ಅದರ ನುಡಿ ಕೇಳಿ ಬರುತ್ತಿದೆಯೇ?
ಎಮಿಲಿಯ ಟೆರೆಸಿಯಾನೋ | ಸಂಜೆ 6.30 ಗಂಟೆ | 28 ಆಗಸ್ಟ್ 2020
ತಂತಿ ರಹಿತ ಸಂಪರ್ಕ ಸಾಧನೆಯ ಅವಿಷ್ಕಾರದ ನಂತರ ಭೌತ ಶಾಸ್ತ್ರಜ್ಞ ಶ್ರೀ ಜಗದೀಶ್ ಚಂದ್ರ ಬೋಸರು ಸಸ್ಯ ಪ್ರಪಂಚದೆಡೆಗೆ ತಮ್ಮ ಗಮನ ಹರಿಸಿದರು. ಭೌತ ಶಾಸ್ತ್ರ ಮತ್ತು ಜೀವ ವಿಜ್ಞಾನವನ್ನು ಮೆಳೈಸುತ್ತಾ ಜೀವ-ಭೌತ ಶಾಸ್ತ್ರದ ಕ್ಷೇತ್ರದಲ್ಲಿ ಮುಂದುವರೆದ ಹೊಸ ದಾಖಲೆಯನ್ನು ಸೃಷ್ಟಿಸುವ ಅಧ್ಯಯನವನ್ನು ಕೈಗೊಂಡು ಸಸ್ಯ ಚೇತನ, ಪ್ರಜ್ಞೆಯ ಅಧ್ಯಯನಕ್ಕಾಗಿ ಕ್ರೆಸ್ಕೋಗ್ರಾಫ್ ಎಂಬ ಉಪಕರಣವನ್ನು ಅವಿಷ್ಕರಿಸಿದರು.
ಬೋಸರು ಸದಾ ತಮ್ಮ ಸಂಶೋಧನೆಗಳಲ್ಲಿ ಬಳಸುತ್ತಿದ್ದ ʼಮಟ್ಟಿದರೆ ಮುನಿʼ ಗಿಡವು ಭಾಷಣದ ಕೇಂದ್ರ ಬಿಂದುವಾಗಿದೆ. ಕಲಾವಿದ ಗಗನೇಂದ್ರನಾಥ ಠಾಗೋರರ ಬಗೆಗೆ ಹಾಗೂ ಅವರು ಬಿಡಿಸಿರುವ ಕಲಾಕೃತಿ, ʼಕಾರ್ಯ ನಿರತ ಬೋಸರʼ ಕಾಲ್ಪನಿಕ ಚಿತ್ರವನ್ನು ಕುರಿತ ಚರ್ಚೆ ಕೂಡ ಸಮ್ಮಿಲಿತವಾಗಿದೆ. ಮಾನವ ಜಗತ್ತಿನ ಹೊಸ್ತಿಲ್ಲಿ, ಬೋಸರ ಸಸ್ಯ ಪ್ರಪಂಚದ ಸಂಶೋಧನೆಯನ್ನು ಪರಿಚಯಿಸುವ ಈ ಕಾಲ್ಪನಿಕ ಚಿತ್ರಗಳಲ್ಲಿ, ಕೃತಕ, ಶ್ರವ್ಯ ಮತ್ತು ಸತ್ಯದ ಭಾವಗಳು ಹೊರಹೊಮ್ಮಿವೆ. ಬೋಸರು ಹುಟ್ಟಿ 150 ವರ್ಷಗಳು ಕಳೆದಿದ್ದರೂ, ಅವರ ಸಂಶೋಧನೆಯಿಂದ ಕಲಾವಿದರು, ವಿಜ್ಞಾನಿಗಳು ಮತ್ತು ಸಸ್ಯ ನರಶಾಸ್ತ್ರ ಜೀವವಿಜ್ಞಾನಿಗಳು ಏನೆಲ್ಲಾ ಕಲಿಯಬಹುದು ಎಂಬುದನ್ನು ಪ್ರತಿಬಿಂಬಿಸುತ್ತದೆ.
ಭಾಷಣಕಾರರ ಪರಿಚಯ
ಎಮಿಲಿಯ ಟೆರೆಸಿಯಾನೋ, ಆಧುನಿಕ ಮತ್ತು ಸಮಕಾಲೀನ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ದಕ್ಷಿಣ ಏಷಿಯಾದ ಕಲೆಯೆಡೆಗೆ ವಿಶೇಷ ಒಲವು ತೋರಿದ್ದಾರೆ. ಯೂನಿವರ್ಸಿಟಿ ಕಾಲೇಜ್, ಲಂಡನ್ ಇಂದ ಫಿಲಾಸಫಿ ಆಂಡ್ ಹಿಸ್ಟರಿ ಆಫ್ ಆರ್ಟ್ (ಮೊದಲ ದರ್ಜೆ ಹಾನರ್ಸ್) ಬಿ.ಎ ಪದವಿ, ಮತ್ತು ಹಿಸ್ಟರಿ ಆಫ್ ಆರ್ಟ್ ಎಮ್.ಎ ಪದವಿ ಹಾಗೂ ಕೋರ್ಟಾಲ್ಡ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ನಿಂದ ಪಿ.ಎಚ್.ಡಿ ಪಡೆದಿದ್ದಾರೆ. ಇವರಿಗೆ ನೆಹರು ಟ್ರಸ್ಟ್ ಪುರಸ್ಕಾರವು (2008) ಮತ್ತು ದಿ ವಿಕ್ಟೋರಿಯ ಆಂಡ್ ಆಲ್ಬರ್ಟ್ ಮ್ಯೂಸಿಯಮ್ ನ ಎ.ಎಚ್.ಆರ್.ಸಿ ಕೊಲಾಬೊರೇಟಿವ್ ಡಾಕ್ಟೋರಲ್ ವಿದ್ವತ್ತು ಪ್ರಶಸ್ತಿ
ದೊರೆತಿವೆ(2008-2012).
ಎಮಿಲಿಯ ಅವರು ಹಲವು ಸಂಸ್ಥೆಗಳಲ್ಲಿ ಭೋದನೆ ನೆಡೆಸಿದ್ದಾರೆ. ಯೂನಿವರ್ಸಿಟಿ ಕಾಲೇಜ್, ಲಂಡನ್, ಕೋರ್ಟಾಲ್ಡ್ ಇನ್ಸ್ಟಿಟ್ಯೂಟ್, ಸೊಥ್ಬೀಸ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಆಂಡ್ ಕ್ರಿಸ್ಟೀಸ್ ಎಡುಕೇಶನ್ ಪ್ರಮುಖವಾದವು. ಇವರು, ಎಂ.ಓ.ಎಮ್.ಏ , ವೈಟ್ ಚಾಪಲ್ ಆರ್ಟ್ ಗ್ಯಾಲರಿ, ಲಾಹೋರ್ ಬಿಯಾನೆಲ್ಲೆ (ಎಲ್ 01) , ಟಟೆ ಮಾಡರ್ನ್, ಡ್ರಾಯಿಂಗ್ ರೂಮ್, ದಿ ಫೋಟೋಗ್ರಾಫರ್ಸ್ ಗ್ಯಾಲರಿ , ವಿ ಆಂಡ್ ಏ, ಏಲ್ ವಿಶ್ವವಿದ್ಯಾಲಯ ಮತ್ತು ಲಂಡನ್ ಅಲ್ಲಿ ಏಲ್ ಸೆಂಟರ್ ಫಾರ್ ಬ್ರಿಟಿಷ್ ಆರ್ಟ್, ಪ್ರಿಂಸ್ಟನ್ ಯೂನಿವರ್ಸಿಟಿ, ವಾಧಾಮ್ ಕಾಲೇಜ್, ಆಕ್ಸಫರ್ಡ್ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ಎಡಿನ್ಬರ್ಗ್ ವಿಶ್ವವಿದ್ಯಾಲಯ, ಎಸ್.ಒ.ಏ.ಎಸ್ ಮತ್ತು ಕಿಂಗ್ಸ್ ಕಾಲೇಜ್, ಲಂಡನ್ ಮುಂತಾದೆಡೆ ಭಾಷಣ ನೀಡಿದ್ದಾರೆ. ಪ್ರಸಕ್ತ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಆಧುನಿಕ ಕಲೆಯ ಉಪನ್ಯಾಸಕರಾಗಿದ್ದಾರೆ. ಇವರ ಕೃತಿ ʼಆರ್ಟ್ ಆಂಡ್ ಎಮರ್ಜೆಂಸಿ: ಮಾಡರ್ನಿಸಮ್ ಇನ್ ಟ್ವೆಂಟಿಯತ್ ಸೆಂಚುರಿ ಇಂಡಿಯಾʼ, 2018 ರಲ್ಲಿ ಐ.ಬಿ ಟಾರಿಸ್ ಮೂಲಕ ಪ್ರಕಾಶನಗೊಂಡಿದೆ.