‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಡಾರ್ನಿತ್ ಡೋಹರ್ತಿ ಇವರು ಆರ್ಖೈವಿಂಗ್ ಈಡನ್ ಸಂಶೋಧನೆಯಲ್ಲಿ, ಬೀಜರಾಶಿಯು ಮನಸ್ಸಿಗೆ ಮುದ ನೀಡುವುದಲ್ಲದೆ, ಪರಿಸರದ ಜೀವ ವೈವಿಧ್ಯವನ್ನು ಸಂರಕ್ಷಿಸಲು ಬಹಳಷ್ಟು ಜನರ ಪ್ರಯಾಸವನ್ನು ಅರಿಯುವ ಯತ್ನ ಮಾಡಿದ್ದಾರೆ.
ವಿಶ್ವದೆಲ್ಲೆಡೆ ಇರುವ ಸಮಗ್ರ ಅಂತರ್ರಾಷ್ಟ್ರೀಯ ಬೀಜ ಕೋಟೆಗಳು ಮತ್ತು ಪ್ರಖ್ಯಾತ ಜೀವ-ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಈ ಸಂಶೋಧನೆ ಮುಂದುವರೆದಿದೆ. ಸಂಗ್ರಹಾಲಯಗಳಲ್ಲಿ ಕಲೆ ಹಾಕಿ ಸಂರಕ್ಷಿಸಲಾದ ವಿವಿಧ ಬೀಜ ನಮೂನೆಗಳು ಮತ್ತು ಟಿಷ್ಯೂ ನಮೂನೆಗಳನ್ನು ಸಂಗ್ರಹಿಸುವಾಗ ಅವುಗಳ ಜೀವ ಸದೃಢತೆಯನ್ನು ಪರೀಕ್ಷಿಸಲು ಬಳಸುವ ಎಕ್ಸ್-ರೇ ಉಪಕರಣದ ಮೂಲಕ ದೊರೆತ ವಿವರಗಳನ್ನು, ಸಂಯೋಜಿಸಿದ್ದಾರೆ. ಮಾನವ ಕಣ್ಣಿಗೆ ನಿಲುಕದ ಈ ಚಿತ್ರಗಳನ್ನು ತಂತ್ರಜ್ಙಾನದ ಮೂಲಕ ಸೆರೆ ಹಿಡಿಯಲಾಗಿದೆ. ವಂಶವಾಹಕ ಒಕ್ಕೂಟಕ್ಕೆ ಸಂಬಂಧಿಸಿದಂತೆ, ದರ್ಶನಶಾಸ್ತ್ರ, ಮಾನವಶಾಸ್ತ್ರ ಮತ್ತು ಪರಿಸರದ ಅನೇಕ ಜಟಿಲ ವಿಷಯಗಳಲ್ಲಿ ಅಡಗಿರುವ ವಿಜ್ಞಾನ ಮತ್ತು ಮಾನವ ಪಾತ್ರದ ಬಗೆಗೆ ಬೆಳಕು ಹರಿಸುತ್ತದೆ.
ಎಲ್ಲಾ ಚಿತ್ರಗಳು: ಕೃಪೆ :ಡಾರ್ನಿತ್ ಡೋಹರ್ತಿ
ಮಾಧ್ಯಮ: ಎಕ್ಸ್-ರೇ ಪ್ರಿಂಟ್ಸ್
ವರ್ಷ: 2008- ಪ್ರಸಕ್ತ
ಕಲಾಕಾರರ ಪರಿಚಯ
ಡೊರ್ನಿತ್ ಡೊಹರ್ತಿ , ಅಮೇರಿಕದ ಕಲಾಕಾರರು, 2012 ರಿಂದ ಗುಗ್ಗೆನ್ ಹೈಮ್ ಫೌಂಡೇಶನ್ ಫೆಲೋ, ಇವರು ಛಾಯಾಗ್ರಹಣ, ವೀಡಿಯೋ ಮತ್ತು ವೈಜ್ಞಾನಿಕ ಪ್ರತಿಕೃತಿ ಮುಂತಾದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇಗವಾಗಿ ಸಾಗುತ್ತಿರುವ ಮಾನವನ ಜೀವನಶೈಲಿಯಿಂದಾಗಿ, ಗೌಣವಾಗಿರುವ ಸಂಸ್ಕೃತಿ, ತತ್ವಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಿಗೆ ತಮ್ಮ ಅಧ್ಯಯನದಲ್ಲಿ ಆದ್ಯತೆ ನೀಡಿದ್ದಾರೆ.
ಟೆಕ್ಸಸ್ ನಲ್ಲಿರುವ, ಹೌಸ್‌ಟನ್, ಅಲ್ಲಿ ಡೊಹರ್ತಿ ಜನಿಸಿದರು. ಇವರು ರೈಸ್ ವಿಶ್ವವಿದ್ಯಾಲಯದಿಂದ ಬಿ.ಏ /ಲೌಡ್ ಪದವಿ ಪಡೆದಿದ್ದಾರೆ, ನಂತರ ಯೇಲ್ ವಿಶ್ವವಿದ್ಯಾಲಯದಿಂದ ಫೋಟೋಗ್ರಫಿಯಲ್ಲಿ ಎಮ್.ಎಫ್.ಏ ಪದವಿ ಪಡೆದಿದ್ದಾರೆ, ಪ್ರಸಕ್ತ, ಸೌಥ್ ಲೇಕ್ ನಿವಾಸಿಯಾಗಿದ್ದು, ನಾರ್ಥ್ ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಪ್ರೊಫೆಸರ್ ಆಗಿ 1996 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಡೊಹರ್ತಿ ಅವರ ಕಲಾಕೃತಿಗಳನ್ನು ಸಂಯುಕ್ತ ರಾಷ್ಟ್ರದ ಎಲ್ಲೆಡೆ ಪ್ರದರ್ಶಿಸಲಾಗಿದೆ. ಆಮನ್ ಕಾರ್ಟರ್ ಮ್ಯೂಸಿಯಮ್ ಆಫ್ ಅಮೇರಿಕನ್ ಆರ್ಟ್, ಫೋರ್ಟ್ ವರ್ಥ್, ಟಿ.ಎಕ್ಸ್, ದಿ ಆರ್ಟ್ ಮ್ಯೂಸಿಯಮ್ ಆಫ್ ಸೌಥ್ ಈಸ್ಟ್ ಟೆಕ್ಸಸ್, ಬೀಮೌಂಟ್, ಟಿ.ಎಕ್ಸ್ ಮುಂತಾದೆಡೆ ಪ್ರದರ್ಶಿಸಲಾಗಿದೆ. ಡೊಹರ್ತಿ ಅವರ ರಚನೆಗಳನ್ನು ಅಮೇರಿಕನ್ ವೇ ಪತ್ರಿಕೆ ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ , ಹೈಪರ್ ಅಲೆರ್ರ್ಜಿಕ್ , ನ್ಯಾಷನಲ್ ಜಿಯೋಗ್ರಾಫಿಕ್, ನ್ಯೂಯಾರ್ಕರ್ , ಫೋಟೋಭೂತ್, ಆಕ್ಸಫೋರ್ಡ್ ಅಮೇರಿಕನ್ ಜರ್ನಲ್, ಆಕ್ಸಫೋರ್ಡ್ ಲಿಟರರಿ ಜರ್ನಲ್, ಸ್ಮಿತ್ಸೊನಿಯನ್ ಮ್ಯಾಗ್‌ಜೈನ್ ಮುಂತಾದ ಪತ್ರಿಕೆಗಳಲ್ಲಿ ಪ್ರಕಾಶಿಸಲಾಗಿದೆ.