ಚಲನಚಿತ್ರ


Johar Poster-1_website.jpg

ಜೋಹರ್:‌ ವೆಲ್ಕಮ್‌ ಟು ಅವರ್‌ ವರ್ಲ್ಡ್

ನೀಲಾಂಜನ್‌ ಭಟ್ಟಾಚಾರ್ಯ ನಿರ್ಮಿಸಿರುವ ಚಲನ ಚಿತ್ರ | 58 ನಿಮಿಷ | ಹಿಂದಿಯಲ್ಲಿ ಅಡಿ ಬರಹಗಳು | 2010

ಭಾರತದಲ್ಲಿ ಬಹಳಷ್ಟು ಮಂದಿಗೆ ಆಹಾರ ಎಂದರೆ ಕೇವಲ ಜೀವಿಕೆ ಮಾತ್ರ.  ನಮ್ಮ ದೇಶದಲ್ಲಿ ವಾಸವಿರುವ ಬಹಳಷ್ಟು ಬುಡಕಟ್ಟು ಜನಾಂಗ ಮತ್ತು ಆದಿವಾಸಿಗರನ್ನು ಬದಿಗೊತ್ತಲಾಗಿದೆ. ʼ ಜೋಹರ್:‌ ವೆಲ್ಕಮ್‌ ಟು ಅವರ್‌ ವರ್ಲ್ಡ್ʼ, ಈ ಚಲನಚಿತ್ರದಲ್ಲಿ, ಪೂರ್ವ ಭಾರತದ ಝಾರ್ಖಂಡ್‌  ಪ್ರದೇಶದಲ್ಲಿ ವಾಸವಿರುವ ಮೂವತ್ತೆರಡು ಆದಿವಾಸಿ ಜನಾಂಗಗಳ ಬಗೆಗೆ ಗಮನ ಹರಿಸಲಾಗಿದೆ.  ಬಹುಕಾಲದಿಂದಲೂ, ಈ ಆದಿವಾಸಿಗರು ಪೌಷ್ಟಿಕ ಆಹಾರ ಹಾಗೂ ಔಷಧಗಳಿಗೆ ಸ್ಥಳೀಯ ಕಾಡುಗಳನ್ನು ಅವಲಂಬಿಸಿದ್ದಾರೆ.  ಕಾಡಿನೊಂದಿಗೆ ಪರಸ್ಪರ ಸ್ನೇಹಮಯ ಸಂಬಂಧ ಬೆಳೆಸಿಕೊಂಡಿದ್ದಾರೆ, ತಮ್ಮ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನ ಮೇಲೆ  ಕಾಡುಗಳ ಪ್ರಭಾವ ಇದೆ.

ಜೋಹರ್:‌ ವೆಲ್ಕಮ್‌ ಟು ಅವರ್‌ ವರ್ಲ್ಡ್ , ಈ ಚಲನಚಿತ್ರದಲ್ಲಿ ಝಾರ್ಖಂಡ್‌  ಪ್ರದೇಶದ ಆದಿವಾಸಿಗರು ಮತ್ತು ಸುತ್ತಲಿನ ಕಾಡಿನ ನಡುವೆ ಇರುವ ಅವಿಭಾಜ್ಯ ಸಂಬಂಧದ ವಿವರಣೆ ಇದೆ.  ಚಲನಚಿತ್ರದಲ್ಲಿ, ಪಾರಂಪರಿಕ ತಿನಿಸುಗಳು, ಅನೇಕ ಸಸ್ಯಗಳ ಔಷದೀಯ ಗುಣಗಳು, ಕಳೆ ಗಿಡಗಳು, ಹಣ್ಣು ಹಂಪಲುಗಳ ಜ್ಞಾನ ಮತ್ತು ಅವುಗಳ ಬಳಕೆ ಇವೆಲ್ಲಾ ವಿಷಯಗಳ ಮಾಹಿತಿ ನೀಡಲಾಗಿದೆ.  ವಿಚಾರಹೀನ, ಅಡೆ-ತಡೆ ಇಲ್ಲದ ವೇಗವಾಗಿ ನೆಡೆಯುತ್ತಿರುವ ಅಭಿವೃದ್ಧಿ ಕಾರ್ಯ ಹಾಗೂ ಸಂಗೋಪನ ನೀತಿಗಳಿಂದಾಗಿ ಆದಿವಾಸಿಗರು ಮತ್ತು ಕಾಡುಗಳ ನಡುವೆ ಆಳವಾಗಿ ಬೇರೂರಿರುವ ಸೂಕ್ಷ್ಮ ಸಂಬಂಧಕ್ಕೆ ಬಂದಿರುವ ಧಕ್ಕೆ/ಹಾನಿ ಹಾಗೂ ಅವರನ್ನು ಆಹಾರದ ಸಂಕಷ್ಟಕ್ಕೆ ದೂಡಿರುವ ಬಗೆಗೂ ಚಲನಚಿತ್ರದಲ್ಲಿ ಬೆಳಕು ಹರಿಸಲಾಗಿದೆ. 

ಬಹುಕಾಲದಿಂದಲೂ ಪರಿಸರವನ್ನು ಅವಲಂಬಿಸಿರುವ ಸಮೃದ್ಧ ಆಹಾರ ಪದ್ಧತಿಯು  ಭಾರತದಂತಹ ಬೃಹತ್‌ ದೇಶಕ್ಕೆ ಅತಿ ಮುಖ್ಹಯವಾಗಿದ್ದರೂ, ಅದನ್ನು ಕಡೆಗಣಿಸಿ ಧೋರಣೆ ತೋರಿರುವ ವಿಚಾರದೆಡೆಗೂ ಚಲನಚಿತ್ರದಲ್ಲಿ ಗಮನ ಸೆಳೆಯಲಾಗಿದೆ.  ಈ ಚಲನಚಿತ್ರಕ್ಕೆ, 2010 ರಲ್ಲಿ ಶ್ರೇಷ್ಠ ಕಥಾ ನಿರೂಪಣೆ (ರಚನೆ) ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಈ ಚಲನಚಿತ್ರವನ್ನು, ಜಮ್ಶೆಡ್‌ಪುರ ಬುಡಕಟ್ಟು ಪ್ರದೇಶ, ಜೆ.ಈ.ಎಫ್‌ ಬಾನ್‌ ವಿಶ್ವವಿದ್ಯಾಲಯ,  ಗೊಟ್ಟಿಂಗನ್ ವಿಶ್ವವಿದ್ಯಾಲಯ ಮತ್ತು ಏ.ಈ.ಐ.ಎನ್‌, ಲಕ್ಸೆಂಬರ್ಗ್ ಮುಂತಾದೆಡೆ ಚಿತ್ರೀಕರಿಸಲಾಗಿದೆ.


SoL2.jpg

ಸೀಸನ್ಸ್‌ ಆಫ್‌ ಲೈಫ್‌

ನಿರ್ದೇಶಕರು ಮತ್ತು ನಿರ್ಮಾಪಕರು — ಡಾಲಿ ಕಿಕಾನ್‌ | 11 ನಿಮಿಷ 47 ಸೆಕೆಂಡುಗಳು | ಇಂಗ್ಲಿಷ್‌ ಅಡಿ ಬರಹಗಳೊಂದಿಗೆ ಲೋಥಾ ನಾಗಾ | 2020

ನಾಗಾಲೈಂಡ್‌ ನ ವೊಖಾ ಜಿಲ್ಲೆಯ ರಾಲನ್‌ ಎಂಬ ಹಳ್ಳಿಯಲ್ಲಿ ವಾಸವಿರುವ ತ್ಸುಮುಂಗಿ ಮತ್ತು ಪಿಥುಂಗ್ಲೋ ಇಬ್ಬರೂ ಆಗಸ್ಟ್‌ ತಿಂಗಳಿನಲ್ಲಿ ಒಂದು ದಿನ ಕಾಡಿನಲ್ಲಿ ಬೆಳೆದ ಬಿದುರಿನ  ತೋಪಿಗೆ ಹೋಗುತ್ತಾರೆ.  ಬಿದುರಿನ ಎಳೆ ಕಳಲೆ ಯನ್ನು ಕೀಳಲು ತಮ್ಮ ಜೊತೆಯಲ್ಲಿ ಬರಲು ಯಂಚಾನೋ ವನ್ನು ಸಹ ಕರೆಯುತ್ತಾರೆ. ಇವರೆಲ್ಲಾ ಒಂದೇ ಜೊತೆ.

ಈಶಾನ್ಯ ಭಾರತದಲ್ಲಿ ಸಾವಿರಾರು ಮಹಿಳೆಯರು ಅನೇಕ ಔಷದಿಯ ಸಸ್ಯಗಳು, ಕಾಯಿಗಳು ಮತ್ತು ಬಿದುರಿನ ಕಳಲೆ ಯನ್ನು ಆರಿಸಿ ಉಪ್ಪಿನಹಳಿಯಲ್ಲಿ ಹಾಕಿ ಹುದುಗಿಸುತ್ತಾರೆ. ಕಳಲೆಯನ್ನು ಯಾವ ತಿಂಗಳಲ್ಲಿ ಆರಿಸಬೇಕು ಎಂಬುದು, ಹಿಮಾಲಯ ಪ್ರಾಂತ್ಯದ ಎತ್ತರವನ್ನು ಅವಲಂಬಿಸಿರುತ್ತದೆ. ಪರ್ವತದ ಮೇಲಿರುವ ಹಳ್ಳಿಯ ಜನರು, ಜೂನ್‌ ತಿಂಗಳಲ್ಲಿ ಬಿದುರು-ಕಳಲೆ ಆರಿಸಲು ಹೊರಟರೆ, ಮಧ್ಯ ಮತ್ತು ಕೆಳ ಭಾಗದ ಹಳ್ಳಿಗಳಲ್ಲಿ ಬಿದುರು ಕಳಲೆಯ ಋತು ಆಗಸ್ಟ್‌ ತಿಂಗಳಿನವರೆಗೂ ಇರುತ್ತದೆ.

ಈಶಾನ್ಯ ಭಾರತದ ಹಲವು ಜನಾಂಗದವರಿಗೆ, ಬಿದುರಿನ ಉಪ್ಪಿನ ಕಾಯಿ ರುಚಿಕರ ಖಾದ್ಯ, ಅಷ್ಟೇ ಅಲ್ಲ, ದಿನನಿತ್ಯದ ಆಹಾರ.  ಬಿದುರಿನ ಕಳಲೆ ಈ ಜನಾಂಗದ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ, ಅಲ್ಲದೆ, ನೆರೆ  ದೇಶಗಳಾದ ಆಗ್ನೇಯ ಏಷಿಯಾ ಮತ್ತು ಪೂರ್ವ ಏಷಿಯಾದೊಡನೆ  ನಿಕಟ ಸಂಬಂಧ ಕಲ್ಪಿಸುತ್ತದೆ.  ನಾಗಾಲೈಂಡ್‌, ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ, ಸಿಕ್ಕಿಂ ಮತ್ತು ಮಿಜೋರಮ್‌ ರಾಜ್ಯಗಳಲ್ಲಿ ಬಿದುರಿನ ಕಳಲೆಯನ್ನು ಅನೇಕ ರೀತಿಯಲ್ಲಿ ಅಂದರೆ, ಎಳೆ ಕಳಲೆ, ಉಪ್ಪಿನಹಳಿಯಲ್ಲಿ ನೆನೆಸಿ ಮತ್ತು ಒಣಗಿಸಿ ಬಳಸುತ್ತಾರೆ. ಪಿಥುಂಗ್ಲೋ ಹೇಳುವಂತೆ “ಲೋಥಾ ನಾಗಾಗಳಿಗೆ, ಬಿದುರು ಕಳಲೆ ಒಂದು ರುಚಿಯಾದ ವ್ಯಂಜನ”. 

ದಕ್ಷಿಣ ಏಷಿಯಾದ ಹಿಮಾಲಯ ತಪ್ಪಲಿನ ಮನೆಗಳಲ್ಲಿ ಆಸ್ವಾದಿಸುವ ಆಹಾರವಾದ ಬಿದುರಿನ ಕಳಲೆಯನ್ನು ಆರಿಸುವ, ಅದರ ಉಪ್ಪಿನಕಾಯಿ ತಯಾರಿಸುವ ಕೆಲಸದಲ್ಲಿ, ತ್ಸುಮುಂಗಿ ಪಿಥುಂಗ್ಲೋ ಮತ್ತು ಯಂಚಾನೋ, ಇವರ ಜೀವನ ಸಾಗುತ್ತದೆ.


ಬೆಂಗಳೂರು ಅಂತರ್ರಾಷ್ಟ್ರೀಯ ಕೇಂದ್ರದ ಸಹಭಾಗಿತ್ವ.