‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಸಿಂಬಯಾಸಿಸ್
ಮಣ್ಣಿನೊಳಗೆ ಸಹಬಾಳ್ವೆ
ಸಸ್ಯಗಳು ಮಣ್ಣಿನೊಳಗೆ ಫಂಗೈ (ಕಸವುಸುರಿ/ಬೂಷ್ಟು) ಜೊತೆಗೆ ಪರಸ್ಪರ ಸಂಪರ್ಕಿಸುವ ಸಾಮರ್ಥ್ಯ ಹೊಂದಿರುತ್ತವೆ. ಬೂಷ್ಟು ಕೇವಲ ಸಂಪರ್ಕ ಮಾಧ್ಯಮ ಮಾತ್ರವೇ ಅಲ್ಲದೇ ಸಸ್ಯಗಳಿಗೆ ಮುಖ್ಯವಾಗಿ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ, ಇದರಿಂದಾಗಿ ಕೃತಕ ರಾಸಾಯನಿಕ ಗೊಬ್ಬರದ ಅವಶ್ಯಕತೆ ಕಡಿಮೆಯಾಗುತ್ತದೆ. ಜಾನ್ ಇಂಸ್ ಸೆಂಟರ್ ನ ಸಂಶೋಧಕರಿಂದ ಪಡೆದ ವೈಜ್ಞಾನಿಕ ಚಿತ್ರಗಳನ್ನಾಧರಿಸಿ ಹೆನ್ರಿ ಡ್ರೈವರ್, ಇವರು ಸಸ್ಯಗಳ ಮತ್ತು ಬೂಷ್ಟಿನ ನಡುವಣ ಸಾಮರಸ್ಯ ಸಹಬಾಳ್ವೆಯನ್ನು ದೃಶ್ಯ ರೂಪದಲ್ಲಿ ನಿರೂಪಿಸಿದ್ದಾರೆ.
ಈ ವೀಡಿಯೋ ಕಲಾಕೃತಿಯ ಮೂಲಕ ವಿಭಿನ್ನ ಬೆಳೆಗಳು ಮತ್ತು ಫಾಸ್ಫೇಟ್ ಉತ್ಪಾದಿಸುವ ಆರ್ಬಸ್ಕುಲಾರ್ ಮೈಕೋರೈಸಲ್ ಬೂಷ್ಟಿನ ನಡುವಣ ಸಾಮರಸ್ಯ ಸಹಬಾಳ್ವೆಯನ್ನು ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಸಂಬಂಧದಿಂದ ಬೆಳೆಗಳಿಗೆ ಆವಶ್ಯಕವಾದ ಪೌಷ್ಟಿಕಾಂಶವು ದೊರೆಯುವುದರಿಂದ ರಾಸಾಯನಿಕ ಗೊಬ್ಬರದ ಅವಶ್ಯಕತೆ ಹಾಗೂ ಅದರಿಂದ ಆಗುವ ಪರಿಸರದ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಈ ಸಹಬಾಳ್ವೆಯಿಂದಾಗಿ ಬೆಳೆಯ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮಣ್ಣಿಸಲ್ಲಿ ಕಾರ್ಬನ್ ಅಂಶವೂ ಹೆಚ್ಚುತ್ತದೆ. ಜಾನ್ ಇನ್ನ್ಸ್ ಸೆಂಟರ್ (ನಾರ್ವಿಚ್, ಯೂಕೆ), ಸಂಶೋಧಕರಾದ ಡಾ.ಮೈರಿಯಮ್ ಚಾರ್ಪೆಂಟರ್ ಮತ್ತು ಡಾ.ಕ್ಯಾಥೆರೀನ್ ಜಕಾಟ್ ಇವರ ಸಹಯೋಗದೊಡನೆ ಈ ಕಲಾಕೃತಿಯ ರಚನೆಯಾಗಿದೆ. ಇದು ಇವರ ಸಂಶೋಧನೆಯನ್ನು ಅರಿಯಲು ನೆರವಾಗಿದೆ. ಉದಾಹರಣೆಗೆ, ಕ್ಯಾಲ್ಶಿಯಂ ಅಂಶವನ್ನು ಹೀರಿಕೊಳ್ಳಲು ಸಸ್ಯಗಳು ತಮ್ಮ ಎಲ್ಲಾ ಭಾಗಗಳಿಗೂ ಸಂವೇದನೆಯನ್ನು ಕಳುಹಿಸಿ ಸಿಂಬಯಾಸಿಸ್ ಪ್ರಕ್ರಿಯೆಗೆ ಚಾಲನೆ ನೀಡುತ್ತವೆ. ಈ ಸಂವೇದನೆಯು ಕೇಂದ್ರೀಕೃತವಾಗಿದ್ದು, ಸಸ್ಯದ ಬೇರಿನ ಕಣಗಳಲ್ಲಿ ಬೂಷ್ಟು ಪ್ರವೇಶಿಸಲು/ಬೆಳೆಯಲು ಅಣಿ ಮಾಡಿಕೊಡುತ್ತವೆ. ಬೂಷ್ಟು ಗುಂಪು-ಗುಂಪಾಗಿ ಬೇರಿನೊಳಗೆ ಸೇರಿಕೊಂಡು ಗಂಟಿನ ರೂಪದಲ್ಲಿ ಮೂಡುತ್ತವೆ, ಇವು ಪೌಷ್ಟಕಾಂಶ ಪೂರೈಕೆಯಾಗುವ ಬಿಂದುಗಳು. ಡಾ. ಚಾರ್ಪೆಂಟರ್ ಮತ್ತು ಡಾ. ಜಕಾಟ್ ಇವರ ಸಂಶೋಧನೆಯ ಪ್ರತಿಕೃತಿಗಳನ್ನು ಮತ್ತು ವೀಡಿಯೋಗಳನ್ನು ಬಳಸಿಕೊಂಡು, ಹೆನ್ರಿ ಡ್ರೈವರ್, ಅನುರೂಪ ದೃಶ್ಯ ನಿರೂಪಣೆ ಮಾಡಿದ್ದಾರೆ.
ಮಾಧ್ಯಮ: ವೀಡಿಯೋ
ವರ್ಷ 2020
ಸಸ್ಯಗಳ ಮತ್ತು ಬೂಷ್ಟಿನ ನಡುವಣ ಸಾಮರಸ್ಯ ಸಹಬಾಳ್ವೆಯ ದೃಶ್ಯ. ಕ್ಯಾಲ್ಶಿಯಂ ಅಂಶವನ್ನು ಹೀರಿಕೊಳ್ಳಲು ಸಸ್ಯಗಳಲ್ಲಿ ಸಂವೇದನೆ ಮತ್ತು ಪೌಷ್ಟಿಕಾಂಶ ವಿನಿಮಯ ಕೇಂದ್ರಗಳ ಸೃಷ್ಟಿ.
ಕಲಾಕಾರರ ಪರಿಚಯ
ಹೆನ್ರಿ ಡ್ರೈವರ್, ಬರ್ಲಿನ್, ಕೋಪನ್ಹಾಗನ್, ಮಾಂಟ್ರಿಯಲ್, ಟೊರಾಂಟೋ, ಸಿಡ್ನೀ, ಮೆಲ್ಬೋರ್ನ್, ಸಿಯೋಲ್, ಯೋಕೋಹಾಮಾ ಮತ್ತು ತೈಪಿ ಮುಂತಾದ ವಿಶ್ವದ ಹಲವು ನಗರಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಪ್ರಖ್ಯಾತ ಸಂಗ್ರಹಾಲಯ ಪರಿಪಾಲಕರು, ಸಂಯುಕ್ತ ರಾಷ್ಟ್ರದ ಕ್ಲೈನ್‌ವಾರ್ಟ್ ಹಾಂಬ್ರೋಸ್ ಎಮೆರಜಿಂಗ್ ಆರ್ಟಿಸ್ಟ್ ಪ್ರೈಸ್, 2019 ಗೆ ಆರಿಸಿದ ಮೊದಲ 15 ಯುವ ಪ್ರತಿಭೆಗಳಲ್ಲಿ, ಹೆನ್ರಿ ಡ್ರೈವರ್ ಸಹ ಒಬ್ಬರು.
ಡಾ.ಮೈರಿಯಮ್ ಚಾರ್ಪೆಂಟರ್ ಇವರು ಜಾನ್ ಇನ್ನ್ಸ್ ಸೆಂಟರ್ ಅಲ್ಲಿ ಸಸ್ಯ ಸ್ವಾಸ್ಥ್ಯದ ಸಂಶೋಧನೆ ನೆಡೆಸುತ್ತಿರುವ ತಂಡದ ಮುಖಂಡರು. ಪರಿಸರದಲ್ಲಿ ಜೈವಿಕ ಉದ್ದೀಪನಕ್ಕೆ ಸ್ಪಂದಿಸಲು, ಸಸ್ಯಗಳಲ್ಲಿ ಉಂಟಾಗುವ ಕ್ಯಾಲ್ಶಿಯಮ್ ಪರಮಾಣು ಸಂಜ್ಞೆಯನ್ನು ಕುರಿತು ಅಧ್ಯಯನ ನಡೆಸಿದ್ದಾರೆ, ಸಸ್ಯಗಳಲ್ಲಿ ಪರಸ್ಪರ ಪ್ರಭಾವ ಪ್ರಕ್ರಿಯೆಯನ್ನು ಅರಿಯಲು , ಕ್ಯಾಲ್ಶಿಯಮ್ ಪರಮಾಣು ನಾಳಗನ್ನು ಸೀಳಿ, ಅವುಗಳ ಸೂಕ್ಷ್ಮ ಕಣಗಳಲ್ಲಿ ಈ ಪ್ರಕ್ರಿಯೆಗೆ ಉಂಟಾದ ಸಂಜ್ಞೆಗಳ ಸಂಶೋಧನೆಯಲ್ಲಿ ಇವರ ತಂಡ ಕಾರ್ಯ ನಿರ್ವಹಿಸುತ್ತಿದೆ.
ಡಾ.ಕ್ಯಾಥೆರೀನ್ ಜಾಕಾಟ್, ಸಸ್ಯ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತೆ, ಸಸ್ಯಗಳ ಜೊತೆಗಿರುವ ಸ್ನೇಹಪರ ಜೀವಕಣ ಗುಂಪುಗಳು ಮತ್ತು ರೋಗಕಾರಕ ಜೀವಾಣುಗಳ ನಡುವಣ ವ್ಯತ್ಯಾಸವನ್ನು ಕುರಿತಂತೆ ಅಧ್ಯಯನ ನೆಡೆಸುತ್ತಿದ್ದಾರೆ. ಸಸ್ಯಗಳ ಬೇರುಗಳಲ್ಲಿ ಸ್ನೇಹಪರ ಜೀವಕಣಗಳು ಸೃಷ್ಟಿಸಿಕೊಂಡ ನಾಳಗಳನ್ನು ಬಳಸಿಕೊಂಡು ರೋಗಕಾರಕ ಜೀವಾಣುಗಳು ಸಸ್ಯಗಳಿಗೆ ರೋಗ ಹಬ್ಬಿಸುತ್ತವೆಯೇ ಎಂಬುದರ ಬಗೆಗೆ ಸಂಶೋಧನೆ ನೆಡಿಸಿದ್ದಾರೆ. ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೈಲ್ಡ್ಯೂ ಸೋಂಕನ್ನು ತಡೆಯಲು ರೋಗ ನಿರೋಧಕ ಶಕ್ತಿ ನೀಡುವ ಎಮ್.ಐ.ಒ ಅನುವಂಶಿಕ ಕಣಗಳ ಬಗೆಗೆ ಕ್ಯಾಥೆರಿನ್ ಅವರು ಸಂಶೋಧನೆ ಮಾಡುತ್ತಿದ್ದಾರೆ.