ರಿ ಕ್ರಿಯೇಟಿಂಗ್ ದಿ ರೋಈ : ದಿ ಶ್ರಬ್ ಲ್ಯಾಂಡ್ ಆಫ್ ಥಾರ್ ಡೆಸರ್ಟ್
ಪ್ರದೀಪ್ ಕ್ರಿಶನ್ ಸಂಜೆ | 6.30 | 21 ಆಗಸ್ಟ್ 2020
ಜೈಪುರ ಅಭಿವೃದ್ಧಿ ಪ್ರಾಧಿಕಾರವು (ಜೆಡಿಎ) , 2016 ರ ಜನವರಿಯಲ್ಲಿ ಪ್ರದೀಪ್ ಕ್ರಿಶನ್ ಅವರಿಗೆ ಜೈಪುರ ನಗರದ ಈಶಾನ್ಯ ಭಾಗದಲ್ಲಿ ಒಂದು ಬರಡು ಮರಳು ದಿಣ್ಣೆಯನ್ನು ಒಪ್ಪಿಸಿ, ಅದನ್ನು ಸಾರ್ವಜನಿಕ ಉದ್ಯಾನವನವನ್ನಾಗಿ ರೂಪಿಸಿ ಅಭಿವೃದ್ಧಿ ಪಡಿಸುವಂತೆ ಕೋರಿತು.
ಪ್ರದೀಪ್ ಕ್ರಿಶನ್ ಅವರು ಈ ಹೊತ್ತಿಗಾಗಲೇ ಜೋಧ್‌ಪುರದಲ್ಲಿ 70 ಹೆಕ್ಟೇರ್ ವಿಸ್ತೀರ್ಣದ ಬಂಡೆಕಲ್ಲಿನ ಬೆಟ್ಟವನ್ನು ʼರಾವ್ ಜೋಧಾ ಮರುಭೂಮಿ ಬಂಡೆ ಉದ್ಯಾನವನʼವಾಗಿ ರೂಪಿಸಿದ್ಧರು. ಇದೇ ಮಾದರಿಯಲ್ಲಿ , ಮರಳುಗಾಡನ್ನು ಪುನರುಜ್ಜೀವನಗೊಳಿಸುವ ಆಸಕ್ತಿ ಹೊಂದಿದ್ದರು.
ಬೆಂಗಳೂರು ವಿಜ್ಞಾನ ವೇದಿಕೆಯ ಈ ವಿಶೇಷ ಭಾಷಣದಲ್ಲಿ ಪ್ರದೀಪ್ ಕ್ರಿಶನ್ , ತಾವು ಅಭಿವೃದ್ಧಿ ಪಡಿಸಿರುವ ʼಕಿಶನ್ ಬಾಗ್” ಉದ್ಯಾನವನವು, ಹೇಗೆ ಕಾಣ ಬಂದವರನ್ನು ಕೈಬೀಸಿ ಕರೆಯುತ್ತದೆ ಎಂದು ವಿವರಿಸುತ್ತಾರೆ, ಮುಖ್ಯವಾಗಿ ʼರೋಈ’ ಕುರುಚಲು ಭೂಮಿಗೆ ಸ್ವಂತ ವಾಗಿರುವ ಬಂಡೆಗಳು ಮತ್ತು ಗಿಡಗಳು, ಅಲ್ಲಿನ ಸಸ್ಯತಾಣದ ಹಲವು ಅಂಶಗಳನ್ನು ಒಳಗೊಂಡಂತೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಥಾರ್ ಮರುಭೂಮಿಯನ್ನು ನೆನೆಸಿಕೊಂಡರೆ , ʼ ರೋಈʼ ಶಬ್ದವು ಜನಮಾನಸದಲ್ಲಿ ಮರುಕಳಿಸುವಂತೆ ಮಾಡುವುದೇ ಕಿಶನ್ ಬಾಗ್ ಉದ್ಯಾನವನದ ಮೂಖ್ಯ ಉದ್ದೇಶ ಎಂದು ಹೇಳುತ್ತಾರೆ. ಈ ಉದ್ಯಾನವನಕ್ಕೆ ಭೇಟಿ ನೀಡಿ, ಛಾಯಾಚಿತ್ರಣ ಮಾಡಿ ಇಂತಹ ಭೂ ವಿನ್ಯಾಸವನ್ನು ಒಟ್ಟಾರೆ ಸಂರಕ್ಷಿಸಲು, ಇದು ಮೊದಲ ಹೆಜ್ಜೆಯಾಗಿದೆ.
ಚಲನಚಿತ್ರಕಾರರೊಂದಿಗೆ ಸಂಭಾಷಣೆ – ದೇಶೀಯ ಆಹಾರ ಸಂಸ್ಕೃತಿಯ ಬಗೆಗೆ ಸಾಕ್ಷ್ಯಚಿತ್ರೀಕರಣ
ಡಾಲಿ ಕಿಕಾನ್ ಮತ್ತು ನೀಲಾಂಜನ್ ಭಟ್ಟಾಚಾರ್ಯ | ಸಂಜೆ 4.00 ಗಂಟೆ | 22 ಆಗಸ್ಟ್ 2020
ಮಾನವ ಶಾಸ್ತ್ರಜ್ಞರು ಡಾಲಿ ಕಿಕಾನ್ ಚಲನಚಿತ್ರಕಾರ ನೀಲಾಂಜನ್ ಭಟ್ಟಾಚಾರ್ಯ ಇವರ ನಡುವೆ ಸಂಭಾಷಣೆ, ತಮ್ಮ ಸಾಕ್ಷ್ಯಚಿತ್ರಗಳಾದ ʼಸೀಸನ್ಸ್ ಆಫ್ ಲೈಫ್ʼ : ಯುದ್ಧ ವಿರಾಮದಲ್ಲಿ ಬಿದಿರು ಕಳಲೆಯನ್ನು ಆರಿಸಿ ಉಪ್ಪಿನಕಾಯಿ ಮಾಡುವ ಬಗೆ ಮತ್ತು ʼಜೋಹರ್: ವೆಲ್ಕಮ್ ಟು ಅವರ್ ವರ್ಲ್ಡ್ʼ ಬಗೆಗೆ ಮಾತನಾಡುತ್ತಾರೆ. ಈ ಎರಡೂ ಸಾಕ್ಷ್ಯ ಚಿತ್ರಗಳು ಭಾರತೀಯ ಅಡಿಗೆ ಮತ್ತು ಆಹಾರ ಪದ್ಧತಿಯಲ್ಲಿ ಬಹುಪಾಲು ಗೌಣವಾಗಿರುವ ಸ್ಥಳೀಯ ಆಹಾರ ಸಂಸ್ಕೃತಿ ಮತ್ತು ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತವೆ.
ಸಾಲ್ವಿಂಗ್ ದಿ ಪ್ರಾಬ್ಲಮ್ ಆಫ್ ಹಂಗರ್
ಗೇಬ್ರಿಲಾ ಸೋಟೋ ಲವೇಗ | ಸಂಜೆ 6.30 ಗಂಟೆ | 22 ಆಗಸ್ಟ್ 2020
1960 ರ ಸುಮಾರಿಗೆ, ಜನಸಂಖ್ಯಾ ಸ್ಫೋಟ ಮತ್ತು ʼಜಗತ್ತಿನ ಹಸಿವುʼ ತಣಿಸಲು ಆಹಾರ ಸಂಪೂರ್ತಿ, ಇವೇ ವಿಶ್ವ ನೀತಿಯ ಮುಖ್ಯ ಕಳವಳವಾಗಿತ್ತು. ವಿಜ್ಞಾನಿಕವಾಗಿ, ಅದರಲ್ಲೂ ಕೃಷಿ ವಿಜ್ಞಾನದ ಮೂಲಕ ಹಸಿವನ್ನು ನೀಗುವುದೇ ಸರಿಯಾದ ಸಮಾಧಾನವಾಗಿ ಕಂಡುಬಂದಿತ್ತು. ಮೆಕ್ಸಿಕೋ ಮೂಲದಿಂದ ಪ್ರಾರಂಭವಾಗಿ ಇಡೀ ಜಗತ್ತಿಗೇ ಪ್ರಸರಿಸಿದ ಹೊಸ ಬಗೆಯ ವೈಶ್ವಿಕ ಚಳುವಳಿ, ʼಹಸಿರು ಕ್ರಾಂತಿʼ ಯಾಗಿ ಪರಿಣಮಿಸಿತ್ತು, ಈ ಒಂದು ವೈಶ್ವಿಕ ಚಳುವಳಿಯು ವಿಭಿನ್ನ ಜನಸಮೂಹಗಳ ಪರಿಸರ, ಸಮಾಜ ಮತ್ತು ಆರ್ಥಿಕತೆಯ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿ ಬದಲಾವಣೆಗೆ ಎಣೆ ಮಾಡಿತು ಎಂದು ನಂತರದಲ್ಲಿ ಅರಿವಿಗೆ ಬಂದಿದೆ. ಅಭಿವೃದ್ಧಿಯ ಈ ಹಾದಿಯು ಬೇರೆಯದೇ ತಿರುವನ್ನು ಹೊಂದಬಹುದಿತ್ತು.
ಆನ್ ಆರ್ಖೈವಿಂಗ್ ಈಡನ್: ವಿಶ್ವದೆಲ್ಲೆಡೆ ಇರುವ ಬೀಜ ಕೋಟೆಗಳ ದಾಖಲಿಸುವ ಕಾರ್ಯದಲ್ಲಿ ಎದುರಾಗುವ ತೊಡಕುಗಳು
ಡಾರ್ನಿತ್ ಡೋಹರ್ತಿ | ಗಿಯೋವನ್ನಿ ಅಲೋಯ್ | ಸಂಜೆ 6.30 ಗಂಟೆ | 23 ಆಗಸ್ಟ್ 2020
ಡಾರ್ನಿತ್ ಡೋಹರ್ತಿಯವರು, ವಿಶ್ವದೆಲ್ಲೆಡೆ ಇರುವ ಸಮಗ್ರ ಅಂತರ್ರಾಷ್ಟ್ರೀಯ ಬೀಜ ಕೋಟೆಗಳು ಮತ್ತು ಪ್ರಖ್ಯಾತ ಜೀವ=ವಿಜ್ಞಾನಿಗಳ ಸಹಭಾಗಿತ್ವದಲ್ಲಿ 2008 ರಿಂದ ಸತತ ಸಂಶೋಧನೆ ಮುಂದುವರಿಸಿದ್ದಾರೆ. ಇವುಗಳಲ್ಲಿ ದಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟಮೆಂಟ್ ಆಫ್ ಅಗ್ರಿಕಲ್ಚರ್ , ಕೊಲಾರಾಡೋ ದಲ್ಲಿರುವ ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸಸ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ರಿಸೋರ್ಸಸ್ ಪ್ರಿಸರ್ವೇಶನ್, ದಿ ಮಿಲೇನಿಯಮ್ ಸೀಡ್ ಬ್ಯಾಂಕ್, ಇಂಗ್ಲೈಂಡ್ ನ ಕ್ಯೂ ಪ್ರದೇಶದ ರಾಯಲ್ ಬಟಾನಿಕ್ ಗಾರ್ಡನ್ಸ್ ಮತ್ತು ಆಸ್ಟ್ರೇಲಿಯಾದ ಪ್ಲಾಂಟ್ ಬ್ಯಾಂಕ್, ತ್ರೆಟಂಡ್ ಫ್ಲೋರಾ ಸೆಂಟರ್ ಹಾಗೂ ಕಿಂಗ್ಸ್ ಪಾರ್ಕ್ ಬಟಾನಿಕ್ ಗಾರ್ಡನ್ಸ್ ಪ್ರಮುಖವಾದವು.
ಹವಾಮಾನ ವೈಪರಿತ್ಯ ಮತ್ತು ಕ್ಷೀಣಿಸುತ್ತಿರುವ ಜೀವ ವೈವಿದ್ಯತೆಯ ಈ ಯುಗದಲ್ಲಿ, ಬೀಜ ಕೋಟೆಗಳು ಬಹು ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ಬೀಜಗಳ ಸಂಗ್ರಹಣೆ, ಬೀಜಗಳ ಜೀವ ವಿಜ್ಞಾನ ಅಧ್ಯಯನ, ಸಂಶೋಧನೆ ಹಾಗೂ ಸುರಕ್ಷಿತ ಕಪಾಟು, ಕೋಟೆಗಳಲ್ಲಿ ಅರಣ್ಯ ಸಸ್ಯಕುಲ ಮತ್ತು ಕೃಷಿ ಸಂಪದದ ಬೀಜ ನಮೂನೆಗಳನ್ನು ಸಂರಕ್ಷಿಸುವುದು, ಅನುವಂಶಿಕ ಜೀವ ವೈವಿದ್ಯತೆಯನ್ನು ಕಾಪಾಡಿಕೊಳ್ಳಲು ಅನಿವಾರ್ಯ. ಸಂಗ್ರಹಾಲಯಗಳಲ್ಲಿ ಕಲೆ ಹಾಕಿ ಸಂರಕ್ಷಿಸಲಾದ ವಿವಿಧ ಬೀಜ ನಮೂನೆಗಳು ಮತ್ತು ಟಿಷ್ಯೂ ನಮೂನೆಗಳನ್ನು ಸಂಗ್ರಹಿಸುವಾಗ, ಅವುಗಳ ಜೀವ ಸದೃಢತೆಯನ್ನು ಪರೀಕ್ಷಿಸಲು ಬಳಸುವ ಎಕ್ಸ್-ರೇ ಉಪಕರಣದ ಮೂಲಕ ದೊರೆತ ವಿವರಗಳನ್ನು, ಸಂಯೋಜಿಸುತ್ತಾರೆ. ಮಾನವ ಕಣ್ಣಿಗೆ ನಿಲುಕದ ಈ ಚಿತ್ರಗಳನ್ನು ಎಕ್ಸ್-ರೇ ತಂತ್ರಜ್ಙಾನದ ಮೂಲಕ ಸೆರೆ ಹಿಡಿಯಲಾಗುತ್ತದೆ. ಈ ಚಿತ್ರಗಳು , ವಂಶವಾಹಕ ಒಕ್ಕೂಟಕ್ಕೆ ಸಂಬಂಧಿಸಿದಂತೆ, ದರ್ಶನಶಾಸ್ತ್ರ, ಮಾನವಶಾಸ್ತ್ರ ಮತ್ತು ಪರಿಸರದ ಅನೇಕ ಜಟಿಲ ವಿಷಯಗಳಲ್ಲಿ ಅಡಗಿರುವ ವಿಜ್ಞಾನ ಮತ್ತು ಮಾನವ ಪಾತ್ರದ ಬಗೆಗೆ ಬೆಳಕು ಹರಿಸುವುದಲ್ಲದೆ, ಜೀವನ ಹಾಗೂ ಕಾಲಮಾನದ ಬಗ್ಗೆ ಸ್ಥೂಲ ಮತ್ತು ಸೂಕ್ಷ್ಮ ರೂಪದಲ್ಲಿ ಕಾವ್ಯಾತ್ಮಕ ಪ್ರಶ್ನೆ ಗಳಿಗೂ ಎಣೆ ಮಾಡಿಕೊಡುತ್ತವೆ.
ಕಲಾ ಇತಿಹಾಸಕಾರರಾದ ಗಿಯೋವನ್ನಿ ಅಲೋಯ್ ಪ್ರಕೃತಿಯ ಸೊಬಗನ್ನು ‘ವಿಜುಯಲ್ ಕಲ್ಚರ್’ ನಲ್ಲಿ ವರ್ಣಿಸಿದ್ದಾರೆ, ಡೊರ್ನಿತ್ ಡೊಹರ್ತಿ ಮತ್ತು ಗಿಯೋವನ್ನಿ ಅಲೋಯ್ ನಡುವಣ ಈ ಸಂಭಾಷಣೆಯಲ್ಲಿ, ಡೊರ್ನಿತ್ ತಮ್ಮ ಕಲಾ ಅಭ್ಯಾಸ, ಆರ್ಥಿಕ ವ್ಯವಸ್ಥೆ, ರಾಜಕೀಯ ಇತಿಹಾಸ, ವಲಸೆ ಮಾರ್ಗಗಳು ಇವೇ ಮುಂತಾದ ಕ್ಷೇತ್ರಗಳೊಂದಿಗೆ ಹೇಗೆ ಬೀಜ ಕೋಟೆಗಳು ಬೆಸೆದುಕೊಂಡಿವೆ ಮತ್ತು ಜೀವ ವೈವಿದ್ಯತೆಯನ್ನು ಕಾಪಾಡಿಕೊಳ್ಳಲು ಜೀವ ವಿಜ್ಞಾನಿಗಳು, ಸಂಗೋಪನ ಸಂಸ್ಥೆಗಳು ಮಾಡುತ್ತಿರುವ ಪ್ರಯಾಸ ಇವುಗಳ ಬಗ್ಗೆ ಚರ್ಚಿಸುತ್ತಾರೆ.
ಜಾನಕಿ ಅಮ್ಮಾಳ್ ಅವರ ಬಗ್ಗೆ
ವಿನಿತ ದಾಮೋದರನ್ | ಸಂಜೆ 6.30 ಗಂಟೆ | 25 ಆಗಸ್ಟ್
ವಿನಿತ ದಾಮೋದರನ್, ಆಧುನಿಕ ಭಾರತದ ಐತಿಹಾಸಕಾರರು, ಇಡೀ ದಕ್ಷಿಣ ಭೂಭಾಗದ ಸತತ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು, ಬಿಹಾರದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಿಂದ ಹಿಡಿದು ದಕ್ಷಿಣ ಏಷಿಯಾದ ಪರಿಸರ ಇತಿಹಾಸದ ವರೆಗೂ, ಹಿಂದು ಮಹಾ ಸಾಗರದಲ್ಲಿ ಉಂಟಾಗುವ ಹವಾಮಾನ ಬದಲಾವಣೆಗಳನ್ನು ಸಹ ಕುರಿತಂತೆ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅದರ ನುಡಿ ಕೇಳಿ ಬರುತ್ತಿದೆಯೇ?
ಎಮಿಲಿಯ ಟೆರೆಸಿಯಾನೋ | ಸಂಜೆ 6.30 ಗಂಟೆ | 28 ಆಗಸ್ಟ್ 2020
ತಂತಿ ರಹಿತ ಸಂಪರ್ಕ ಸಾಧನೆಯ ಅವಿಷ್ಕಾರದ ನಂತರ ಭೌತ ಶಾಸ್ತ್ರಜ್ಞ ಶ್ರೀ ಜಗದೀಶ್ ಚಂದ್ರ ಬೋಸರು ಸಸ್ಯ ಪ್ರಪಂಚದೆಡೆಗೆ ತಮ್ಮ ಗಮನ ಹರಿಸಿದರು. ಭೌತ ಶಾಸ್ತ್ರ ಮತ್ತು ಜೀವ ವಿಜ್ಞಾನವನ್ನು ಮೆಳೈಸುತ್ತಾ ಜೀವ-ಭೌತ ಶಾಸ್ತ್ರದ ಕ್ಷೇತ್ರದಲ್ಲಿ ಮುಂದುವರೆದ ಹೊಸ ದಾಖಲೆಯನ್ನು ಸೃಷ್ಟಿಸುವ ಅಧ್ಯಯನವನ್ನು ಕೈಗೊಂಡು ಸಸ್ಯ ಚೇತನ, ಪ್ರಜ್ಞೆಯ ಅಧ್ಯಯನಕ್ಕಾಗಿ ಕ್ರೆಸ್ಕೋಗ್ರಾಫ್ ಎಂಬ ಉಪಕರಣವನ್ನು ಅವಿಷ್ಕರಿಸಿದರು.
ಬೋಸರು ಸದಾ ತಮ್ಮ ಸಂಶೋಧನೆಗಳಲ್ಲಿ ಬಳಸುತ್ತಿದ್ದ ʼಮಟ್ಟಿದರೆ ಮುನಿʼ ಗಿಡವು ಭಾಷಣದ ಕೇಂದ್ರ ಬಿಂದುವಾಗಿದೆ. ಕಲಾವಿದ ಗಗನೇಂದ್ರನಾಥ ಠಾಗೋರರ ಬಗೆಗೆ ಹಾಗೂ ಅವರು ಬಿಡಿಸಿರುವ ಕಲಾಕೃತಿ, ʼಕಾರ್ಯ ನಿರತ ಬೋಸರʼ ಕಾಲ್ಪನಿಕ ಚಿತ್ರವನ್ನು ಕುರಿತ ಚರ್ಚೆ ಕೂಡ ಸಮ್ಮಿಲಿತವಾಗಿದೆ. ಮಾನವ ಜಗತ್ತಿನ ಹೊಸ್ತಿಲ್ಲಿ, ಬೋಸರ ಸಸ್ಯ ಪ್ರಪಂಚದ ಸಂಶೋಧನೆಯನ್ನು ಪರಿಚಯಿಸುವ ಈ ಕಾಲ್ಪನಿಕ ಚಿತ್ರಗಳಲ್ಲಿ, ಕೃತಕ, ಶ್ರವ್ಯ ಮತ್ತು ಸತ್ಯದ ಭಾವಗಳು ಹೊರಹೊಮ್ಮಿವೆ. ಬೋಸರು ಹುಟ್ಟಿ 150 ವರ್ಷಗಳು ಕಳೆದಿದ್ದರೂ, ಅವರ ಸಂಶೋಧನೆಯಿಂದ ಕಲಾವಿದರು, ವಿಜ್ಞಾನಿಗಳು ಮತ್ತು ಸಸ್ಯ ನರಶಾಸ್ತ್ರ ಜೀವವಿಜ್ಞಾನಿಗಳು ಏನೆಲ್ಲಾ ಕಲಿಯಬಹುದು ಎಂಬುದನ್ನು ಪ್ರತಿಬಿಂಬಿಸುತ್ತದೆ.
ಜಾನ್ ಇನ್ನ್ಸ್ ಸೆಂಟರ್ ಒಳಾಂಗಣ ನೋಟ
ಸೆಬಾಸ್ಟಿಯನ್ ಸ್ಯಾಮ್ವಾಲ್ಡ್ | ಸಂಜೆ 5:00 ಗಂಟೆ | 29 ಆಗಸ್ಟ್ 2020
ಸೆಬಾಸ್ಟಿಯನ್ ಸ್ಯಾಮ್ವಾಲ್ಡ್ , ಸಂಶೋಧಕರು ನಮ್ಮನ್ನು ಜಾನ್ ಇನ್ನ್ಸ್ ಸೆಂಟರ್‌ನ ಒಳಾಂಗಣ ಪರಿಸರವನ್ನು ಪರಿಚಯಿಸುತ್ತಾರೆ, ಸಸ್ಯಗಳನ್ನು ಅಧ್ಯಯನ ಮಾಡುವ ಬಗೆಗೆ ಪಕ್ಷಿನೋಟ.
ಆನ್ ಗಾರ್ಡನ್ ಕಲ್ಚರ್ಸ್
ಸುರೇಶ್ ಜಯರಾಮ್ ಮತ್ತು ಅಮಿತಾ ಭವಿಶ್ಕರ್ | ಸಂಜೆ 6.30 ಗಂಟೆ | 29 ಆಗಸ್ಟ್ 2020
ಸುರೇಶ್ ಜಯರಾಮ್ , ಇವರು ಬೆಂಗಳೂರಿನ ಕಲಾವಿದರು, ಕಲಾ ಇತಿಹಾಸಕಾರರು, ಕಲಾ ಆಡಳಿತಕಾರರು ಮತ್ತು ಪರಿಪಾಲಕರು. ಭಾರತದ ಬೆಂಗಳೂರಿನಲ್ಲಿ ವಿಶುಯಲ್ ಆರ್ಟ್ ಕಲೆಕ್ಟೀವ್/1. ಶಾಂತಿ ರೋಡ್, “ಸ್ಟೂಡಿಯೋ ಆನ್ ಇಂಟರ್ನ್ಯಾಶನಲ್ ಆರ್ಟಿಸ್ಟ್ಸ್ ರೆಸಿಡೆಂಸಿ ಆಂಡ್ ಆಲ್ಟರ್ನೇಟಿವ್ ಆರ್ಟ್ ಸ್ಪೇಸ್” ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು. ಇವರು ಪ್ರಸಕ್ತ, ಕಲಾಭ್ಯಾಸ, ನಗರ ನಕ್ಷೆ ನಿರ್ಮಾಣ, ಕಲೆಹಾಕಿದ ಕಲಾಕೃತಿಗಳ ಪರಿಪಾಲನೆ, ಮತ್ತು ಕಲಾ ಶಿಕ್ಷಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪರಿಸರ ಮತ್ತು ನಗರ ಅಭಿವೃದ್ಧಿ ಯಲ್ಲಿರುವ ವಿಶೇಷ ಆಸಕ್ತಿಯು ಇವರ ಕಾರ್ಯಕ್ಕೆ ಮುಖ್ಯ ಪ್ರೇರಣೆಯಾಗಿದೆ. ಇವರು ಬೆಂಗಳೂರಿನ ಲಲಿತ ಕಲಾ ಕಾಲೇಜ್ ಆಗಿರುವ ʼಕರ್ನಾಟಕ ಚಿತ್ರಕಲಾ ಪರಿಷತ್ʼ ಸಂಸ್ಥೆಯಿಂದ 1990 ರಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್ ಎ ಪದವಿ ಮತ್ತು ಬರೋಡದ, ಎಂ.ಎಸ್ ವಿಶ್ವವಿದ್ಯಾಲಯದಿಂದ 1992 ರಲ್ಲಿ ಕಲಾ ವಿಮರ್ಶೆಯ ವಿ಼ಷಯದಲ್ಲಿ ಎಮ್.ಎಫ್.ಏ ಪದವಿ ಪಡೆದಿದ್ದಾರೆ. ʼಕರ್ನಾಟಕ ಚಿತ್ರಕಲಾ ಪರಿಷತ್ʼ ಸಂಸ್ಥೆಯಲ್ಲಿ ಕಲಾ ಇತಿಹಾಸದ ಭೋದಕರಾಗಿ, ನಂತರ 2005-2007 ರ ವರೆಗೂ ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಅಮಿತಾ ಭವಿಶ್ಕರ್, ಸಮಾಜಶಾಸ್ತ್ರಜ್ಞರು. 2017 ರಿಂದ ಭಾರತದ ದೆಹಲಿಯಲ್ಲಿರುವ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ 2005 ರಲ್ಲಿ ʼಅಭಿವೃದ್ಧಿ ಅಧ್ಯಯನಗಳʼ ಕುರಿತಂತೆ ವಿಶೇಷ ಯೋಗದಾನಕ್ಕಾಗಿ ಮಾಲ್ಕೋಲ್ಮ್ ಆದಿಶೀಷ ಪುರಸ್ಕಾರ ದೊರೆತಿದೆ. 2008 ರಲ್ಲಿ ಸಮಾಜ ವಿಜ್ಞಾನ ಸಂಶೋಧನೆಗಾಗಿ ವಿ.ಕೆ.ಆರ್.ವಿ ರಾವ್ ಪುರಾಸ್ಕಾರ ಮತ್ತು ಆಧುನಿಕ ಭಾರತದಲ್ಲಿ ಪರಿಸರ ಹಾಗೂ ಸಾಮಾಜಿಕ ಚಳುವಳಿಯನ್ನು ಕುರಿತಂತೆ ಇವರ ವಿಮರ್ಶಾತ್ಮಕ ಅಧ್ಯಯನಕ್ಕಾಗಿ 2010 ರಲ್ಲಿ ಸಮಾಜ ವಿಜ್ಞಾನಕ್ಕೆ ಸಲ್ಲುವ ಇನ್ಫೋಸಿಸ್ ಪುರಸ್ಕಾರ ದೊರೆತಿದೆ. ಭಾರತದ ನಗರ ಮತ್ತು ಹಳ್ಳಿಗಳಲ್ಲಿ ಪರಿಸರ ಸಂಸ್ಕೃತಿ ಯ ಅಧ್ಯಯನ ನೆಡೆಸಿದ್ದಾರೆ.
'ಗ್ರೀನ್ ಇಂಪೀರಿಯಲಿಸಮ್' ಹಾಗೂ ನಂತರದ ಅಧ್ಯಯನ
ಮಹೇಶ್ ರಂಗರಾಜನ್ | ಸಂಜೆ 6.30 ಗಂಟೆ | 30 ಆಗಸ್ಟ್ 2020
ರಿಚರ್ಡ್ ಗ್ರೋವ್ ಪರಂಪರೆ ಮತ್ತು ಪರಿಸರ ಇತಿಹಾಸದ ಸವಾಲುಗಳು.
ಗ್ರೋವ್ ಅವರು ಕೇವಲ ಬರಹ ಮತ್ತು ಸಂಶೋಧನೆಗೆ ತಮ್ಮ ಪರಿಶ್ರಮವನ್ನು ಸೀಮಿತಗೊಳಿಸಲ್ಲಿಲ್ಲ, ʼಕನ್ಸರ್ವೇಶನ್ ಇನ್ ಆಫ್ರಿಕಾ ಇನ್ 1987ʼ ಹಾಗೂ ʼಓರಿಯಂಟ್ ಆನ್ ಸೌಥ್ ಮತ್ತು ಸೌಥ್ ಈಸ್ಟ್ ಏಶಿಯಾʼ ಪತ್ರಿಕೆಗಳಲ್ಲಿ ಸಹ- ಸಂಪಾದಿತ ಸಂಗ್ರಹವು ದಶಕದ ನಂತರ ಯುವಕರು, ವಿದ್ಯಾರ್ಥಿ ಸಂಕುಲದ ಹೊಸ ದ್ವನಿಯಾಯಿತು. ಈಗ ಇಪ್ಪತ್ತೈದು ವರ್ಷಗಳ ಹಿಂದೆ ಇವರು ವೈಟ್ ಹಾರ್ಸ್ ಪ್ರೆಸ್ ನಿಂದ ಪ್ರಾರಂಭಿಸಿದ ʼದಿ ಜರ್ನಲ್ ಎನ್ವೈರ್ನಮೆಂಟ್ ಆಂಡ್ ಹಿಸ್ಟರಿʼ ಒಂದು ಪ್ರಮುಖ ಪ್ರತ್ರಿಕೆ. ಭಾರತದ ಇನ್ನೂರು ವರ್ಷಗಳ ಇತಿಹಾಸವನ್ನು ಕುರಿತಂತೆ, ಇಂದಿನ ಭಾಷಣಕಾರರಾದಂತಹ ಭಾರತೀಯ ಇತಿಹಾಸಕಾರರಿಗೆ ಗ್ರೋವ್ ಅವರ ಕೃತಿಗಳು , ಹಿಂದಿನ ವಾಡಿಕೆಯನ್ನು ಮೀರಿ ಚಿಂತಿಸುವಂತೆ ಮಾಡುತ್ತವೆ. ಗತಕಾಲದ ಘಟನಾಕ್ರಮಗಳು ಮತ್ತು ಬದಲಾವಣೆಗಳ ಪರಿಪ್ರೇಕ್ಷದಲ್ಲಿ ಪರಿಸರದೊಂದಿಗೆ ಮಾನವನ ಅವಿನಾಭಾವ ಬೆಸುಗೆಯನ್ನು ಪುನಃಚೇತನಗೊಳಿಸುವಂತಹ ಮಹತ್ತರ ಕಾರ್ಯಕ್ಕೆ ಇವರ ಕೃತಿಗಳು ನಾಂದಿ ಹಾಡುತ್ತವೆ. ನಮ್ಮ ವರ್ತಮಾನ ಸ್ಥಿತಿಯನ್ನು ಅರಿಯಲು ನಾವು ಎಲ್ಲಿದ್ದೇವೆ , ಏಕೆ ಇಂತಹ ಪರಿಸ್ಥಿತಿ ಬಂದಿತು ಎಂದು ಪ್ರಶ್ನಿಸಿಕೊಳ್ಳಬೇಕು. ಇಂತಹ ಸಣ್ಣ ಪ್ರಯತ್ನಗಳಿಂದ ಗ್ರೋವ್ ಅವರ ಕನಸು ಹಸಿರಾಗಿರುತ್ತದೆ.