‘ಗ್ರೀನ್ ಇಂಪೀರಿಯಲಿಸಮ್ʼ ಹಾಗೂ ನಂತರದ ಅಧ್ಯಯನ
ಮಹೇಶ್ ರಂಗರಾಜನ್ | ಸಂಜೆ 6.30 ಗಂಟೆ | 30 ಆಗಸ್ಟ್ 2020
Jಜೂನ್ 2020 ರಲ್ಲಿ ರಿಚರ್ಡ್ ಗ್ರೋವ್ ನಿಧನರಾದರು, ಇವರ ಸ್ಥಾನವನ್ನು ಭರಿಸುವುದು ಅಸಾಧ್ಯ, ಈ ಶತಮಾನದಲ್ಲಿ
ಅವರ ಸಾಧನೆಯ ಸ್ವತ್ತು, ಅನೇಕ ವಿದ್ವಾಂಸಕರಿಗೆ ಮತ್ತು ಚಿಂತಕರಿಗೆ ಪರಿಸರದ ದ್ವಂದ್ವಗಳ ಬಗೆಗಿನ ಸವಾಲುಗಳಾಗಿ ಕಾಡುತ್ತವೆ. ಕೆಂಬ್ರಿಡ್ಜ್ ನಿಂದ ಪಡೆದ ಡಾಕ್ಟರಲ್ ಗೆ ತಯಾರಿಸಿದ ಥೀಸೀಸ್ ,ʼಗ್ರೀನ್ ಇಂಪೀರಿಯಲಿಸಮ್ʼ ಎಂಬ ಪರಿಷ್ಕೃತ ಹೆಸರಿನಲ್ಲಿ 1995 ರಲ್ಲಿ ಪ್ರಕಟಗೊಂಡಿತು. ಇತಿಹಾಸದ ಹಲವು ಆಯಾಮಗಳು ಬೆಳಕಿಗೆ ಬಂದವು. ಮುಂದೆ, ʼಈಐ ನಿನೋʼ ಮೇಲೆ ಇವರು ನೆಡೆಸಿದ ಅಧ್ಯಯನವು, ಹವಾಮಾನ ಬದಲಾವಣೆಯ ಇತಿಹಾಸದೊಂದಿಗೆ ಮಾನವನ ಸತತ ಶ್ರಮಗಳ ಬಗ್ಗೆ ಹೊಸ ತಿರುವನ್ನು ಮೂಡಿಸಿತು. ಇವರ ಪಾಂಡಿತ್ಯದ ಸಂಪತ್ತು ಇವರೊಂದಿಗೆ ವ್ಯಾಸಂಗ ಮಾಡಲಾಗದ ಹಲವು ವಿದ್ಯಾರ್ಥಿಗಳನ್ನು ತಲುಪಬೇಕು. ಇವರ ವಿಚಾರಗಳು ಹೊಸ ಸವಾಲುಗಳು, ಪ್ರತಿಕ್ರಿಯೆಗಳು, ಹಾಗೆ ಬೇರೊಂದು ದಿಗಂತವನ್ನೇ ಸೃಷ್ಟಿಸಿದೆ, ಮುಖ್ಯವಾಗಿ, ಪರಿಸರದ ಬಗ್ಗೆ ಕಾಳಜಿ ಮತ್ತು ಕಾರ್ಯಾಚರಣೆಯ ಕಡೆಗೆ ಗಮನ ಕೊಡುವಂತೆ ಮಾಡಿದಂತಹವರಲ್ಲಿ ಇವರು ಒಬ್ಬರು. ಸೇಂಟ್ ವಿನ್ಸೆಂಟ್ , ಸೇಂಟ್ ಹೆಲೆನಾ ಮತ್ತು ಮಾರಿಶಸ್ ಸೇರಿದಂತೆ ಹಲವು ಯೂರೋಪ್ ಆಡಳಿತದ ದ್ವೀಪಗಳಲ್ಲಿ ತೀವ್ರ ಗತಿಯ ಆರ್ಥಿಕತೆಯ ಕಾರಣ ಭೂಮಿ, ಸಸ್ಯ ಸಂಪದ ಮತ್ತು ನೀರು ಮತ್ತು ಮಣ್ಣಿನ ನಡುವಣ ಬೆಸುಗೆಯಲ್ಲಿ ಉಂಟಾದ ಬದಲಾವಣೆಗಳು ಕಂಡುಬಂದವು. ಇಂತಹ ಪರಿಸರ ಅವನತಿಯನ್ನು ತಡಿಯಲು, ಮಾರಿಶಸ್ ನಲ್ಲಿ ಪೆರ್ರಿ ಪ್ಯೌರೆ, ಕೇಪ್ ಕಾಲನಿಯ ಜಾನ್ ಕ್ರಾಂಬಿ ಬ್ರೌನ್ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿದ್ದ ಅನೇಕ ಸಸ್ಯಶಾಸ್ತ್ರಜ್ಞರು ಬಲವಾದ ಮೊಕದ್ದಮೆ ಹೂಡಿದರು.
ಗ್ರೋವ್ ಅವರು ಕೇವಲ ಬರಹ ಮತ್ತು ಸಂಶೋಧನೆಗೆ ತಮ್ಮ ಪರಿಶ್ರಮವನ್ನು ಸೀಮಿತಗೊಳಿಸಲ್ಲಿಲ್ಲ, ʼಕನ್ಸರ್ವೇಶನ್ ಇನ್ ಆಫ್ರಿಕಾ ಇನ್ 1987ʼ ಹಾಗೂ ʼಓರಿಯಂಟ್ ಆನ್ ಸೌಥ್ ಮತ್ತು ಸೌಥ್ ಈಸ್ಟ್ ಏಶಿಯಾʼ ಪತ್ರಿಕೆಗಳಲ್ಲಿ ಸಹ- ಸಂಪಾದಿತ ಸಂಗ್ರಹವು ದಶಕದ ನಂತರ ಯುವಕರು, ವಿದ್ಯಾರ್ಥಿ ಸಂಕುಲದ ಹೊಸ ದ್ವನಿಯಾಯಿತು. ಈಗ ಇಪ್ಪತ್ತೈದು ವರ್ಷಗಳ ಹಿಂದೆ ಇವರು ವೈಟ್ ಹಾರ್ಸ್ ಪ್ರೆಸ್ ನಿಂದ ಪ್ರಾರಂಭಿಸಿದ ʼದಿ ಜರ್ನಲ್ ಎನ್ವೈರ್ನಮೆಂಟ್ ಆಂಡ್ ಹಿಸ್ಟರಿʼ ಒಂದು ಪ್ರಮುಖ ಪ್ರತ್ರಿಕೆ. ಭಾರತದ ಇನ್ನೂರು ವರ್ಷಗಳ ಇತಿಹಾಸವನ್ನು ಕುರಿತಂತೆ, ಇಂದಿನ ಭಾಷಣಕಾರರಾದಂತಹ ಭಾರತೀಯ ಇತಿಹಾಸಕಾರರಿಗೆ ಗ್ರೋವ್ ಅವರ ಕೃತಿಗಳು , ಹಿಂದಿನ ವಾಡಿಕೆಯನ್ನು ಮೀರಿ ಚಿಂತಿಸುವಂತೆ ಮಾಡುತ್ತವೆ. ಗತಕಾಲದ ಘಟನಾಕ್ರಮಗಳು ಮತ್ತು ಬದಲಾವಣೆಗಳ ಪರಿಪ್ರೇಕ್ಷದಲ್ಲಿ ಪರಿಸರದೊಂದಿಗೆ ಮಾನವನ ಅವಿನಾಭಾವ ಬೆಸುಗೆಯನ್ನು ಪುನಃಚೇತನಗೊಳಿಸುವಂತಹ ಮಹತ್ತರ ಕಾರ್ಯಕ್ಕೆ ಇವರ ಕೃತಿಗಳು ನಾಂದಿ ಹಾಡುತ್ತವೆ. ನಮ್ಮ ವರ್ತಮಾನ ಸ್ಥಿತಿಯನ್ನು ಅರಿಯಲು ನಾವು ಎಲ್ಲಿದ್ದೇವೆ , ಏಕೆ ಇಂತಹ ಪರಿಸ್ಥಿತಿ ಬಂದಿತು ಎಂದು ಪ್ರಶ್ನಿಸಿಕೊಳ್ಳಬೇಕು. ಇಂತಹ ಸಣ್ಣ ಪ್ರಯತ್ನಗಳಿಂದ ಗ್ರೋವ್ ಅವರ ಕನಸು ಹಸಿರಾಗಿರುತ್ತದೆ.
ಭಾಷಣಕಾರರ ಪರಿಚಯ
ಮಹೇಶ್ ರಂಗರಾಜನ್, ಇವರು ಭಾರತದ ಹರಿಯಾಣದಲ್ಲಿರುವ ಸೋನಿಪಥ್ ನ ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪರಿಸರ ಅಧ್ಯಯನದ ಭೋದಕರಾಗಿದ್ದಾರೆ. ದೆಹಲಿ ಮತ್ತು ಆಕ್ಸಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಇವರು ರೋಡ್ಸ್ ವಿದ್ಯಾರ್ಥಿ. ಕಾರ್ನೆಲ್, ಜಾದವ್ ಪುರ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನ ನೆಡೆಸಿ, ನೆಹರು ಮೆಮೋರಿಯಲ್ ಮ್ಯೂಸಿಯಮ್ ಮತ್ತು ಗ್ರಂಥಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಮೊದಲ ಕೃತಿ ʼಫೆಂಸಿಂಗ್ ದಿ ಫಾರೆಸ್ಟ್ʼ ( 1996) ಹಾಗೂ ನೇಚರ್ ಆಂಡ್ ನೇಶನ್ (2015) ಇತ್ತೀಚಿನ ಕೃತಿಯಾಗಿದೆ . ಇಂಡಿಯಾಸ್ ಎನ್ವೈರ್ನಮೆಂಟಲ್ ಹಿಸ್ಟರಿ (2012) , ನೇಚರ್ ವಿತೌಟ್ ಬಾರ್ಡರ್ಸ್ ( 2014) ಮತ್ತು ʼಆಟ್ ನೇಚರ್ಸ್ ಎಡ್ಜ್ʼ (2018) ಕೃತಿಗಳ ಸಹ-ಸಂಪಾದನೆ ಮಾಡಿದ್ದಾರೆ.