‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

08_YokoShimizu_artwork_2_website.jpg

ಫೋಟೋಸಿಂಥೇಗ್ರಾಫ್‌

ಬೆಳಕಿನ ಸಂಶ್ಲೇಷಣೆಯಿದ ಸೃಷ್ಠಿಯಾದ ಕಲೆ

ದ್ಯುತಿಸಂಶ್ಲೇಷಣೆ (ಫೋಟೋಸಿಂಥೆಸಿಸ್ ) ಅತಿ ಅದ್ಭುತವಾದ ಸೃಜನಾತ್ಮಕ ರಾಸಾಯನಿಕ ಪ್ರಕ್ರಿಯೆ, ಹಲವು ಸಾವಿರ ವರ್ಷಗಳಿಂದ ಭೂಮಿಯ ಮೇಲೆ ಜೀವರಾಶಿಯ ಉಳಿವಿಗೆ ಕಾರಣವಾಗಿದೆ. ದ್ಯುತಿಸಂಶ್ಲೇಷಣೆಯ ವಿಕಸನದ ಪರಿಣಾಮವಾಗಿ ಸಮುದ್ರದ ಆಳದಿಂದ ಹಿಡಿದು ಪರ್ವತಗಳ ಎತ್ತರದವರೆಗೂ ವಿವಿಧ ಜೀವ ಪರಿಸರಗಳು ಹರಡಿವೆ, ಭೂಮಿಯು ಜೀವ ತಾಣವಾಗಲು ಅನುಕೂಲಕರವಾಗಿದೆ. ಈ ಪ್ರದರ್ಶನದಲ್ಲಿ, ಫೋಟೋಸಿಂಥೆಸಿಸ್ ಪ್ರಕ್ರಿಯೆಯನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸಲಾಗಿವೆ. ಗಿಡಗಳ ಎಲೆಗಳಿಗೆ ವಿಶ್ಲೇಷಕ ಪ್ರಿಂಟ್ ಗಳನ್ನು ಅಳವಡಿಸಿದ್ದು, ಪತ್ರಹರಿತ್‌ ಕಣಗಳಿಂದ ವಸರುವ ಪಿಶ್ಟದಿಂದ ಉಂಟಾಗುವ ರೂಪ ಚಿತ್ರಗಳನ್ನು ಕಲೆ ಹಾಕಲಾಗಿದೆ. ನಂತರ ಎಲೆಗಳನ್ನು ರಾಸಾಯನಿಕಗಳ ಮೂಲಕ ಸಂಸ್ಕರಿಸಿ ಈ ಸೂಕ್ಷ್ಮ ರಚನೆಗಳ ಅಧ್ಯಯನ ಮಾಡಲಾಗುತ್ತದೆ.

ಮಾಧ್ಯಮ: ಗಿಡಗಳು, ಬೆಳಕು, ಫಿಲ್ಮ್‌, ನೀರು, ಎಥೆನಾಲ್‌, ಅಯೋಡಿನ್‌ ದ್ರವ 

ವರ್ಷ: 2015 - ಪ್ರಸಕ್ತ

 

ಫೋಟೋಸಿಂಥೇಗ್ರಾಫ್‌ ಪ್ರಯೋಗಾಲಯ ಮತ್ತು ಗ್ಯಾಲರಿ


00_YokoShimizu_artist_photo copy.jpg

ಕಲಾವಿದರ ಪರಿಚಯ

ಯೋಕೋ ಶಿಮಿಜ಼ು, ಆರ್ಸ್‌ ಎಲೆಕ್ಟ್ರಾನಿಕ ಫ್ಯೂಚರ್‌ ಲ್ಯಾಬ್‌ ಸಂಸ್ಥೆಯಲ್ಲಿ ಸಂಶೋಧಕರು. ಜೀವ ವಿಜ್ಞಾನ ಮತ್ತು ರಾಸಾಯನಿಕ ಶಾಸ್ತ್ರದಲ್ಲಿ ಅಧ್ಯಯನ ನೆಡೆಸಿದ್ದಾರೆ. ಜಪಾನಿನ ತಂತ್ರಜ್ಞಾನ ಕಂಪನಿಗಳಲ್ಲಿ, ಸೃಜನಶೀಲ ನಿರ್ದೇಶಕರು ಮತ್ತು ಸಲಹಾಕಾರರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆನಂತರ, ಸ್ವಂತ ಪ್ರಯೋಗಾಲಯದಲ್ಲಿ ಸಂಶೋಧನಾ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವದಾದ್ಯಂತ ಜೀವ ವಿಜ್ಞಾನ ಆಧಾರಿತ ಹಲವು ಕಾರ್ಯಕ್ರಮಗಳು, ಭಾಷಣ, ಪ್ರದರ್ಶನಗಳನ್ನು ನೀಡಿದ್ದಾರೆ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಯೋಕೋ ಪ್ರಸ್ತುತ ವಿಭಿನ್ನ ಕಂಪನಿಗಳ, ಸರಕಾರಿ ಸಂಸ್ಥೆಗಳ, ವಸ್ತುಸಂಗ್ರಹಾಲಯಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಲೆ ಮತ್ತು ವಿಜ್ಙಾನವನ್ನು ಮೇಳೈಸುವ ವಿವಿಧ ಸೃಜನಾತ್ಮಕ ಸ್ಥಾಪನೆಗಳ ವಿಕಸನದಲ್ಲಿ ತೊಡಗಿದ್ದಾರೆ.


Kannada_Read.png

Kannada_Listen.png
 

Kannada_Watch.png

Kannada_Attend.png
 

ಹಿಂದಿನ ಪ್ರದರ್ಶಿಕೆ

ಇಂಟರ್‌ ಕಲ್ಚರಲ್‌ ಪಾಲಿನೇಶನ್‌ ಆಫ್‌ ದ ಪ್ರೆಸೆನ್ಟ್‌

 

ಮುಂದಿನ ಪ್ರದರ್ಶಿಕೆ

ಫಾರೆಸ್ಟ್ ಇನ್ಕ್ಲೂಸಿವ್‌