‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಇಂಟರ್ ಕಲ್ಚರಲ್ ಪಾಲಿನೇಶನ್ ಆಫ್ ದ ಪ್ರೆಸೆನ್ಟ್
ಕಾಲಮಾನದಲ್ಲಿ ನಿಂತ ಬೀಜಗಳು
ಪ್ರಸಕ್ತ ಅಂತಃ-ಸಂಗೋಪನ ಪರಾಗಸ್ಪರ್ಶ ಪ್ರಯೋಗದಲ್ಲಿ ಪೌಲ್ ಚಾರ್ಟ್ರಂಡ್ ಇವರು, ಸಣ್ಣ ಜೈವಿಕ ಬೀಜ ಕೋಟೆಯು ಹಲವಾರು ಪದರಗಳನ್ನು ಹೊಂದಿದ್ದು, ಮಾನವರ ಅಡಿಗೆ ಚಟುವಟಿಕೆ ಮತ್ತು ಜೇನು ನೊಣಗಳ ಜೀವನಕ್ರಿಯೆಯ ನಡುವೆ ಅಡಗಿರುವ ಪರಸ್ಪರ ಅವಲಂಬನೆಯನ್ನು ನಿರೂಪಿಸುತ್ತಾರೆ.
ಸಸ್ಯಶಾಸ್ತ್ರ ನಿರೂಪಣೆಗಳನ್ನು ಕೆತ್ತಿರುವ ಒಂದು ಮರದ ಪಾತ್ರೆ/ ಕೊಳಗದ ಒಳಗೆ, ಕೈಯಲ್ಲಿ ಹಿಡಿದು ಊದಿ ರಚಿಸಿದ ಗಾಜಿನ ಪಾತ್ರೆಯನ್ನು ಇರಿಸಲಾಗಿದೆ. ಈ ಪಾತ್ರೆಯಲ್ಲಿ ಅಡಿಗೆಗೆ ಬಳಸುವ ವಿವಿಧ ಬಗೆಯ ಸಸ್ಯ ಬೀಜಗಳನ್ನು ಜೇನು ನೊಣಗಳ ಮೂಲಕ ಪರಾಗಸ್ಪರ್ಶಕ್ಕಾಗಿ ಇರಿಸಲಾಗಿದೆ. ಬೀಜಗಳನ್ನು ಕಾಪಾಡಲು ನೈಸರ್ಗಿಕ ಶುದ್ಧ ಜೇನನ್ನು ಬಳಸಲಾಗಿದೆ. 2019 ರ ಬೇಸಿಗೆಯಲ್ಲಿ, ಲಾಂಗಿಯರ್ಬೆನ್, ಸ್ವಾಲಬಾರ್ಡ್ ಅಲ್ಲಿ ನೆಡೆದ ಒಂದು ದಿನದ ಕೃಷಿ- ಸಂಗೋಪನೆ/ ಸೀಡ್ ಲಿಂಕ್ಸ್ ಪ್ರದರ್ಶನಕ್ಕೆ ವಿಶ್ವದೆಲ್ಲೆಡೆಯಿಂದ ಆಯ್ಕೆಯಾದ ವಿವಿಧ ಸಂಶೋಧನೆಗಳಲ್ಲಿ, ಈ ಸಂಶೋಧನೆಯೂ ಸೇರಿತ್ತು. ಆನಂತರ, ಹತ್ತಿರದಲ್ಲಿರುವ ಜಾಗತಿಕ ಬೀಜ ಕೋಟೆಯಲ್ಲಿ ಶಾಶ್ವತವಾಗಿ ಈ ಸಂಶೋಧನೆಯನ್ನೂ ಕಾಪಾಡಲಾಗಿದೆ. ತ್ಯಾಜ್ಯವಾಗಿರುವ ಕಲ್ಲಿದ್ದಲು ಗಣಿಯೊಂದರಲ್ಲಿ, ಈ ಬೀಜಕೋಟೆಯನ್ನು ಇರಿಸಲಾಗಿದೆ, ಇದು ಸಮಕಾಲೀನ ಕಲಾಕೃತಿಗಳ ಸಂಗ್ರಹಾಲಯ ಕೇಂದ್ರವಾಗಿದೆ.(ದಿ ಸ್ವಾಲ್ಬಾರ್ಡ್ ಸೀಡ್ ಕಲ್ಚರ್ ಆರ್ಕ್), ಅದೇ ಪರ್ವತಗಳಲ್ಲಿರುವ ಜೈವಿಕ ಬೀಜಾಗಾರಕ್ಕೆ ಸರಿ ಸಮವಾದ ಸಾಂಸಕೃತಿಕ ಬೀಡಾಗಿದೆ.
ಮಾಧ್ಯಮ: ಅಡಿಗೆಗೆ ಬಳಸುವ ಸಸ್ಯ ಬೀಜಗಳು, ನೈಸರ್ಗಿಕ ಅಪ್ಪಟ (ಸಂಸ್ಕರಿಸದ) ಜೇನು, ಕೈಯಲ್ಲಿ ಹಿಡಿದು ಊದಿ ರಚಿಸಿದ ಗಾಜಿನ ಪಾತ್ರೆ , ಒಣ ಮರ, ಪಾಲಿ ಕಾರ್ಬೊನೇಟ್, ಪತ್ರಹರಿತ್ ಇಂದ ತಯಾರಾದ ಶಾಹಿ(ನೈಸರ್ಗಿಕ ಇಂಕ್), ಪೈರೋಗ್ರಫಿ (ಹಚ್ಚೆ ರೇಖಾಕೃತಿ)
ವರ್ಷ: 2019
ಬಿತ್ತನೆ ಬೀಜ ಕೋಟೆ ಶೃಂಕಲದಲ್ಲಿ ಬೀಜ ಶೇಖರಣೆಗೆ ಮುನ್ನ : ಕಲಾವಿದರ ಒಂದು ದೃಷ್ಯ
ಕಲಾಕಾರರ ಪರಿಚಯ
ಪೌಲ್ ಚಾರ್ಟ್ರಂಡ್, ಕ್ಯನಡಾದ ಕಲಾವಿದರು, ಹಲವೆಡೆಗಳಿಂದ ದೊರೆತ ಉಪಯುಕ್ತ ವಸ್ತುಗಳನ್ನು ಸಂಯೋಜಿಸಿ, ನಿರ್ಮಿಸಲಾದ ತಾಣಗಳ ಬಗೆಗೆ ಅಧ್ಯಯನ ಕಾರ್ಯ ನೆಡೆಸುತ್ತಿದ್ದಾರೆ. ಪ್ರಕೃತಿ ಮತ್ತು ಸಂಸ್ಕೃತಿ ಇವರಿಗೆ ಸ್ಪೂರ್ತಿಯಾಗಿದೆ. ಇವೆರಡರ ನಡುವಣ ಸಂಬಂಧ ಮತ್ತು ಅಂತರ ಅವರ ಸಂಶೋಧನೆಯ ಮೂಲ . ಪೌಲ್ ಅವರು, ಮಾಸ್ಟರ್ ಆಫ್ ಫೈನ್ ಆರ್ಟ್ಸ್ (ವೆಸ್ಟರ್ನ್ ವಿಶ್ವ ವಿದ್ಯಾಲಯ 2017) ಪದವಿ ಪಡೆದು, ಆಂಟೋರಿಯೋ ಗ್ರಾಜುಯೇಟ್ ಸ್ಕಾಲರ್‌ಶಿಪ್ ಮತ್ತು ಎಸ್.ಎಸ್.ಎಚ್.ಆರ್.ಸಿ ಅನುದಾನಕ್ಕೆ ಪಾತ್ರರಾಗಿದ್ದಾರೆ. ಎಕ್ಸ್‌ಪೇಸ್ ಕಲ್ಚರಲ್ ಸೆಂಟರ್ (ಟೊರಾಂಟೋ), ಯಂಗರ್ ದ್ಯಾನ್ ಬೆಯಾಂಸ್ ಗ್ಯಾಲರಿ (ಟೊರಾಂಟೋ), ಬೊರ್ಡಿಂಗ್ ಹೌಸ್ ಗ್ಯಾಲರಿ (ಗ್ಯೂಲ್ಫ್), ಆರ್ಟಲ್ಯಾಬ್ ಅಂಡ್ ಸಟೆಲೈಟ್ ಗ್ಯಾಲರಿ (ಲಂಡನ್), ಐಡಿಯಾ ಎಕ್ಸ್ ಚೇಂಜ್ (ಕೇಂಬ್ರಿಜ್), ಸಿ.ಎ.ಎಫ್.ಕೆ.ಎ ಬೈನಿಯಲ್ (ಕಿಚನೆರ್), ಆರ್ಟ್ ಮರ್ (ಮಾಂಟ್ರಿಯಲ್), ವೈ + ಕಾಂಟೆಂಪರರಿ(ಸ್ಕಾರ್ ಬರೋಹ್), ಎಕ್ಸ್ ಪ್ರೆಶನ್ ಆರೆಂಜ್ ಬೈನಿಯಲ್ (ಸೇಂಟ್ ಹೈಸಿಂಥೆ) ಮುಂತಾದಲ್ಲಿ ತಮ್ಮ ಪ್ರದರ್ಶನ ಪ್ರಸ್ತುತ ಪಡಿಸಿದ್ದಾರೆ.