ಜೋಹರ್: ವೆಲ್ಕಮ್ ಟು ಅವರ್ ವರ್ಲ್ಡ್
ಚಲನಚಿತ್ರ ನಿರ್ಮಾಪಕರ ಪರಿಚಯ
ನೀಲಾಂಜನ್ ಭಟ್ಟಾಚಾರ್ಯ ಭಾರತೀಯ ಚಲನ ಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಬರಹಗಾರರು. ಇವರು ಅನೇಕ ಶ್ರೇಷ್ಠ ಚಿತ್ರಗಳನ್ನು ಮತ್ತು ವಿವಿಧ ಬಗೆಯ ಮಾಧ್ಯಮ ಕೃತಿಗಳನ್ನು ನೀಡಿದ್ದಾರೆ. ಭಟ್ಟಾಚಾರ್ಯ ರ ‘ಅಂಡರ್ ದ ಸನ್’ (2005), ಮತ್ತು ಜೋಹರ್: ವೆಲ್ಕಮ್ ಟು ಅವರ್ ವರ್ಲ್ಡ್ (2010) ಸಾಕ್ಷ್ಯ ಚಿತ್ರಗಳಿಗೆ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ.
‘ರೇನ್ ಇನ್ ದ ಮಿರರ್’, ‘ನೈನ್ಟಿ ಡಿಗ್ರೀಸ್’, ‘ಫಿಷಿಂಗ್ ಔಟ್ ಆಫ್ ಟೈಮ್’(ಮಿಕ್ಸ್ಡ್ ಮೀಡಿಯಾ ಇನ್ಸ್ಟಲೇಶನ್), 'ಕ್ವಯಟ್ ಫ್ಲೋಸ್ ದ ಸ್ಟ್ರೀಮ್ (ವೀಡಿಯೋ ಇನ್ಸ್ಟಲೇಶನ್) ಇವು ನೀಲಾಂಜನ್ ಭಟ್ಟಾಚಾರ್ಯ ಅವರ ಇನ್ನಿತರ ಕೃತಿಗಳು. ಇವರ ಚಲನಚಿತ್ರಗಳನ್ನು ಮುಂಬೈ ಅಂತರ್ರಾಷ್ಟ್ರೀಯ ಚಲನಚಿತ್ರ ಉತ್ಸವ, ಗೋಟೆಬರ್ಗ್ ಅಂತರ್ರಾಷ್ಟ್ರೀಯ ಚಲನಚಿತ್ರ ಉತ್ಸವ, ಎಕ್ಸ್ ಪರಿಮೆಂಟರ್ ಆರ್ಟ್ ಗ್ಯಾಲರಿ, ಕೊಲ್ಕತ್ತಾ, ವೆಲ್ಕಮ್ ಕಲೆಕ್ಷನ್ ಗ್ಯಾಲರಿ, ಲಂಡನ್, ಯೂರೋಪಿಯನ್ ಕಾನಸ್ಥೆಲ್ ಮತ್ತು ಫ್ರಾಂಕ್ ಫರ್ಟರ್ ಕುಂಸ್ತ್ವಿರೀನ್ ಮುಂತಾದೆಡೆ ಪ್ರದರ್ಶಿಸಲಾಗಿದೆ.