೆಸಿದರು. “ಕ್ರೆಸ್ಕೋಗ್ರಾಫ್‌” ಉಪಕರಣದಲ್ಲಿ, ಗಾಜಿನ ತಟ್ಟೆಯ ಮೇಲೆ ಗಡಿಯಾರದ ಮುಳ್ಳುಗಳಂತೆ ಸೂಕ್ಷ್ಮ ಗೇರುಗಳನ್ನು ದುಂಡಗೆ ಸರಣಿಯಲ್ಲಿ ಅಳವಡಿಸಿದ್ದರು. ಸಸ್ಯಗಳ ಸೂಕ್ಷ್ಮಚಲನಗಳು ಇಲ್ಲಿ ಅಂಕಿತವಾಗಿ ಎರಡು ಲಿವರ್‌ ಗಳ ಮೂಲಕ 10,000 ಪಟ್ಟು ಸಂವರ್ಧನೆಗೊಳ್ಳುತ್ತಿದ್ದವು. ಗಾಜಿನ ತಟ್ಟೆಯ ಮೇಲೆ ಸತತವಾಗಿ ರೇಖೆಗಳು (ಗುರುತು) ಮೂಡುವಂತೆ ಬೋಸರು ಈ ಉಪಕರಣ ರಚಿಸಿದ್ದರು.  ಈ ರೇಖಾ ಗುರುತುಗಳನ್ನು ಸಸ್ಯಗಳ ಹಸ್ತಾಕ್ಷರ ಎಂದು ಬೋಸರು ವರ್ಣಿಸುತ್ತಿದ್ದರು.  ವಿಭಿನ್ನ ಉದ್ದೀಪನ ಅಂಶಗಳಿಗೆ (ತಾಪಮಾನ, ವಿದ್ಯುತ್ತು, ಅನಿಲ ಮತ್ತು ರಾಸಾಯನಿಕಗಳಿಗೆ) ಸಸ್ಯಗಳು ಹೇಗೆ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತವೆ ಎಂದು ಅರಿತರು.

ಸಸ್ಯಗಳ ಕಂಪನದಿಂದ ಮೂಡಿದ, ಸಂವರ್ಧಿಸಿದ ಈ ಮೌನ ಗುರುತುಗಳಿಗೆ ಜಗದೀಶ್‌ ಚಂದ್ರ ಬೋಸರು ದ್ವನಿಯಾದರು.  ಸಸ್ಯಗಳು, ಸಸ್ಯಶಾಸ್ತ್ರ ವಿಜ್ಞಾನಿಗಳ ಪ್ರಯೋಗಗಳಲ್ಲಿ  ಸಸ್ಯಗಳ ಭಾಗಗಳನ್ನು ಸೀಳಿ ಅವುಗಳ ರೂಪ ರಚನೆಯನ್ನು ತಿಳಿಯಲು ಸಹಕಾರಿಯಾದ ನಿಷ್ಕ್ರಿಯ ಜೀವಿಗಳಲ್ಲ ಎಂಬ ಸತ್ಯವನ್ನು ಜಗತ್ತಿಗೆ ಬೋಸರು ತೋರಿದರು.  ಸಸ್ಯ ಜಗತ್ತನ್ನು ಅನ್ವೇಶಿಸಿ, ಸಸ್ಯ ಸ್ವಭಾವವನ್ನು ಅರಿಯಲು, ಸಂವೇದನೆ ಪ್ರತಿಕ್ರಿಯೆಯಿಂದ ಮೂಡಿದ ಗುರುತುಗಳು ಸಹಕಾರಿಯಾದವು.  ಸರಿಯಾದ ಉಪಕರಣಗಳನ್ನು ಬಳಸಿದರೆ ಪ್ರಕೃತಿಯ ದನಿಯನ್ನು ಆಲಿಸಬಹುದು ಎಂದು ಬೋಸರು ನಿರೂಪಿಸಿದರು.  ಸಮಕಾಲೀನ ಬ್ರಿಟಿಷ್ ಸಾಹಿತಿಗಳಾದ ವಿಕ್ಟರ್‌ ಫ್ರಾಂಕ್ಸ್ಟೀವ್‌, ಮೇರಿ ಶೆಲ್ಲಿ ಅಂತಹವರ ಮೇಲೆ ಬೋಸರ ಅನ್ವೇಷಣೆ ಪ್ರಭಾವ ಬೀರಿತು, ಮೇರಿ ಶೆಲ್ಲಿ ತಮ್ಮ “ಎಪೋನಿಯಮ್‌ ಗೋಥಿಕ್‌ ಸೈನ್ಸ್‌ “ ಎಂಬ ವೈಜ್ಞಾನಿಕ ಕಾದಂಬರಿಯಲ್ಲಿ ಈ ವಿಷಯ ಬಣ್ಣಿಸಿದ್ದಾರೆ.  ಸಂವೇದನೆಗಳ ಬಗ್ಗೆ ಮಾನವ ಮತ್ತು ಮಾನವೇತರ ಜಗತ್ತಿನ ಪ್ರತಿಷ್ಠಿತ ಸಿದ್ಧಾಂತಗಳು ತಳ-ಕೆಳಗು ಮಾಡುವ ಬೋಸರ ಈ ಹೊಸ ಬಗೆಯ ಪ್ರಯೋಗಗಳನ್ನು ಅಂದಿನ ವಿಜ್ಞಾನಿಗಳು ಸುಲಭದಲ್ಲಿ ಒಪ್ಪಲು ಸಿದ್ಧವಿರಲಿಲ್ಲ.  ಬೋಸರು ಮಾನಸಿಕ ರೋಗಿ ಎಂದು ಬಣ್ಣಿಸಿ ಅಣಕಿಸಿದರು. 

1921 ರ ಕತೆಯ ಪ್ರಕಾರ, ಬೋಸರು ಕೊಲ್ಕತ್ತದಲ್ಲಿ ಹಾದಿ ಬದಿಯ ಸಸ್ಯವನ್ನು ಕಂಡು ಬೆರಗಾಗಿ , ಸಸ್ಯಶಾಸ್ತ್ರಜ್ಞರಾದರು ಎಂದು ಬಣ್ಣಿಸಲಾಗಿದೆ.  ಬಹುಷ: ಅದು  ಮಿಮೋಸ ಗಿಡವಾಗಿದ್ದಿರ ಬೇಕು.  ಈ ಗಿಡವನ್ನು ಬೆಂಗಾಲಿಯಲ್ಲಿ ಲಜ್ಜುಭಟ್ಟಿ, ಹಿಂದಿಯಲ್ಲಿ ಲಾಜವಂತಿ ಇಲ್ಲವೇ ಚುಯ್‌ ಮುಯ್‌, ತೆಲುಗು ಭಾಷೆಯಲ್ಲಿ ಅಟ್ಟಾ ಪಟ್ಟಿ, ಮಲಯಾಳಂ ಅಲ್ಲಿ “ತೊಟ್ಟವಾಡಿ”, ಎಂದು ಕರೆಯುತ್ತಾರೆ.  ಬಳ್ಳಿಯಂತೆ ಹಬ್ಬುವ ಈ ಸಸ್ಯವು ಬಟಾಣಿ ಜಾತಿಗೆ ಸೇರಿದ್ದು, ಸಂವೇದನ ಶೀಲ ಸೂಕ್ಷ್ಮ ಎಲೆಗಳನ್ನು ಹೊಂದಿರುತ್ತದೆ.

ಈ ಕುತೂಹಲಕಾರಿ ಗಿಡವು ಬೋಸರ ಮನ ಸೆಳೆದು ಐತಿಹಾಸಿಕ, ಜಾಗತಿಕ ಅವಿಷ್ಕಾರಕ್ಕೆ ಹಾದಿ ಮಾಡಿಕೊಟ್ಟಿತು.  ಸಸ್ಯ ಸಂಪದದ ಹೇರಳ ವಿವರ ವರ್ಣನೆಯುಳ್ಳ ಬೋಸರ ಸಸ್ಯಶಾಸ್ತ್ರ ಪುಸ್ತಕದಲ್ಲಿ, ಬೋಸರು ಈ ಗಿಡದ ವಿವಿಧ ಹೆಸರುಗಳನ್ನು ಅಂಕಿತಗೊಳಿಸಿದ್ದಾರೆ.  18 ಮತ್ತು 19 ನೇ ಶತಮಾನದ ಇಂಗ್ಲಿಷ್‌ ಸಾಹಿತ್ಯ ಲೋಕದಲ್ಲಿ, ಹಾಗೂ ಸಸ್ಯ ಇತಿಹಾಸದ ತಾಣಗಳಲ್ಲಿ, ಮಿಮೋಸ ಗಿಡವನ್ನು ನರ ತಂತುಗಳಿರುವ ಸಸ್ಯದಂತೆ ಪ್ರದರ್ಶಿಸಲಾಯಿತು.  ಕೆಲವರು ಪುರುಷ ಮತ್ತು ಸ್ರೀ ಜನನಾಂಗಳಿಗೆ ವಿಚಿತ್ರ ರೂಪಕ ದಂತೆ ಹೋಲಿಸಿ ಬಣ್ಣಿಸಿದ್ದಾರೆ.  (ಜೇಮ್ಸ್‌ ಪೆರ್ರಿ ಯ “ಮಿಮೋಸ: ಆರ್‌‌‌ ದಿ ಸೆಂಸಿಟಿವ್‌ ಪ್ಲಾಂಟ್ , 1779, ಸಸ್ಯಶಾಸ್ತ್ರಜ್ಞ ಜೋಸೆಫ್‌ ಬ್ಯಾಂಕ್ಸ್‌ ಗೆ ಅರ್ಪಿತವಾದ ಕವಿತೆಯಲ್ಲಿ ದೊರೆಯುವ ರೂಪ ವರ್ಣನೆ); ಮಾನವೀಕೃತ ಸೂಕ್ಷ್ಮತೆಯ ಸಂಕೇತ (ವಿಲಿಯಮ್‌ ಕೂಪರ್‌ ನ “ದಿ ಪೊಯಟ್‌, ದಿ ಆಯಸ್ಟರ್‌ ಆಂಡ್‌ ಸೆಂಸಿಟಿವ್‌ ಪ್ಲಾಂಟ್"‌, 1782); ಹಾಗೂ ನಿಸರ್ಗ ಮತ್ತು ಮಾನವ ಭಾವನೆಗಳನ್ನು ಅನ್ವೇಷಿಸುವ ವಿಧಾನ (ಪೆರ್ಸಿ ಬಿಶ್ಶೆ ಶೆಲ್ಲಿ ಯ “ದಿ ಸೆಂಸಿಟಿವ್‌ ಪ್ಲಾಂಟ್”‌, 1830) ಹೀಗೆ ಬಗೆ ಬಗೆಯಲ್ಲಿ ವರ್ಣಿಸಿದರು. ಎರಾಮಸ್‌ ಡಾರ್ವಿನ್‌ ನ “ದಿ ಬಟಾನಿಕ್‌ ಗಾರ್ಡನ್‌ “(1791) ಪುಸ್ತಕದಲ್ಲಿ, ಮಿಮೋಸ ಪುಡಿಕದ ವಿವರಣೆ ಇದ್ದರೂ, ಬೋಸರು ಮೊದಲ ಬಾರಿಗೆ ಮಿಮೋಸದ ಸಂವೇದನಶೀಲತೆಯ ಸಾರ್ಥಕ ದ್ವನಿಯಾದರು.  ಸಿದ್ಧಾಂತಗಳನ್ನು ಕ್ರೂಢೀಕರಿಸಿ ಪ್ರಾಣಿ ಮತ್ತು ಸಸ್ಯ ಜಗತ್ತಿನ ನಡುವೆ ಸಾಮಾನ್ಯವಾಗಿ ಕಾಣಬರುವ ಅಂತರದ ಆಳದಲ್ಲಿ ಅಡಗಿರುವ ಸಾಮ್ಯತೆಯನ್ನು ಬಿಚ್ಚಿಡುವ ಆಶಯದಿಂದ, ಬೋಸರು ಕ್ರೆಸ್ಕೋಗ್ರಾಫ್‌ ಉಪಕರಣವನ್ನು ರೂಪಿಸಿ ಸಾಮಾನ್ಯ ಸ್ಥಿತಿಗಳಲ್ಲಿ ಗೋಚರವಾಗದ ಮಿಮೋಸದ ಅತಿ ಸೂಕ್ಷ್ಮ ಚಲನೆಗಳನ್ನು , ಸಂವೇದನ ಪ್ರತಿಕ್ರಿಯೆಗಳನ್ನು ಅಂಕಿತ ಗೊಳಿಸಿದ್ದಾರೆ.

ಕಲಾವಿದ ಗಗನೇಂದ್ರನಾಥ ಠಾಗೋರರು (1867-1938) ಜಲಾಧಾರಿತ ಬಣ್ಣಗಳನ್ನು ಬಳಸಿ,  ಬೋಸರ ಬಹು ದೂರದರ್ಶ ಅನ್ವೇಷಣೆಗಳನ್ನು ವ್ಯಕ್ತಪಡಿಸುವ ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ.  ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಈ ವ್ಯಂಗ್ಯಚಿತ್ರಗಳು, ಪ್ರಕೃತಿಯಲ್ಲಿ ಲೀನರಾದ ಬೋಸರ ವ್ಯಕ್ತಿತ್ವದ ಸಾಕ್ಷಿಯಾಗಿವೆ.  ಬೋಸರ ಸಂಶೋಧನೆಯು, ಕಲಾವಿದರು, ವಿಜ್ಞಾನಿಗಳು ಮತ್ತು ಸಸ್ಯ ನರಶಾಸ್ತ್ರ-ಜೀವವಿಜ್ಞಾನಿಗಳನ್ನು ಪ್ರೇರೇಪಿಸಿದೆ, ನಂಟು/ರಕ್ತ ಸಂಬಂಧ ಗುರುತಿಸುವ ಅಧ್ಯಯನ, ಆಹಾರ ಸಂಗ್ರಹಣ ತಂತ್ರದಲ್ಲಿ ಅಡಗಿರುವ ಜಟಿಲತೆ, ಯಂತ್ರ ಜಾಣ್ಮೆ ಮತ್ತು  ಹೊಸ ಬಗೆಯ ದೂರ ಸಂಪರ್ಕ ಸಾಧನಗಳ ಅವಿಷ್ಕಾರಕ್ಕೆ  ಸಂಭಂದಿಸಿದಂತೆ ಅನೇಕ ಸಂಶೋಧನೆಗಳಿಗೆ ತಳಪಾಯವಾಗಿದೆ.  ಮಿಮೋಸ ದ್ವನಿ ಎತ್ತುತಿದೆ, ಬೋಸರು ತಮ್ಮ ಪ್ರಯೋಗಗಳ ಮೂಲಕ ಅದರ ದ್ವನಿಯನ್ನು ಆಲಿಸುವ ಬಗೆಯನ್ನು ಹೇಳಿಕೊಟ್ಟಿದ್ದಾರೆ.

ಪಠ್ಯ © 2020   ಎಮಿಲಿಯ ಟೆರೆಸಿಯಾನೋ

ಬಿಸ್ವರೂಪ್‌ ಗಂಗುಲಿ, ಬೋಸ್‌ ಇನ್ಸ್ಟಿಟಯೂಟ್, ಕೊಲ್ಕತ್ತ ದಲ್ಲಿರುವ ಜಗದೀಶ್‌ ಚಂದ್ರ ಬೋಸರ ಕ್ರೆಸ್ಕೋಗ್ರಾಫ್‌ ಯಂತ್ರ.

 

ಜಗದೀಶ್‌ ಚಂದ್ರ ಬೋಸರ ಪ್ರಯೋಗಳ ಟಿಪ್ಪಣಿಗಳ ಪುಸ್ತಕದ ಒಂದು ಪುಟ, ಕೃಪೆ: ಬೋಸ್‌ ಇನ್ಸ್ಟಿಟಯೂಟ್, ಕೊಲ್ಕತ್ತ


Emilia_final.jpg

ಎಮಿಲಿಯ ಟೆರೆಸಿಯಾನೋ ಪರಿಚಯ

ಎಮಿಲಿಯ ಟೆರೆಸಿಯಾನೋ, ಬರಹಗಾರರು ಮತ್ತು ಕಲಾ ಇತಿಹಾಸದ ಬೋಧಕರು. ಆಧುನಿಕ ಮತ್ತು ಸಮಕಾಲೀನ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ದಕ್ಷಿಣ ಏಷಿಯಾದ ಕಲೆಯೆಡೆಗೆ ವಿಶೇಷ ಒಲವು ತೋರಿ, ಸಂಶೋಧನೆಯಲ್ಲಿ ತೊಡಗಿದ್ದಾರೆ. ಇಂದಿನ ದಿನಗಳಲ್ಲಿ, ಕಲೆ, ನಿಸರ್ಗ ಮತ್ತು ದಕ್ಷಿಣ ಭೂ-ಭಾಗದ ಭವಿಷ್ಯಗಳ ಬಗೆಗೆ ಸ-ವಿವರ ಕೃತಿಯನ್ನು ರಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಎಮಿಲಿಯ, ʼಯೂನಿವರ್ಸಿಟಿ ಕಾಲೇಜ್‌ʼ, ಲಂಡನ್‌ ನಿಂದ ʼಫಿಲಾಸಫಿ ಆಂಡ್‌ ಹಿಸ್ಟರಿ ಆಫ್‌ ಆರ್ಟ್‌ʼ (ಮೊದಲ ದರ್ಜೆ ಹಾನರ್ಸ್)‌ ಬಿ.ಎ ಪದವಿ, ಮತ್ತು  ʼಹಿಸ್ಟರಿ ಆಫ್‌ ಆರ್ಟ್‌ʼ ವಿಷಯದಲ್ಲಿ ಎಮ್.ಎ ಪದವಿ ಹಾಗೂ ʼಕೋರ್ಟಾಲ್ಡ್‌  ಇನ್ಸ್ಟಿಟ್ಯೂಟ್‌ ಆಫ್‌ ಆರ್ಟ್‌ʼ ಸಂಸ್ಥೆಯಿಂದ ಪಿ.ಎಚ್.ಡಿ ಪಡೆದಿದ್ದಾರೆ.  ಇವರಿಗೆ ನೆಹರು ಟ್ರಸ್ಟ್‌ ಪುರಸ್ಕಾರವು (2008) ಮತ್ತು ದಿ ವಿಕ್ಟೋರಿಯ ಆಂಡ್‌ ಆಲ್ಬರ್ಟ್‌ ಮ್ಯೂಸಿಯಮ್‌ ನ ಎ.ಎಚ್.ಆರ್.ಸಿ ಕೊಲಾಬೊರೇಟಿವ್‌ ಡಾಕ್ಟೋರಲ್‌ ವಿದ್ವತ್ತು ಪ್ರಶಸ್ತಿ  ದೊರೆತಿವೆ(2008-2012).  ʼವಿ ಆಂಡ್‌ ಏʼ  ಸಂಸ್ಥಾನದಲ್ಲಿ ಹಿರಿಯ ಪರಿಪಾಲಕರಾದ ದಿವ್ಯಾ ಪಟೇಲ್‌ ಇವರ ಮೇಲ್ವಿಚಾರಣೆಯಲ್ಲಿ , ಎಮಿಲಿಯಾ, ಯೂರೋಪ್‌ ಅಲ್ಲಿಯೇ ಬೃಹತ್‌ ಸಂಗ್ರಹಣಾಲಯವಾದ  ʼಸೌಥ್‌ ಏಷಿಯಾ ಕಲೆಕ್ಷನ್‌ʼ (ca.200) ಅಲ್ಲಿ ಇರುವ ವಸ್ತುಗಳ ಬಗ್ಗೆ ಸುದೀರ್ಘ ಪಟ್ಟಿ ವಿವರಣೆ ತಯಾರಿಸಿದ್ದಾರೆ. 


Kannada_Read.png

Kannada_Watch.png
 

Kannada_Attend.png

ಹಿಂದಿನ ಪ್ರದರ್ಶಿಕೆ

ಪಾಂಡುರಂಗ ಖಂಖೋಜೆ

 

ಮುಂದಿನ ಪ್ರದರ್ಶಿಕೆ

ಜಾನಕಿ ಅಮ್ಮಾಳ್‌