‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಸಸ್ಯಗಳ ಚಲನ ಕ್ರಿಯೆಯು ಸಾಮಾನ್ಯವಾಗಿ ಮಾನವರಿಗೆ ಗೋಚರವಾಗುವುದಿಲ್ಲ, ಆದ ಕಾರಣ ಅವು ನಿಂತಲ್ಲೇ ಇರುತ್ತವೆ ಎಂದು ಭಾವಿಸುತ್ತೇವೆ. ಫಾರೆಸ್ಟ್ ಇನ್ಕ್ಲೂಸಿವ್, ಅರಣ್ಯ ಪರಿಸರ ಮತ್ತು ಪ್ರದರ್ಶನಾಲಯದ ಕಲಾ ಘಟಕವನ್ನು ಸೆಂಸರ್ ಜಾಲದ ಮೂಲಕ ಸಂಪರ್ಕ ಸ್ಥಾಪಿಸುವ ಒಂದು ವ್ಯವಸ್ಥೆ. ಮರಗಳು ಮತ್ತು ಅವುಗಳ ಸುತ್ತಲಿನ ಪರಿಸರದ ಸೂಕ್ಷ್ಮ ಚಲನ-ವಲನದ ಬಗೆಗೆ ಗಮನ ಹರಿಸುತ್ತದೆ, ಕಾಡು ಮತ್ತು ನಾಡಿನ ನಡುವಣ ಸಂಪರ್ಕ ಸೇತುವಾಗಿ ಸಹಬಾಳ್ವೆಯ ಪ್ರಕ್ರಿಯೆಯನ್ನು ವೇದಿಕೆಯ ಅಂಗಳದೊಳಗೆ ಸೃಷ್ಠಿಸುವ ಪರಿ.
ಫಾರೆಸ್ಟ ಇನ್ಕ್ಲೂಸಿವ್ʼ, ಕಾಡಿನ ಪರಿಸರಕ್ಕೆ ದ್ವನಿ ನೀಡಲು ವಿಭಿನ್ನ ಮಾರ್ಗಗಳನ್ನು ಅರಸುವ ಒಂದು ರಚನಾತ್ಮಕ ವ್ಯವಸ್ಥೆ. ಸೆಂಸರ್ ಜಾಲ-ಸಂರಚನೆಯನ್ನು, ಸಂಪರ್ಕ ಕಲ್ಪಿಸಲಾಗುತ್ತದೆ. ಒಣ ಮರ ಮತ್ತು ಕಾರ್ಕ್ ಬಳಸಿ, ರಚಿಸಲಾದ ಸೆಂಸರ್ ಸಂರಚನೆಯನ್ನು, ಒಂದು ಮರದ ಕಾಂಡಕ್ಕೆ ಅಳವಡಿಸಲಾಗಿರುತ್ತದೆ, ವೈ-ಫೈ ಮೂಲಕ ಅಂತರ್ಜಾಲಕ್ಕೆ ಈ ಘಟಕದ ಸಂಪರ್ಕವನ್ನು ನೀಡಲಾಗುತ್ತದೆ. ಈ ಸಂಘಟಕದಲ್ಲಿ, ಎಂಟು ಬಗೆಯ ಪರಿಸರ-ಸೆಂಸರ್ ಗಳನ್ನು ಅಳವಡಿಸಲಾಗಿದೆ. (ಮಣ್ಣಿನ ತಾಪಮಾನ, ಮಣ್ಣಿನ ತೇವಾಂಶ, ನೀರು ಹೀರುವಿಕೆ ಗತಿ(0.1 μm – 10 μm), ಬೆಳಕಿನ ಪ್ರಮಾಣ, ವಾಯು ತೇವಾಂಶ/ವತ್ತಡ/ಎತ್ತರ, ಮಾರುತ, ವಿ.ಓ.ಸಿ/ ಇಂಗಾಲದ ಡೈಆಕ್ಸೈಡ್ ಪ್ರಮಾಣ ಮತ್ತು ಮಳೆ) ಈ ಎಲ್ಲಾ ಪರಿಣಾಮಗಳಿಗೆ ಸಂಬಂಧಿಸಿದಂತೆ ಭೂಮಿಯ ಮೆಲ್ಭಾಗದಲ್ಲಿ ಮತ್ತು ನೆಲದೊಳಗೆ ನೆಡೆಯುವ ಸೂಕ್ಷ್ಮ ಪ್ರಕ್ರಿಯೆಗಳ ವಿವರಣೆಗಳನ್ನು ಆಗಿಂದಾಗ್ಯೆ ಕಲೆಹಾಕಲಾಗುತ್ತದೆ. ದೂರದಿಂದಲೇ ಎಲ್ಲಾ ವಿವರಣೆಗಳ ಪಟ್ಟಿ ಮಾಡಿ ವಿಶ್ಲೇಷಣೆ ನೆಡೆಸಬಲ್ಲ (ಐ.ಓ.ಟಿ) ಶಿಫ್‌ಟರ್ ವ್ಯವಸ್ಥೆಗೆ, ಸೆಂಸರ್ ಸಂಘಟಕದಿಂದ ವಿವರಣೆಗಳನ್ನು ವರ್ಗಾವಣೆ ಮಾಡಿ ನಂತರ ಮರಗಿಡಗಳ ಸೂಕ್ಷ್ಮ ಚಲನದ ವಿಭಿನ್ನ ಕಲಾಕೃತಿಗಳನ್ನು ರಚಿಸಲಾಗುತ್ತದೆ.
ಮಾಧ್ಯಮ:
ಸಂರಚನೆ : ಕಾರ್ಕ್, ಮರ ಮತ್ತು ಎಲೆಕ್ಟ್ರಾನಿಕ್ಸ್ ಜೋಡಣೆಗಳು: ಪ್ರಕ್ರಿಯಾತ್ಮಕ, ಶಿಫ್ಟ್‌ರ್.ಐಒ ಮತ್ತು ವೀಡಿಯೋ
ವರ್ಷ: 2020
ಕಲಾಕಾರರ ಪರಿಚಯ
ಜೇನ್ ಟಿಂಗ್ಲೇ, ಯೋರ್ಕ್ ವಿಶ್ವವಿದ್ಯಾಲಯಲ್ಲಿ ಸಹಾಯಕ ಪ್ರೊಫೆಸರ್, ಸಂಗ್ರಹಾಲಯ ಪರಿಪಾಲಕರು ಮತ್ತು ಕಲಾಕಾರರು. ಅಮೇರಿಕ, ಮಿಡ್ಲ್ ಈಸ್ಟ್, ಏಶಿಯ ಮತ್ತು ಯೂರೋಪ್ ದೇಶಗಳಲ್ಲಿ ಆಯೋಜಿತವಾದ ಪ್ರದರ್ಶನ ಕೂಟಗಳಲ್ಲಿ ಹಾಗೂ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ. ಇವರು ಬೀಜಿಂಗ್ ನ ಗ್ಯಾಲರಿ ಲೆ ಡೆಕೊ (ಜೆ.ಪಿ) ದಲ್ಲಿರುವ ಚೀನಾದ ರಾಷ್ಟ್ರೀಯ ಕಲಾ ಸಂಗ್ರಹಾಲಯದ ʼಟ್ರಾನ್ಸ್‌ಲೈಫ್ ಇಂಟರ್ ನಾಷನಲ್ ಟ್ರಿನಿಯಲ್ ಆಫ್ ಮೀಡಿಯಾʼ ಆರ್ಟ್ ಪ್ರದರ್ಶನದಲ್ಲಿ ಮತ್ತು ಎಲೆಕ್ಟ್ರಾ ಉತ್ಸವ(ಸಿ.ಎ) ದಲ್ಲಿ ಭಾಗವಹಿಸಿದ್ದಾರೆ. ಇವರ ಕಲಾಕೃತಿಗೆ ಕೆನೆತ್ ಫಿಂಕೆಲ್ಸ್ಟೀನ್ ಪುರಸ್ಕಾರ ಹಾಗೂ ಪೋರ್ಚುಗಲ್ ನಲ್ಲಿ ನೆಡೆದ ಇಂಟರ್ ಫೇಸಸ್ - ಇಂಟರಾಕ್ಟೀವ್ ಆರ್ಟ್ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ ದೊರೆತಿದೆ.