ಜಾನ್ ಇನ್ನ್ಸ್ ಸೆಂಟರ್ ಒಳಾಂಗಣ ನೋಟ
ಸೆಬಾಸ್ಟಿಯನ್ ಸ್ಯಾಮ್ವಾಲ್ಡ್ | ಸಂಜೆ 5:00 ಗಂಟೆ | 29 ಆಗಸ್ಟ್ 2020
ಸೆಬಾಸ್ಟಿಯನ್ ಸ್ಯಾಮ್ವಾಲ್ಡ್ , ಸಂಶೋಧಕರು ನಮ್ಮನ್ನು ಜಾನ್ ಇನ್ನ್ಸ್ ಸೆಂಟರ್‌ನ ಒಳಾಂಗಣ ಪರಿಸರವನ್ನು ಪರಿಚಯಿಸುತ್ತಾರೆ, ಸಸ್ಯಗಳನ್ನು ಅಧ್ಯಯನ ಮಾಡುವ ಬಗೆಗೆ ಪಕ್ಷಿನೋಟ.
ಬಸ್ತಿ ಯವರು ಜಾನ್ ಇನ್ನ್ಸ್ ಸೆಂಟರ್ ನ ಪಿ.ಎಚ್.ಡಿ ವಿದ್ಯಾರ್ಥಿ, ಇದು ಸಂಯುಕ್ತ ರಾಷ್ಟ್ರಗಳಲ್ಲಿರುವ ಸ್ವಾಯತ್ತ ಅಂತರ್ರಾಷ್ಟ್ರೀಯ ಸಂಸ್ಥೆ, ಸಸ್ಯ ವಿಜ್ಞಾನ, ಅನುವಂಶಿಕತೆ ಮತ್ತು ಸೂಕ್ಷ್ಮ ಜೀವ ವಿಜ್ಞಾನ ದ ಅತ್ಯುತ್ಕೃಷ್ಟತೆಯ ಕೇಂದ್ರ. ಸಸ್ಯಗಳ ಕೋಶ ಕಣಗಳನ್ನು ಅರಿವುದರಲ್ಲಿ ಅಧ್ಯಯನ ನೆಡೆಸಿದ್ದಾರೆ. ಯಾವುದಾದರೂ ರೋಗಾಣುವು ಎದುರಾದಾಗ ಹೇಗೆ ಸಸ್ಯ ಕೋಶದ ಕಣಗಳು ಬೇರೆ ಆರೋಗ್ಯಕರ ಕೋಶ ಕಣಗಳಿಂದ ದೂರಾಗುತ್ತವೆ ಎಂದು ಸಸ್ಯಗಳ ಒಳ ಪ್ರಕ್ರಿಯೆಯನ್ನು ಇವರ ಇತ್ತೀಚಿನ ಕೃತಿಯಲ್ಲಿ ವಿವರಿಸಿದ್ದಾರೆ.
ಈ ಕಾರ್ಯಕ್ರಮದ ಮೂಲಕ ಬಸ್ತಿ ಮುಂತಾದ ಸಂಶೋಧಕರು, ಸಸ್ಯಗಳ ಅಧ್ಯಯನ ನೆಡೆಸುವಾಗ ಬಳಸುವ ಅನೇಕ ಉಪಕರಣಗಳು ಮತ್ತು ಪರಿಸರದ ಬಗ್ಗೆ , ಸಸ್ಯ ಬೆಳವಣಿಗೆ ಕೋಣೆಯಿಂದ ಹಿಡಿದು, ಸೂಕ್ಷ್ಮ ದರ್ಶಕದ ವರೆಗೂ ಒಟ್ಟು ಮಾಹಿತಿ ನೀಡಲಾಗುತ್ತದೆ.
ಜಾನ್ ಇನ್ನ್ಸ್ ಸೆಂಟರ್ ಒಂದು ಪರಿಚಯ
ಜಾನ್ ಇನ್ನ್ಸ್ ಸೆಂಟರ್, ಸಂಯುಕ್ತ ರಾಷ್ಟ್ರಗಳಲ್ಲಿ ನಾರ್ವಿಚ್ ನಲ್ಲಿರುವ ಸ್ವಾಯತ್ತ ಅಂತರ್ರಾಷ್ಟ್ರೀಯ ಸಂಸ್ಥೆ, ಸಸ್ಯ ವಿಜ್ಞಾನ, ಅನುವಂಶಿಕತೆ ಮತ್ತು ಸೂಕ್ಷ್ಮ ಜೀವ ವಿಜ್ಞಾನ ದ ಅತ್ಯುತ್ಕೃಷ್ಟತೆಯ ಕೇಂದ್ರ, ಹೊಸ ಬಗೆಯ ಸಂಶೋಧನೆಗಳ ಮೂಲಕ ಸಸ್ಯ ಕುಲ ಮತ್ತು ಸೂಕ್ಷ್ಮಾಣು ಜೀವಿಗಳ ಬಗ್ಗೆ ಜ್ಞಾನ ವರ್ಧನೆ, ಭವಿಷ್ಯದ ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವುದು ಮತ್ತು ಆಡಳಿತವರ್ಗ ಹಾಗೂ ಸಾರ್ವಜನಿಕ ರೊಂದಿಗೆ ಒಡಗೂಡುವುದೇ ಜಾನ್ ಇನ್ನ್ಸ್ ಸೆಂಟರ್‌ನ ಮುಖ್ಯ ಉದ್ದೇಶ. ಇಂತಹ ಒಗ್ಗೂಡಿಕೆ, ಪ್ರಾಕೃತಿಕ ವಿವಿಧತೆಯನ್ನು ಅರಿತು, ಕೃಷಿ, ಪರಿಸರ, ಮಾನವ ಸ್ವಾಸ್ಥ್ಯ ಮತ್ತು ಒಳಿತಿಗೆ ಲಾಭದಾಯಕ.