ಜಾನಕಿ ಅಮ್ಮಾಳ್‌ ಅವರ ಬಗ್ಗೆ

ವಿನಿತ ದಾಮೋದರನ್‌ | ಸಂಜೆ 6.30 ಗಂಟೆ | 25 ಆಗಸ್ಟ್ 2020


Web picture.jpg

ಭಾಷಣಕಾರರ ಪರಿಚಯ

ವಿನಿತ ದಾಮೋದರನ್‌, ಆಧುನಿಕ ಭಾರತದ ಐತಿಹಾಸಕಾರರು, ಇಡೀ ದಕ್ಷಿಣ ಭೂಭಾಗದ ಸತತ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು, ಬಿಹಾರದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಿಂದ ಹಿಡಿದು ದಕ್ಷಿಣ ಏಷಿಯಾದ ಪರಿಸರ ಇತಿಹಾಸದ ವರೆಗೂ, ಹಿಂದು ಮಹಾ ಸಾಗರದಲ್ಲಿ ಉಂಟಾಗುವ ಹವಾಮಾನ ಬದಲಾವಣೆಗಳನ್ನು ಸಹ ಕುರಿತಂತೆ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಕೃತಿಗಳಲ್ಲಿ, ʼಬ್ರೋಕನ್‌ ಪ್ರಾಮಿಸಸ್‌ʼ, ಇಂಡಿಯನ್‌ ನ್ಯಾಶಲಿಸಮ್‌ ಆಂಡ್‌ ದಿ ಕಾಂಗ್ರೆಸ್‌ ಪಾರ್ಟಿ ಇನ್‌ ಬಿಹಾರ್‌ (1992),  ನೇಚರ್‌ ಆಂಡ್‌ ದಿ ಓರಿಯಂಟ್‌, ಎಸ್ಸೇಸ್‌ ಆನ್‌ ದಿ ಎನ್ವೈರ್ನಮೆಂಟಲ್‌ ಹಿಸ್ಟರಿ ಆಫ್‌ ಸೌಥ್‌ ಆಂಡ್‌ ಸೌಥ್‌ ಈಸ್ಟ್‌ ಏಶಿಯಾ (1998), ಪೋಸ್ಟ್‌ ಕಾಲೋನಿಯಲ್‌ ಇಂಡಿಯಾ, ಹಿಸ್ಟರಿ ಪಾಲಟಿಕ್ಸ್‌ ಆಂಡ್‌ ಕಲ್ಚರ್‌ (2000), ಬ್ರಿಟೀಷ್‌ ಎಂಪೈರ್‌ ಆಂಡ್‌‌ ದಿ ನ್ಯಾಚುರಲ್‌ ವರ್ಲ್ಡ್:‌ ಎನ್ವೈರ್ನಮೆಂಟಲ್‌ ಎನ್ಕೌಂಟರ್ಸ್‌ ಇನ್‌ ಸೌಥ್‌ ಏಶಿಯಾ, (2010), ಈಸ್ಟ್‌ ಇಂಡಿಯಾ ಕಂಪನಿ ಆಂಡ್‌ ನ್ಯಾಚುರಲ್‌ ವರ್ಲ್ಡ್ (2014) ಪ್ರಮುಖವಾದವು. ಪ್ರಖ್ಯಾತವಾದ ಪತ್ರಿಕೆಗಳಲ್ಲಿಯೂ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ. ಪೂರ್ವ ಭಾರತದಲ್ಲಿನ ಪರಿಸರ ಬದಲಾವಣೆಗಳು, ಅನನ್ಯತೆ ಮತ್ತು ಪ್ರತಿರೋಧ ಶಕ್ತಿಗಳ ಬಗೆಗೆ ಆಸಕ್ತಿ ತೋರಿದ್ದಾರೆ. ಇವರು ಅನುಭವೀ ಸಂಶೋಧಕರು ಮತ್ತು ಭೋದಕರು, ತಮ್ಮ ಎಮ್.ಫಿಲ್‌ ಪಠ್ಯಕ್ರಮವನ್ನು ಜೆ.ಎನ್.ಯು ವಿಶ್ವವಿದ್ಯಾಲಯದಿಂದ ಮತ್ತು ಪಿ.ಎಚ್.ಡಿ ಪದವಿಯನ್ನು ಕೆಂಬ್ರಿಡ್ಜ್‌ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಪ್ರಸಕ್ತ, ಸಸೆಕ್ಸ್ ನಲ್ಲಿರುವ ʼಸೆಂಟರ್‌ ಫಾರ್‌ ವರ್ಲ್ಡ್‌ ‌ಎನ್ವೈರ್ನಮೆಂಟಲ್‌ ಹಿಸ್ಟರಿ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರವಹಿಸುತ್ತಿದ್ದಾರೆ.