ಸೀಸನ್ಸ್ ಆಫ್ ಲೈಫ್
ಚಲನಚಿತ್ರ ನಿರ್ಮಾಪಕರ ಪರಿಚಯ
ಡಾಲಿ ಕಿಕಾನ್, ಇವರು ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ , ಮಾನವ ಶಾಸ್ತ್ರ ಮತ್ತು ವಿಕಸನದ ಅಧ್ಯಯನ ಪಠ್ಯಕ್ರಮದ ಹಿರಿಯ ಉಪನ್ಯಾಸಕರು. 2013 ರಲ್ಲಿ, ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ಮತ್ತು ವಿಕಸನ ವಿಭಾಗದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. 2013-2015 ರ ನಡುವೆ, ಸ್ಠಾಕ್ಹೋಮ್ ವಿಶ್ವವಿದ್ಯಾಲಯದಲ್ಲಿ , ಮಾನವ ಶಾಸ್ತ್ರ ಮತ್ತು ವಿಕಸನದ ಅಧ್ಯಯನ ವಿಭಾಗದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮೊದಲು ಇವರು ‘ಫಾಕಲ್ಟಿ ಆಫ್ ಲಾ’, ದೆಹಲಿ ವಿಶ್ವವಿದ್ಯಾಲಯದಿಂದ 2001 ರಲ್ಲಿ ಎಲ್.ಎಲ್.ಬಿ ಪದವಿ ಪಡೆದು, ಗೌಹಾತಿ ಉಚ್ಚ ನ್ಯಾಯಾಲಯ , ಅಸ್ಸಾಂ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಶಕ್ತ ಪಡೆಗಳ ವಿಶೇಷ ಶಕ್ತಿ ಕಾಯಿದೆ (1958) ಯನ್ನೂ ಒಳಗೊಂಡಂತೆ, ಈಶಾನ್ಯ ಭಾರತದಲ್ಲಿ ಜಮೀನುದಾರಿಕೆ ಮತ್ತು ಸಂಪನ್ಮೂಲ ನಿರ್ವಹಣೆಯ ಬಗೆಗೆ ಕಾನೂನು ಸಲಹಾ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.