ಸಾಲ್ವಿಂಗ್‌ ದಿ ಪ್ರಾಬ್ಲಮ್‌ ಆಫ್‌ ಹಂಗರ್‌

ಗೇಬ್ರಿಲಾ ಸೋಟೋ ಲವೇಗ ಸಂಜೆ | 6.30 ಗಂಟೆ | 22 ಆಗಸ್ಟ್ 2020

1960 ರ ಸುಮಾರಿಗೆ, ಜನಸಂಖ್ಯಾ ಸ್ಫೋಟ ಮತ್ತು ʼಜಗತ್ತಿನ ಹಸಿವುʼ ತಣಿಸಲು ಆಹಾರ ಸಂಪೂರ್ತಿ, ಇವೇ ವಿಶ್ವ ನೀತಿಯ ಮುಖ್ಯ ಕಳವಳವಾಗಿತ್ತು. ವಿಜ್ಞಾನಿಕವಾಗಿ, ಅದರಲ್ಲೂ ಕೃಷಿ ವಿಜ್ಞಾನದ ಮೂಲಕ ಹಸಿವನ್ನು ನೀಗುವುದೇ ಸರಿಯಾದ ಸಮಾಧಾನವಾಗಿ ಕಂಡುಬಂದಿತ್ತು. ಮೆಕ್ಸಿಕೋ ಮೂಲದಿಂದ ಪ್ರಾರಂಭವಾಗಿ ಇಡೀ ಜಗತ್ತಿಗೇ ಪ್ರಸರಿಸಿದ ಹೊಸ ಬಗೆಯ ವೈಶ್ವಿಕ ಚಳುವಳಿ, ʼಹಸಿರು ಕ್ರಾಂತಿʼ ಯಾಗಿ ಪರಿಣಮಿಸಿತ್ತು. 

ಈ ಒಂದು ವೈಶ್ವಿಕ ಚಳುವಳಿಯು ವಿಭಿನ್ನ ಜನಸಮೂಹಗಳ ಪರಿಸರ, ಸಮಾಜ ಮತ್ತು ಆರ್ಥಿಕತೆಯ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿ ಬದಲಾವಣೆಗೆ ಎಣೆ ಮಾಡಿತು ಎಂದು ನಂತರದಲ್ಲಿ ಅರಿವಿಗೆ ಬಂದಿದೆ. ಅಭಿವೃದ್ಧಿಯ ಈ ಹಾದಿಯು ಬೇರೆಯದೇ ತಿರುವನ್ನು ಹೊಂದಬಹುದಿತ್ತು.

ಈ ಭಾಷಣದ ಮೂಲಕ, ಗೇಬ್ರಿಲಾ ಅವರು ಭಾರತ ಮತ್ತು ಮೆಕ್ಸಿಕೋ ದೇಶಗಳ ಇತಿಹಾಸದ ಅಧ್ಯಯನ ಮಾಡುವುದು ಹೇಗೆ ಸೂಕ್ತವಾಗಿದೆ ಮತ್ತು ಕೇವಲ ʼಹಸಿರು ಕ್ರಾಂತಿʼ ಯಂತಹ ವೈಶ್ವಿಕ ಸಮಾಧಾನವು, ಮೂಲಭೂತವಾಗಿ ಕೃಷಿಯನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ, ಸಾಲದು ಎಂಬ ವಿಚಾರವನ್ನು ವ್ಯಕ್ತ ಪಡಿಸುತ್ತಾರೆ. ಭಾರತದಲ್ಲಿ ಹುಟ್ಟಿ, ಮೆಕ್ಸಿಕೋ ದಲ್ಲಿ ಜೀವನ ಯಾನ ನೆಡೆಸಿದ ಶ್ರೀ ಪಾಂಡುರಂಗ ಖಂಖೋಜೆಯವರ ಬಗೆಗೆ ಬೆಳಕು ಹರಿಸುತ್ತಾರೆ. ವಿಶ್ವಮಟ್ಟದಲ್ಲಿ, ಈ ಎರಡೂ ದೇಶಗಳ ಇತಿಹಾಸದ ಪ್ರಾಮುಖ್ಯತೆಯನ್ನು ವಿಮರ್ಶಿಸುತ್ತಾರೆ.



IMG_7030_final.jpg

ಭಾಷಣಕಾರರ ಪರಿಚಯ

ಗೇಬ್ರಿಲಾ ಸೋಟೋ ಲವೇಗಾ, ವೈಜ್ಞಾನಿಕ ಇತಿಹಾಸದ ಪ್ರೊಫೆಸರ್‌ ಮತ್ತು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಮೆಕ್ಸಿಕೋ ಅಧ್ಯಯನದ ಆಂಟೋನಿಯೋ ಮೈಡ್ರೋ ಪ್ರೊಫೆಸರ್‌. ʼಇಪ್ಪತ್ತನೇ ಶತಮಾನದಲ್ಲಿ ವಿಜ್ಙಾನ ಮತ್ತು ಅಭಿವೃದ್ಧಿ ಯೋಜನೆಗಳುʼ, ʼಔಷದೀಯ ವೃತ್ತಿಪರರು ಮತ್ತು ಸಾಮಾಜಿಕ ಚಳುವಳಿಗಳುʼ, ʼಭಾರತ-ಮೆಕ್ಸಿಕೋ ದೇಶಗಳ ನಡುವಣ ವಿನಿಮಯ ಸಂಬಂಧʼ, ಇವೇ ಮುಂತಾದವು ಇವರ ಪ್ರಸಕ್ತ ಸಂಶೋಧನೆಯ ವಿಷಯಗಳು.

ಇವರ ಮೊದಲ ಪುಸ್ತಕ, “ಜಂಗಲ್‌ ಲಾಬೊರೇಟರೀಸ್‌, ಮೆಕ್ಸಿಕನ್‌ ಪೆಸೆಂಟ್ಸ್‌, ನ್ಯಾಷನಲ್‌ ಪ್ರಾಜೆಕ್ಟ್ಸ್‌ ಆಂಡ್‌ ದಿ ಮೆಕಿಂಗ್‌ ಆಫ್‌ ದಿ ಪಿಲ್‌” ಕೃತಿಯು, ಅಮೇರಿಕನ್‌ ಸೋಶಿಯೊಲಾಜಿಕಲ್‌ ಅಸೋಸಿಯೇಶನ್‌ ಸಂಸ್ಥೆಯಿಂದ , ಜ್ಞಾನ, ವಿಜ್ಞಾನ, ಮತ್ತು ತಂತ್ರಜ್ಞಾನ ಅಧ್ಯಯಕ್ಕಾಗಿ, ರಾಬರ್ಟ್‌ ಕೆ ಮೆರ್ಟನ್‌ ಉತ್ತಮ ಪುಸ್ತಕ ಪ್ರಶಸ್ತಿ ಗಳಿಸಿದೆ. ಇವರ ಎರಡನೆಯ ಪ್ರಸ್ತುತಿ, “ಸ್ಯಾನಿಟೈಸಿಂಗ್‌ ರೆಬಿಲಿಯನ್:‌ ಫಿಸಿಶಿಯನ್‌ ಸ್ಟ್ರೈಕ್ಸ್‌, ಪಬ್ಲಿಕ್‌ ಹೆಲ್ತ್‌ ಆಂಡ್‌ ರೆಪ್ರೆಶನ್‌ ಇನ್‌ ಟ್ವೆಂಟಿಯತ್‌ ಸೆಂಚುರಿ ಮೆಕ್ಸಿಕೋ” , ಪುಸ್ತಕದಲ್ಲಿ ಸಾಮಾಜಿಕ ಕ್ರಾಂತಿಕಾರಿಗಳಾಗಿ ಹಾಗೂ ಆಧುನಿಕ ಜಗತ್ತಿನ ನಿರ್ಮಾಣದ ಹೊಣೆಗಾರರಾಗಿ ಸ್ವಾಸ್ಥ್ಯ ಕಾರ್ಯಕರ್ತರ ಪಾತ್ರಗಳ ವಿಮರ್ಶೆ ಒಡಗೂಡಿದೆ. ಇವರ ನೂತನ ಸಂಶೋಧಕ ಕೃತಿ , ಭಾರತ ಮತ್ತು ಮೆಕ್ಸಿಕೋ ದೇಶಗಳ ದೃಷ್ಟಿಯಿಂದ ಇಪ್ಪತ್ತನೇ ಶತಮಾನದಲ್ಲಿ ಕೃಷಿ ಅಭಿವೃದ್ಧಿಗೆ ದೊರತ ಬೆಂಬಲದ ಇತಿಹಾಸವನ್ನು ಒಳಗೊಂಡಿದೆ.

ಇವರಿಗೆ ಅನೇಕ ಅನುದಾನಗಳು ದೊರೆತಿವೆ, ಅವುಗಳಲ್ಲಿ ಫೋರ್ಡ್‌, ಮೆಲ್ಲನ್‌, ಫುಲ್ ಬ್ರೈಟ್‌, ಡಾಡ್‌ ಮತ್ತು ಗೆರ್ಡಾ ಹೆಂಕೆಲ್‌ ಪ್ರತಿಷ್ಠಾನಗಳು ಮುಖ್ಯವಾದುವು. 2019 ರಲ್ಲಿ, ಇವರಿಗೆ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಎವರೆಟ್ಟ್‌ ಮೆಂಡಲ್‌ಶನ್‌ ಎಕ್ಸಲೆಂಸ್‌ ಇನ್‌ ಮೆಂಟರಿಂಗ್‌ ಪ್ರಶಸ್ತಿ ದೊರೆತಿದೆ.