FinalFlower.jpg

ಆನ್‌ ಗಾರ್ಡನ್‌ ಕಲ್ಚರ್ಸ್‌

ಸುರೇಶ್‌ ಜಯರಾಮ್‌ ಮತ್ತು ಅಮಿತಾ ಭವಿಶ್ಕರ್‌ | ಸಂಜೆ 6.30 ಗಂಟೆ | 29 ಆಗಸ್ಟ್ 2020


ಭಾಷಣಕಾರರ ಪರಿಚಯ

Amita web.jpg

ಅಮಿತಾ ಭವಿಶ್ಕರ್‌, ಸಮಾಜಶಾಸ್ತ್ರಜ್ಞರು. 2017 ರಿಂದ ಭಾರತದ ದೆಹಲಿಯಲ್ಲಿರುವ ಆರ್ಥಿಕ ಅಭಿವೃದ್ಧಿ ಸಂಸ್ಥೆಯ ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ 2005 ರಲ್ಲಿ ʼಅಭಿವೃದ್ಧಿ ಅಧ್ಯಯನಗಳʼ ಕುರಿತಂತೆ ವಿಶೇಷ ಯೋಗದಾನಕ್ಕಾಗಿ ಮಾಲ್ಕೋಲ್ಮ್‌ ಆದಿಶೀಷ ಪುರಸ್ಕಾರ ದೊರೆತಿದೆ. 2008 ರಲ್ಲಿ ಸಮಾಜ ವಿಜ್ಞಾನ ಸಂಶೋಧನೆಗಾಗಿ ವಿ.ಕೆ.ಆರ್.ವಿ ರಾವ್‌ ಪುರಾಸ್ಕಾರ ಮತ್ತು ಆಧುನಿಕ ಭಾರತದಲ್ಲಿ ಪರಿಸರ ಹಾಗೂ ಸಾಮಾಜಿಕ ಚಳುವಳಿಯನ್ನು ಕುರಿತಂತೆ ಇವರ ವಿಮರ್ಶಾತ್ಮಕ ಅಧ್ಯಯನಕ್ಕಾಗಿ 2010 ರಲ್ಲಿ ಸಮಾಜ ವಿಜ್ಞಾನಕ್ಕೆ ಸಲ್ಲುವ ಇನ್ಫೋಸಿಸ್‌ ಪುರಸ್ಕಾರ ದೊರೆತಿದೆ. ಭಾರತದ ನಗರ ಮತ್ತು ಹಳ್ಳಿಗಳಲ್ಲಿ ಪರಿಸರ ಸಂಸ್ಕೃತಿ ಯ ಅಧ್ಯಯನ ನೆಡೆಸಿದ್ದಾರೆ.

Suresh web.jpg

ಸುರೇಶ್‌ ಜಯರಾಮ್‌, ಇವರು ಬೆಂಗಳೂರಿನ ಕಲಾವಿದರು, ಕಲಾ ಇತಿಹಾಸಕಾರರು, ಕಲಾ ಆಡಳಿತಕಾರರು ಮತ್ತು ಪರಿಪಾಲಕರು. ಭಾರತದ ಬೆಂಗಳೂರಿನಲ್ಲಿ ವಿಶುಯಲ್‌ ಆರ್ಟ್‌ ಕಲೆಕ್ಟೀವ್‌/1. ಶಾಂತಿ ರೋಡ್, “ಸ್ಟೂಡಿಯೋ ಆನ್‌ ಇಂಟರ್ನ್ಯಾಶನಲ್‌ ಆರ್ಟಿಸ್ಟ್ಸ್‌ ರೆಸಿಡೆಂಸಿ ಆಂಡ್‌ ಆಲ್ಟರ್ನೇಟಿವ್‌ ಆರ್ಟ್‌ ಸ್ಪೇಸ್‌” ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು. ಇವರು ಪ್ರಸಕ್ತ, ಕಲಾಭ್ಯಾಸ, ನಗರ ನಕ್ಷೆ ನಿರ್ಮಾಣ, ಕಲೆಹಾಕಿದ ಕಲಾಕೃತಿಗಳ ಪರಿಪಾಲನೆ, ಮತ್ತು ಕಲಾ ಶಿಕ್ಷಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪರಿಸರ ಮತ್ತು ನಗರ ಅಭಿವೃದ್ಧಿ ಯಲ್ಲಿರುವ ವಿಶೇಷ ಆಸಕ್ತಿಯು ಇವರ ಕಾರ್ಯಕ್ಕೆ ಮುಖ್ಯ ಪ್ರೇರಣೆಯಾಗಿದೆ. ಇವರು ಬೆಂಗಳೂರಿನ ಲಲಿತ ಕಲಾ ಕಾಲೇಜ್‌ ಆಗಿರುವ ʼಕರ್ನಾಟಕ ಚಿತ್ರಕಲಾ ಪರಿಷತ್ʼ ಸಂಸ್ಥೆಯಿಂದ 1990 ರಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್‌ ಎ ಪದವಿ ಮತ್ತು ಬರೋಡದ, ಎಂ.ಎಸ್‌ ವಿಶ್ವವಿದ್ಯಾಲಯದಿಂದ 1992 ರಲ್ಲಿ ಕಲಾ ವಿಮರ್ಶೆಯ ವಿ಼ಷಯದಲ್ಲಿ ಎಮ್.ಎಫ್.ಏ ಪದವಿ ಪಡೆದಿದ್ದಾರೆ. ʼಕರ್ನಾಟಕ ಚಿತ್ರಕಲಾ ಪರಿಷತ್ʼ ಸಂಸ್ಥೆಯಲ್ಲಿ ಕಲಾ ಇತಿಹಾಸದ ಭೋದಕರಾಗಿ, ನಂತರ 2005-2007 ರ ವರೆಗೂ ಡೀನ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.