‘ಸಂಯುಕ್ತ ರಾಷ್ಟ್ರಗಳ’ ಸಾಮಾನ್ಯ ಸಭೆಯು, 2020 ಅನ್ನು ,ಅಂತರ್ರಾಷ್ಟ್ರೀಯ ಸಸ್ಯ ಸ್ವಾಸ್ಥ್ಯ ವರ್ಷದ ರೂಪದಲ್ಲಿ ಘೋಷಿಸಿದೆ. ಸಸ್ಯಕುಲ, ನಾವು ಉಸಿರಾಡುವ ಗಾಳಿ ಮತ್ತು ಸೇವಿಸುವ ಆಹಾರವನ್ನು ನೀಡುವ ಮೂಲಭೂತ ಆಧಾರಗಳು ಎಂಬ ತತ್ವವನ್ನು ಮೀರಿ ಸಸ್ಯಗಳ ಬಗೆಗೆ ಗಹನ ಚಿಂತನೆ ನೆಡೆಸಲು ಯುವ ಪೀಳಿಗೆಯನ್ನು ಪ್ರೇರೇಪಿಸಲು ಇದು ಒಳ್ಳೆಯ ಅವಕಾಶ.
ಸಸ್ಯದಂತಹ ಜೀವಿಗಳು , 3000 ದಶಲಕ್ಷ ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಭೂಮಿಯನ್ನು ಆವರಿಸಿವೆ. ಇವು, ಅನೇಕ ಜೀವರಾಶಿಗಳ , ಹುಟ್ಟು ಮತ್ತು ವಿನಾಶಕ್ಕೆ ಸಾಕ್ಷಿಯಾಗಿವೆ, ಅನ್ವೇಶಕರೊಂದಿಗೆ ಹಲವು ಖಂಡಗಳ ಭ್ರಮಣೆ ಮಾಡಿವೆ, ವಿಶ್ವದೆಲ್ಲೆಡೆ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿವೆ, ಬಹುಶಃ ಮಂಗಳ ಗ್ರಹದ ಮೇಲೆ ಸಹ ಮೊದಲ ಜೀವ ತಾಣವಾಗುವ ಸಾಧ್ಯತೆ ಹೊಂದಿವೆ. ಮಾನವರು, ಸಸ್ಯಗಳನ್ನು ಕೃಷಿ ಭೂಮಿಗಳಲ್ಲಿ, ಪ್ರಯೋಗಾಲಯಗಳಲ್ಲಿ, ಹಸಿರುಮನೆಗಳಲ್ಲಿ ಬೆಳೆದಿದ್ದಾರೆ, ಸಾಂಕ್ರಾಮಿಕ ರೋಗಗಳನ್ನು ಹಾಗೂ ವ್ಯಸನಗಳನ್ನು ಪರಿಹರಿಸಲು, ಸಸ್ಯಗಳಿಂದ ಮದ್ದು ತಯಾರಿಸಿದ್ದಾರೆ. ತೀವ್ರ ಗತಿಯಲ್ಲಿ ಸಾಗುತ್ತಿರುವ ಕಾಲಮಾನದ ದೃಷ್ಟಿಯಿಂದ, ಸಸ್ಯಗಳು ಸಂಸ್ಕರಿಸಿದ ಅನುವಂಶ ವಾಹಕಗಳಾಗಿ, ಸಂಕುಲಗಳಾಗಿ, ಸರ್ವ ಆಹಾರ ಸಂಪೂರ್ತಿಯ ಮೂಲಗಳಾಗಿ ಭವಿಷ್ಯದಲ್ಲಿ ಹೇಗಿರ ಬಹುದು ಎಂದು ಕಲ್ಪಿಸಿಕೊಳ್ಳ ಬಹುದು.
ಸಸ್ಯಗಳು, ಪ್ರಜ್ಞಾ ವಿಹೀನ, ಸಾಮಾಜಿಕ ಜೀವಿಗಳು, ಅನೇಕ ಸಮಸ್ಯೆಗಳನ್ನು ಬಗೆಹರಿಸಬಲ್ಲವು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಮಾನವರು ಎಣಿಸಿದಂತೆ, ಅರಿವಿಗೆ, ಪ್ರಜ್ಞೆ ಮತ್ತು ನರ ಮಂಡಲದ ಚಟುವಟಿಕೆ ಅವಶ್ಯಕವಲ್ಲ ಎಂದು ಸಸ್ಯ ಕುಲ ನಿರೂಪಿಸಿದೆ. ಶಾಂತ , ಸ್ಥಿರ ಸ್ವರೂಪದ ಈ ಜೀವಿಗಳು ಮಾನವನ ಕುತೂಹಲದ ವಿಷಯವಾಗಿವೆ, ನಮ್ಮ ಸೃಜನಶೀಲತೆಯನ್ನು ಪ್ರೇರೇಪಿಸಿ, ಆಧುನಿಕ ಯುಗದ ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೂ ಕಾರಣವಾಗಿವೆ.
ಬೆಂಗಳೂರು ವಿಜ್ಞಾನ ವೇದಿಕೆಯು, ʼಫೈಟೋಪಿಯʼ ಡಿಜಿಟಲ್ ಪ್ರದರ್ಶನವನ್ನು 21 ರಿಂದ 30 ಆಗಸ್ಟ್, 2020 ವರೆಗೂ ಹಮ್ಮಿಕೊಂಡಿದೆ, ಈ 10 ದಿನಗಳ ಪಾಪ್-ಅಪ್ ಪ್ರದರ್ಶನದ ಮುಖೇಣ ಇಂಜಿನಿಯರ್‌ಗಳು, ವಿಜ್ಞಾನಿಗಳು, ವಿನ್ಯಾಸಕರು, ಕಲಾವಿದರು ಮತ್ತು ಜೀವ-ತಜ್ಞರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ, ಈ ಪ್ರದರ್ಶನದ ಸಂದರ್ಶಕರಿಗೆ, ಅಡಿಗೆಮನೆ, ಪ್ರಯೋಗಾಲಯ ಹಾಗೂ ಕೃಷಿ ಭೂಮಿಯನ್ನು ಮೀರಿದ ಸಸ್ಯಕುಲದ ನವ್ಯ ಅನುಭವ ನೀಡುವ ಒಂದು ವಿಭಿನ್ನ ಪ್ರಯತ್ನ ನೆಡೆಸಿದೆ.
ಸಸ್ಯಗಳನ್ನು ಸಲಹಿ, ಜೀವನ ಸಂರಕ್ಷಿಸಿ
ಬೆಂಗಳೂರು ವಿಜ್ಞಾನ ವೇದಿಕೆಯು, ಅಂತರ್ರಾಷ್ಟ್ರೀಯ ಸಸ್ಯ ಸ್ವಾಸ್ಥ್ಯ ವರ್ಷ, 2020 ಅನ್ನು ಬೆಂಬಲಿಸುತ್ತದೆ.
ಶೈಕ್ಷಣಿಕ ಸಲಹೆಗಾರರು
ಹರಿಣಿ ನಾಗೇಂದ್ರ
ಹರಿಣಿ ನಾಗೇಂದ್ರ,ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ʼಸ್ಕೂಲ್ ಆಫ್ ಡೆವೆಲಪ್ ಮೆಂಟ್” ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʼದಕ್ಷಿಣ ಏಶಿಯಾದಲ್ಲಿ ಸಾಮಾಜಿಕ ಜೀವಪರಿಸರದಲ್ಲಿನ ರೂಪಾಂತರಣʼ ಇವರ ಸಂಶೋಧನೆಯ ಮುಖ್ಯ ವಿಷಯ. 2013 ರಲ್ಲಿ ಪ್ರೊ. ನಾಗೇಂದ್ರ, ʼಅರ್ಬನ್ ಕಾಮನ್ಸ್” ವಿಷಯದಲ್ಲಿ ನೆಡೆಸಿದ ಸಂಶೋಧನೆ ಮತ್ತು ಅಭ್ಯಾಸಕ್ಕೆ , ʼಎಲಿನಾರ್ ಆಸ್ಟ್ರಾಮ್ ಸೀನಿಯರ್ ಸ್ಕಾಲರ್ʼ ಪುರಸ್ಕಾರ ಪಡೆದಿದ್ದಾರೆ. 2016 ರಲ್ಲಿ, ಪ್ರಕಟಗೊಂಡ “ನೇಚರ್ ಇನ್ ದಿ ಸಿಟಿ:ಬೆಂಗಳೂರು ಇನ್ ದಿ ಪಾಸ್ಟ್, ಪ್ರೆಸೆಂಟ್ ಆಂಡ್ ಫ್ಯೂಚರ್”, ಇವರ ಪುಸ್ತಕದಲ್ಲಿ ಒಟ್ಟಾರೆ ದಕ್ಷಿಣ ಭೂಭಾಗದ ನಗರಗಳಲ್ಲಿ ಪರಿಸರ ವೈಪರಿತ್ಯದ ಪರಿಣಾಮಗಳನ್ನು ವಿಮರ್ಶಿಸುತ್ತವೆ. ಇವರು ಪ್ರಸಕ್ತ, ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ʼಸೆಂಟರ್ ಫಾರ್ ಅರ್ಬನ್ ಇಕಾಲಜಿಕಲ್ ಸಸ್ಟೇನಬಿಲಿಟಿ” ವಿಭಾಗದ ಸಂಯೋಜಕರಾಗಿದ್ದಾರೆ.
ಶನ್ನಾಂನ್ ಓಲ್ಸನ್
ಶನ್ನಾಂನ್ ಓಲ್ಸನ್ ಇವರು , ರಾಸಾಯನಿಕ ಜೀವಪರಿಸರ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದಾರೆ, ತಮ್ಮ ಕಾಲೇಜಿನ ದಿನಗಳಲ್ಲೇ, ಸಾವಯವ ರಾಸಾಯನಿಕ ಶಾಸ್ತ್ರದ ತರಗತಿಯಲ್ಲಿ ಕೃತಕ ಫೆರೋಮ್ (ಜೈವಿಕ ರಾಸಾಯನಿಕ ಸ್ರವಿಕೆ) ಸಂಶ್ಲೇಶಿಸಿದ್ದಾರೆ. ಇವರು ರಾಸಾಯನಿಕ ಶಾಸ್ತ್ರದ ವಿದ್ಯಾರ್ಥಿನಿಯಾದರೂ, ಪ್ರಕೃತಿಯನ್ನು ಪ್ರೀತಿಸುತ್ತಾರೆ, ಇಂಜಿನಿಯರ್ ಆಗುವ ಹೆಬ್ಬಯಕೆಯನ್ನು ಹೊಂದಿದ್ದಾರೆ. ಹೀಗಾಗಿ ರಾಸಾಯನಿಕ ಶಾಸ್ತ್ರ, ವಿಕಸನ ಜೀವಶಾಸ್ತ್ರ, ಲಕ್ಷಣಶಾಸ್ತ್ರ (ಇಥೋಲಜಿ), ನರತಂತುಗಳ ವಿಜ್ಙಾನ ಇವೆಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಶನ್ನಾಂನ್ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ “ನ್ಯೂರೋ ಬಯೋಲಜಿ ಆಂಡ್ ಬಿಹೇವಿಯರ್ ಮತ್ತು ಕೆಮಿಕಲ್ ಇಕಾಲಜಿ” ವಿಷಯದಲ್ಲಿ, ಪಿಎಚ್.ಡಿ ಪದವಿ ಪಡೆದಿದ್ದಾರೆ. ಜರ್ಮನಿಯ ಜೆನ್ನಾದಲ್ಲಿರುವ “ಮ್ಯಾಕ್ಸ್ ಪ್ಲಾಂಕ್ “ ಸಂಸ್ಥೆಯಲ್ಲಿ ಯೋಜನಾ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದಾರೆ, ಜೊತೆಗೆ ಇಂಜಿನಿಯರ್ ಗಳ ಸಹಭಾಗಿತ್ವದಲ್ಲಿ, ಸಂಶೋಧನೆ ನೆಡೆಸಿ ಕೀಟ ಗಳ ರಾಸಾಯನಿಕ ಸಂಪ್ರೇಷಣೆಯ ಆಧಾರದ ಮೇಲೆ ಕೃತಕ ರಾಸಾಯನಿಕ ಸಂಪ್ರೇಷಣೆಯ ವ್ಯವಸ್ಥೆಯನ್ನು ರೂಪಿಸಿದರು. ಇವರು ಫುಲ್ಬ್ರೈಟ್ ವಿದ್ಯಾರ್ಥಿ ಮತ್ತು ರಾಮಾನುಜನ್ ಫೆಲೋ, ಭಾರತದಲ್ಲಿ ರಾಸಾಯನಿಕ ಜೀವ ಪರಿಸರ ಕ್ಷೇತ್ರದ ಪ್ರಸಾರಕ್ಕಾಗಿ ದುಡಿಯು ತ್ತಿದ್ದಾರೆ
ಸೀತಾ ರೆಡ್ಡಿ
ಸೀತಾ ರೆಡ್ಡಿ , ಹೈದರಾಬಾದ್ ಅಲ್ಲಿ ಸ್ವತಂತ್ರವಾಗಿ ಅಭ್ಯಾಸ ಮಾಡುತ್ತಿರುವ ವಿದೂಷಿ ಮತ್ತು ಸಂಗ್ರಹಾಲಯ ಪರಿಪಾಲಕರು. ಇವರು , ನೈಸರ್ಗಿಕ ಔಷಧದ ಇತಿಹಾಸದಿಂದ ಹಿಡಿದು ಸಂಗ್ರಹಾಲಯಗಳ ವಸಾಹತು ಮತ್ತು ಸಂಗ್ರಹಣ ನ್ಯಾಯದ ನೈತಿಕತೆಯ ವರೆಗೂ, ಕಲೆ ಮತ್ತು ವಿಜ್ಞಾನ ಮೇಳೈಸುವ ವಿಭಿನ್ನ ವಿಷಯಗಳನ್ನು ಕುರಿತ ಕೃತಿಗಳನ್ನು ರಚಿಸಿದ್ದಾರೆ ಇತ್ತೀಚೆಗೆ ಇವರು ʼಮಾರ್ಗ್ʼ ಪತ್ರಿಕೆಯಲ್ಲಿ ಸಸ್ಯ ಕಲೆಯ ಮೇಲೆ ಪ್ರಕಟವಾದ “ದಿ ವೇಟ್ ಆಫ್ ಅ ಪೆಟಲ್: ಆರ್ಸ್ ಬೊಟಾನಿಕಾ" ವಿಶೇಷಾಂಕದ ಗೌರವ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಮಿಥ್ಸೋನಿಯನ್ ಸಂಸ್ಥೆ ಮತ್ತು ವೆಲ್ಲ್‌ಕಮ್ ಲೈಬ್ರರಿಯ ಫೆಲೋ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಲಲಿತ ಕಲಾ ವಿಭಾಗದ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ, ಸಂಗ್ರಹಾಲಯ ಪರಿಪಾಲನೆಯ ಜೊತೆಗೆ ಯೋಗಾಭ್ಯಾಸ, ಆಯುರ್ವೇದ, ವಿಧಿ-ವಿಜ್ಞಾನ ಔಷಧ , ಅಪರಾಧಿಕ ಛಾಯಾಗ್ರಹಣ ಮತ್ತು ಸಮಕಾಲೀನ ಕಲೆ ಇವೇ ಮುಂತಾದ ವಿಷಯಗಳನ್ನು ಒಳಗೊಂಡ ಪ್ರದರ್ಶನಗಳ ಅನುಭವವೂ ಇದೆ. ಪ್ರಸಕ್ತ , ʼ ಜಂಗಾಲ ಬುಕ್ಸ್ʼ ಶೀರ್ಷಿಕೆಯಡಿಯಲ್ಲಿ , ಭಾರತೀಯ ಔಷಧ ಸಸ್ಯ ಸಂಗ್ರಹಣೆಯ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಒಮ್ಮೊಮ್ಮೆ ajeebghar.com ಬ್ಲಾಗ್ ಅಲ್ಲಿ ಬರೆಯುತ್ತಾರೆ ಮತ್ತು ʼarsbotanica.netʼ ಎಂಬ ಆನ್=ಲೈನ್ ಪೋರ್ಟಲ್ ನೆಡೆಸುತ್ತಾರೆ.
ವಿಷಯ-ವಸ್ತು ಸಹಭಾಗಿತ್ವ
ಜಾನ್ ಇನ್ನ್ಸ್ ಸೆಂಟರ್ , ಸಂಯುಕ್ತ ರಾಷ್ಟ್ರಗಳಲ್ಲಿ ನಾರ್ವಿಚ್ ನಲ್ಲಿರುವ ಸ್ವಾಯತ್ತ ಅಂತರ್ರಾಷ್ಟ್ರೀಯ ಸಂಸ್ಥೆ, ಸಸ್ಯ ವಿಜ್ಞಾನ, ಅನುವಂಶಿಕತೆ ಮತ್ತು ಸೂಕ್ಷ್ಮ ಜೀವ ವಿಜ್ಞಾನ ದ ಅತ್ಯುತ್ಕೃಷ್ಟತೆಯ ಕೇಂದ್ರ. ಹೊಸ ಬಗೆಯ ಸಂಶೋಧನೆಗಳ ಮೂಲಕ ಸಸ್ಯ ಕುಲ ಮತ್ತು ಸೂಕ್ಷ್ಮಾಣು ಜೀವಿಗಳ ಬಗ್ಗೆ ಜ್ಞಾನ ವರ್ಧನೆ, ಭವಿಷ್ಯದ ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವುದು ಮತ್ತು ಆಡಳಿತವರ್ಗ ಹಾಗೂ ಸಾರ್ವಜನಿಕ ರೊಂದಿಗೆ ಒಡಗೂಡುವುದೇ ಜಾನ್ ಇನ್ನ್ಸ್ ಸೆಂಟರ್ ನ ಮುಖ್ಯ ಉದ್ದೇಶ. ಇಂತಹ ಒಗ್ಗೂಡಿಕೆ, ಪ್ರಾಕೃತಿಕ ವಿವಿಧತೆಯನ್ನು ಅರಿತು, ಕೃಷಿ, ಪರಿಸರ, ಮಾನವ ಸ್ವಾಸ್ಥ್ಯ ಮತ್ತು ಒಳಿತಿಗೆ ಲಾಭದಾಯಕ.
ಹಸಿರು ಉದ್ಯಾನವನ ಹಾಗೂ ಎತ್ತರದ ಮರಗಳಿಂದ ಕಂಗೊಳಿಸುವ, ಕಸ್ತುರಬಾಯಿ ಲಾಲ್ ಬಾಯಿ ವಸ್ತು ಸಂಗ್ರಹಾಲಯದ ಸಂಕೀರ್ಣದಲ್ಲಿ ಎರಡು ಭವನಗಳಿವೆ, ರಾಹುಲ್ ಮೆಹ್ರೋತ್ರ ಅವರು ಈ ಭವನಗಳನ್ನು ಬಹಳ ಶ್ರಮ ವಹಿಸಿ ನವೀಕರಿಸಿದ್ದಾರೆ. ಮುಖ್ಯ ಭವನವು 1905 ರಲ್ಲಿ ನಿರ್ಮಿಸಲಾದ ವಸಾಹತು ಗೃಹ , ಇಲ್ಲಿ ಸಾವಿರಾರು ವರ್ಷಗಳ ಭಾರತೀಯ ಕಲಾಕೃತಿಗಳನ್ನು ಸಂಗ್ರಹಿಸಲಾಗಿದೆ.
ಈ ಸಂಕೀರ್ಣದಲ್ಲಿ 250 ಜನರನ್ನು ಹಿಡಿಸುವ ಒಂದು ಸಣ್ಣ ಬಯಲು ರಂಗ ಮಂದಿರವೂ ಇದೆ. ಇಲ್ಲಿ ಪ್ರದರ್ಶನ, ಗಾಯನ ಕೂಟ, ಭಾಷಣ ಮತ್ತು ಸಂಭಾಷಣೆಗಳನ್ನು ಆಯೋಜಿಸ ಬಹುದು. ವರ್ಷದಾದ್ಯಂತ ಆಯೋಜಿತವಾಗುವ ವಿಭಿನ್ನ ಕಾರ್ಯಕ್ರಮಗಳು ಜನರಿಗೆ ಸಾಂಸ್ಕೃತಿಕ ಔತಣವನ್ನು ಒದಗಿಸುತ್ತವೆ.
ಕಾರ್ಯಕ್ರಮ ಸಹಭಾಗಿತ್ವ
ಬೆಂಗಳೂರು ಸಸ್ಟೇನಬಿಲಿಟಿ ಫೋರಮ್, ಬಿ.ಎಸ್.ಎಫ್, ನಗರದೊಳಗೆ ಹಾಗೂ ನಗರ ಅಂಚಿನ ಭೂ-ಭಾಗಗಳ ಸಂರಕ್ಷಣೆಯ ದೃಷ್ಟಿಯಿಂದ, ಬಹುಕಾಲ ಪ್ರಭಾವ ಬೀರುವ ಅನೇಕ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಲು ವಿಭಿನ್ನ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟ. ನೀರು, ಗಾಳಿ ಮತ್ತು ಮಣ್ಣನ್ನು ಒಳಗೊಂಡು, ಇವಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಂಪತ್ತು ಹಾಗೂ ನಗರದ ಸರ್ವಮಾನ್ಯ ಸಾಮಗ್ರಿಗಳ ಕಡೆಗೆ ಗಮನ ಹರಿಸುತ್ತಾರೆ.
ಬೆಂಗಳೂರು ನಗರವನ್ನು ಗಮನದಲ್ಲಿಟ್ಟು, ನಗರ ಭೂ-ಭಾಗಗಳನ್ನು ಹಲವಾರು ರೀತಿಯಿಂದ ಸಂರಕ್ಷಿಸುವ ಬಗ್ಗೆ ಬೆಂಗಳೂರು ಸಸ್ಟೇನಬಿಲಿಟಿ ಫೋರಮ್ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿಭಿನ್ನ ಕ್ಷೇತ್ರದ ಲಾಭಾನುಭವಿಗಳ ನಡುವೆ ಸಂಭಾಷನೆ ಹಾಗೂ ಸಹಭಾಗಿತ್ವದ ಮೂಲಕ ತಮ್ಮ ಗುರಿ ಮುಟ್ಟುವ ಉದ್ದೇಶ ಹೊಂದಿರುವ ಸಂಸ್ಥೆ.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್, ವಿಶ್ವ ಮುಂಚೂಣಿಯಲ್ಲಿರುವ ಯೂರೋಪ್ ನ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಬಹಳ ಜನರು ಭೇಟಿ ಕೊಡುವ ನೈಸರ್ಗಿಕ ಇತಿಹಾಸ ಸಂಗ್ರಹಾಲಯ. ಬಹುಕಾಲದವರೆಗೂ, ಜಗತ್ತು ಮತ್ತು ಜನರ ಉಳಿವಿನ ದೂರದೃಷ್ಟಿಯನ್ನು ಹೊಂದಿದ್ದು, ನೈಸರ್ಗಿಕ ಪ್ರಪಂಚದೊಡನೆ ಮಾನವ ಅವಶ್ಯಕತೆಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಗಳಲ್ಲಿ ಪ್ರಮುಖವಾದ ಕೇಂದ್ರ.
ಸಂಗ್ರಹಾಲಯವು ತನ್ನ ಅಗಾಧ ಪ್ರಭಾವವನ್ನು ಬಳಸಿಕೊಂಡು, ಭೂಮಿಯ ಒಟ್ಟಾರೆ ಉಳಿವಿಗಾಗಿ, ವಸ್ತು-ಸ್ಥಿತಿಯ ಮಾಹಿತಿ ನೀಡಿ, ಪ್ರೇರೇಪಿಸಿ, ನಿಸರ್ಗವನ್ನು ಸಂರಕ್ಷಿಸುವ ದೃಷ್ಟಿಯಿಂದ ಬಹಳಷ್ಟು ಬೆಂಬಲಿಗರನ್ನು ಒಗ್ಗೂಡಿಸಿದೆ. ಪ್ರತಿ ವರ್ಷ ಐವತ್ತು ಲಕ್ಷ ಕ್ಕೂ ಹೆಚ್ಚು ಸಂದರ್ಶಕರು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ತಿಂಗಳು, ನಮ್ಮ ಡಿಜಿಟಲ್ ಕಾರ್ಯಕ್ರಮಗಳು ಸುಮಾರು 200 ದೇಶಗಳಲ್ಲಿ, ಸಾವಿರಾರು ಜನರನ್ನು ತಲುಪುತ್ತವೆ. ಈಗ 10 ವರ್ಷಗಳಲ್ಲಿ, ನಮ್ಮ ಸಂಚಾರಿ ಪ್ರದರ್ಶಗಳನ್ನು 30 ದಶ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಸಹಕಾರಿ ಸಹಭಾಗಿತ್ವ
ಬೆಂಗಳೂರು ಅಂತರ್ರಾಷ್ಟ್ರೀಯ ಕೇಂದ್ರ ವು ನವಂಬರ್ 2005 ರಲ್ಲಿ ಸ್ಥಾಪಿತವಾಗಿದೆ. ಇದು ನಿಷ್ಪಕ್ಷ, ಲಾಭ-ರಹಿತ ಸಂಸ್ಥಾನವಾಗಿದ್ದು, ಸದಸ್ಯರು ಮತ್ತು ದಾನಿಗಳು ಈ ಸಂಸ್ಥೆಯನ್ನು ಪರಿಪಾಲಿಸುತ್ತಿದ್ದಾರೆ. ವಿಭಿನ್ನ ಸಂಸ್ಕೃತಿಗಳು, ಧರ್ಮಗಳು, ಪ್ರದೇಶಗಳು ಹಾಗೂ ಅರ್ಥವ್ಯವಸ್ಥೆಗಳ ನಡುವೆ ಸಂಪರ್ಕ ಕಲ್ಪಿಸಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಸಂಸ್ಥೆ. ಬಿ.ಐ.ಸಿ ಯನ್ನು ಭಾರತದ ಮಾಜಿ ರಾಷ್ಟ್ರಪತಿಗಳಾದ ಸ್ವರ್ಗೀಯ ಶ್ರೀ ಅಬ್ದುಲ್ ಖಲಾಂ ಅವರು ಉದ್ಘಾಟಿಸಿದರು. ಬಿ.ಐ.ಸಿ 2018 ರ ಅಂತ್ಯದ ವರೆಗೂ “ದಿ ಎನರ್ಜಿ ರಿಸೋರ್ಸಸ್ ಇನ್ಸ್ಟಿಟ್ಯೂಟ್” ಸಂಸ್ಥೆಯ ಆವರಣದಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು, 2019 ರಲ್ಲಿ 48,000 ವರ್ಗ ಫುಟ್ ವಿಸ್ತೀರ್ಣದ ಪ್ರದೇಶದಲ್ಲಿ, ಹಲವು ಕಂಪನಿಗಳ , ದಾನಿಗಳ ಸಂಸ್ಥಾನಗಳ ಮತ್ತು ಸದಸ್ಯರ, ಉದಾರ ದಾನದ ಫಲವಾಗಿ ಬಿ.ಐ.ಸಿ ಯ ಹೊಸ ಸ್ವಂತ ಭವನದ ನಿರ್ಮಾಣವಾಯಿತು.