ಸಸ್ಟೇನಬಲ್ ಡಾರ್ಕ್ ರೂಂ ಪ್ರಾಜೆಕ್ಟ್
ಛಾಯಾಚಿತ್ರ ಸಂವರ್ಧನೆಯು ಒಂದು ಕಲೆ, ಫಿಲ್ಮ್ ಅಥವಾ ಕಾಗದವನ್ನು ರಾಸಾಯನಿಕ ಪ್ರಕ್ರಿಯೆಗೆ ಒಳ ಪಡಿಸಿ ನಂತರ ಬೆಳಕಿಗೆ ತಂದು ಛಾಯಾಚಿತ್ರ ರೂಪಗೊಳ್ಳುತ್ತದೆ. ನೀವು ಎಂದಾದರೂ ಇಂತಹ ಛಾಯಾಚಿತ್ರ ಸಂವರ್ಧನೆ ಮಾಡುವ ಕತ್ತಲೆ ಕೋಣೆಗೆ ಭೇಟಿ ಕೊಟ್ಟಿದ್ದರೆ, ಅಲ್ಲಿನ ರಾಸಾಯನಿಕ ಆಮ್ಲಗಳಿಂದ ಹೊರಹೊಮ್ಮುವ ತೀಕ್ಷ್ಣ ಘಾಟು, ದುರ್ವಾಸನೆನ್ನು ಸೇವಿಸಿರಬಹುದು. ಸಸ್ಯ ಮೂಲದ ರಾಸಾಯನಿಕಗಳನ್ನು ಬಳಸಿ ಇಂತಹ ಛಾಯಾಚಿತ್ರ ರೂಪಗಳನ್ನು ಸೃಜಿಸುವಂತಾದರೆ ಹೇಗಿರುತ್ತದೆ ?
ಹಾನ್ನ್ಹಾ ಫ್ಲೆಚರ್ , ʼಲಂಡನ್ ಆಲ್ಟರ್ನೇಟಿವ್ ಫೋಟೋಗ್ರಫಿ ಕಲೆಕ್ಟೀವ್ʼ ಕತ್ತಲು ಕೋಣೆಯ ಸ್ವಸ್ಥಿರ ಯೋಜನೆಯಡಿಯಲ್ಲಿ ಸಸ್ಯ ಮೂಲದ ರಾಸಾಯನಿಕಗಳನ್ನು ಬಳಸಿ ಛಾಯಾಚಿತ್ರಗಳನ್ನು ಸೃಜಿಸುವ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಹಾನ್ನ್ಹಾ ಫ್ಲೆಚರ್ | ಮಧ್ಯಾಹ್ನ 2:00 ಗಂಟೆ | 29 ಆಗಸ್ಟ್ 2020
ಈ ಚಟುವಟಿಕೆಯಲ್ಲಿ ಭಾಗವಹಿಸುವವರು ಸಸ್ಯ ಮೂಲದ ಛಾಯಾಚಿತ್ರ ಸಂವರ್ಧನೆಗೆ ಬೇಕಾಗುವ ರಾಸಾಯನಿಕ ಗಳನ್ನು , 16 ಎಂ.ಎಂ.ಫಿಲ್ಮ್ ಇಲ್ಲವೇ ಜೆಲಾಟಿನ್ ಕಾಗದ , ಯಾವುದೇ ಸಸ್ಯ ಇಲ್ಲವೇ ನಿಮ್ಮ ಪರಿಸರದಲ್ಲಿ ದೊರಕುವ ಸಸ್ಯ ಮೂಲದ ವಸ್ತುಗಳನ್ನು ಬೆರೆಸಿ ರಾಸಾಯನಿಕ ತಯಾರಿಸಿ , ಇದನ್ನು ಬಳಸಿ ಛಾಯಾಚಿತ್ರ ಉತ್ಪಾದಿಸುವ ಪ್ರಕ್ರಿಯೆಯನ್ನು ಹಾನ್ನ್ಹಾ ಫ್ಲೆಚರ್ ಅವರು, ನಿಮಗೆ ಪರಿಚಯಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಳಸಲಾದ ಸಾಮಗ್ರಿಗಳಿಂದಾಗಿ ಪರಿಸರದ ಮೇಲೆ ಎಂತಹ ಪರಿಣಾಮ ಆಗ ಬಹುದು, ಹೇಗೆ ಉಳಿದ ರಾಸಾಯನಿಕಗಳನ್ನು ಸುರಕ್ಷಿತವಾಗಿ ಹೊಣೆಗಾರಿಕೆಯಿಂದ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ಚಿಂತಿಸಲು ಅಣಿ ಮಾಡಿ ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು
- ವಿಟಮಿನ್ ಸಿ (ಆಸ್ಕಾರ್ಬಿಕ್ ಆಸಿಡ್) 
- ಒಗೆಯಲು / ತೊಳೆಯಲು ಬಳಸುವ ಸೋಡಾ/ ಸೋಡಾ ಹರಳು(ಸೋಡಿಯಮ್ ಕಾರ್ಬೊನೇಟ್) 
- ಎರಡು ಹರಿವಾಣ / ಟ್ರೇ 
- ಛಾಯಾಚಿತ್ರ ಸಂವರ್ಧನೆಗೆ ಬಳಸುವ ಕಾಗದ 
- ಸಸ್ಯ ಉತ್ಪನ್ನ 
ಸಂಯೋಜಕರ ಪರಿಚಯ
ಹಾನ್ನ್ಹಾ ಫ್ಲೆಚರ್, ಲಂಡನ್ ಮೂಲದ ಕಲಾವಿದರು, ಕ್ಯಾಮರಾ ವಿನಾ ಛಾಯಾಗ್ರಹಣ ಪ್ರಕ್ರಿಯೆಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ʼಲಂಡನ್ ಆಲ್ಟರ್ನೇಟಿವ್ ಫೋಟೋಗ್ರಫಿ ಕಲೆಕ್ಟೀವ್ʼ ಸಂಸ್ಥೆಯಲ್ಲಿ ಸಹ ನಿರ್ದೇಶಕರು ಹಾಗೂ ಸಂಯೋಜಕರಾಗಿ ಕಾರ್ಯ ನಿರವಹಿಸುತ್ತಿದ್ದಾರೆ. ʼದಿ ಸಸ್ಟೇನಬಲ್ ಡಾರ್ಕ್ ರೂಂ ಪ್ರಾಜೆಕ್ಟ್ʼ ಎಂಬ ಸಂಶೋಧನೆಯ ಅಡಿಯಲ್ಲಿ ಕಲಾವಿದರ ದೃಷ್ಟಿಯಿಂದ ಸಂಶೋಧನೆ, ತರಬೇತಿ ಮತ್ತು ಪರಸ್ಪರ ಕಲಿಕೆ ಕಾರ್ಯಕ್ರಮಗಳ ಮೂಲಕ , ಈಗಾಗಲೇ ಛಾಯಾಚಿತ್ರ ಸಂವರ್ಧನ ಕಾರ್ಯದಲ್ಲಿ ತೊಡಗಿರುವವರಿಗೆ ಹೊಸ ಬಗೆಯ ಕೌಶಲ್ಯ ಕಲ್ಪಿಸಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
 
          
        
       
            