‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ರಿ-ಮೀಡಿಯಾಐಯಾನ್ 2
ಸೂಕ್ಷ್ಮಾಣುಗಳು ಮತ್ತು ಸಸ್ಯಗಳು ಹೇಗೆ ಭೂಮಿಯನ್ನು ಪುನರುಜ್ಜೀವನಗೊಳಿಸುತ್ತವೆ.
ಮಾನವ ಹಸ್ತಕ್ಷೇಪದಿಂದ ಪರಿಸರದ ಮೇಲೆ ಉಂಟಾದ ಹಲವಾರು ದುಷ್ಪರಿಣಾಮಗಳನ್ನು ಸಸ್ಯಸಂಕುಲ ಮತ್ತು ಸೂಕ್ಷ್ಮಾಣುಗಳು ಸರಿಪಡಿಸಿ ಪರಿಸರ ಸಮತೋಲನವನ್ನು ಕಾಪಾಡುತ್ತವೆ. ಮರು ಗಾರ್ಸಿಯಾ ಅವರು ರಿ-ಮೀಡಿಯಾ+ಐಯಾನ್ 2 ಮೂಲಕ ಮಣ್ಣು ಮತ್ತು ನೀರಿನಲ್ಲಿ ಬೆರೆತ ಸೀಸದಂತಹ ಕೃತಕ ವಿಷಾಣುಗಳ ದುಷ್ಪರಿಣಾಮಗಳು ಹಾಗೂ ಹೈಬ್ರೀಡ್ ತಂತ್ರಜ್ಞಾನದ ಬಳಕೆಯಿಂದ ಸರಿಪಡಿಸುವ ವಿಧಾನದ ಬಗೆಗೆ ಅನ್ವೇಷಣೆ ನೆಡೆಸಿದ್ದಾರೆ.
ರಿ-ಮೀಡಿಯಾ+ಐಯಾನ್ 2 ಭಾಷಣ ಸರಣಿಯ ಮೂಲಕ ಸೀಸದಿಂದ ಕಲುಷಿತವಾದ ಮಣ್ಣಿನ ಜೈವಿಕ ಪುನರುಜ್ಜೀವನದ ಸಾದ್ಯತೆಯನ್ನು ತಿಳಿಸುತ್ತಾರೆ. ಈ ಸರಣಿಯಲ್ಲಿ, ತಂತ್ರಜ್ಞಾನ ಬಳಕೆಯಿಂದ ನಮ್ಮ ಕ್ಷಮತೆಯ ಮುಖೇಣ ಇತರೆ ಜೀವಿಗಳ ಪರಿಸರದೊಂದಿಗೆ ಮಾನವರ ಸಂಬಂಧ ಹಾಗೂ ಅವುಗಳಿಂದ ಏಕೆ ಮತ್ತು ಹೇಗೆ ದೂರ ಇರಬೇಕು ಎಂಬುದರ ಬಗೆಗೆ ವಿಚಾರ ನೆಡೆಸಲಾಗಿದೆ. ರಿ-ಮೀಡಿಯಾ+ಐಯಾನ್ 2, ಹಲವು ಸಿದ್ಧಾಂತಗಳನ್ನು ಆಧರಿಸಿದ್ದು, ಬೊಲ್ಟರ್ ಮತ್ತು ಗ್ರೂಸಿನ್ ಇವರು ಪ್ರಸ್ತುತ ಪಡಿಸಿದ ʼಮೀಡಿಯಾ ಥಿಯರಿʼ ಯನ್ನು ಆದಾರಿಸಿದ ʼರೆಮಿಡಿಯೇಶನ್” (ನಿವಾರಣೆ), ಇದರ ಪ್ರಕಾರ ಪ್ರತಿಯೊಂದು ಮಾಧ್ಯಮ ಸಂಕುಲವೂ ಪಡೆದು-ಕೊಡುವ ಪ್ರಕ್ರಿಯೆಯಲ್ಲಿ ನಿರತವಾಗಿರುತ್ತವೆ),ಇದರಿಂದ ಪರಿಸರ ಸತತವಾಗಿ ಕಲುಷಿತವಾಗಿ ಮತ್ತೆ ಶುದ್ಧಿಗೊಳ್ಳುತ್ತಿರುತ್ತದೆ. ಪ್ರಕೃತಿಯ ಸೂಕ್ಷ್ಮ ಕಣಗಳಲ್ಲಿ ಐಯಾನ್ ಗಳ ಅದಲು ಬದಲಿನಿಂದ ಉಂಟಾಗುವ ರಾಸಾಯನಿಕ ಪ್ರಕ್ರಿಯೆ, ಪರಿಸರದಲ್ಲಿ ಹುದುಗಿರುವ ಒಂದು ಬಗೆಯ ವಿಜ್ಞಾನ.
ಮಾಧ್ಯಮ: ಪಾತ್ರೆ, ಸೀಸದಿಂದ ಕಲುಷಿತವಾದ ಮಣ್ಣು, ಸಾಸಿವೆ ಗಿಡಗಳು, ಮೀನಿನ ಮೂಳೆಪುಡಿ, ಮೈಕೋರೈಸೆ, ಕ್ಯಾಮರ, ಸೂಕ್ಷ್ಮದರ್ಶಕ
ವರ್ಷ: 2020
ರಿ-ಮೀಡಿಯಾ+ಐಯಾನ್ 2 ವೀಡಿಯೋ –ಒಂದು ಸ್ಥಿರ ಚಿತ್ರ
ಕಲಾವಿದರ ಪರಿಚಯ
ಮರು ಗಾರ್ಸಿಯಾ ಇವರು, ಕಲೆ, ವಿಜ್ಞಾನ ಮತ್ತು ಪರಿಸರ ದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಅಧ್ಯಯನ ನೆಡೆಸಿರುವ ಕಲಾವಿದರು ಮತ್ತು ಸಂಶೋಧಕರು. ಪ್ರಾಕೃತಿಕ ವಸ್ತುಗಳ ಮೂಲಕ ವಿವಿಧ ವೀಡಿಯೋ, ಶಿಲ್ಪಕಲೆ, ಸ್ಥಾಪನೆಗಳು, ಸಂಶೋಧನೆ ಇವುಗಳನ್ನು ಬಳಸಿಕೊಂಡು ನಿಸರ್ಗದ ಜಟಿಲ ಜೀವ ಪ್ರಕ್ರಿಯೆಗಳನ್ನು ಅರ್ಥೈಸುವ ಕಾರ್ಯ ಮಾಡುತ್ತಿದ್ದಾರೆ. ಮರು ಅವರು 2017 ರಿಂದ ಯೂ.ಸಿ.ಎಲ್.ಏ ಯಲ್ಲಿರುವ ಕೌಂಟರ್ ಫೋರ್ಸ್ ಪ್ರಯೋಗಾಲಯ ಹಾಗೂ ಕಲಾ-ವಿಜ್ಞಾನ ಕೇಂದ್ರದೊಂದಿಗೆ ಸಹಭಾಗಿತ್ವ ಹೊಂದಿದ್ದಾರೆ. ಇವರು ಯೂ.ಎಸ್, ಮೆಕ್ಸಿಕೋ ಮತ್ತು ಸ್ಪೇನ್ ನಲ್ಲಿ ನಡೆದ ಸಮ್ಮೇಳನಗಳಲ್ಲಿ , ಸಮೂಹ ಪ್ರದರ್ಶನಗಳಲ್ಲಿ ಹಾಗೂ ಪ್ರತ್ಯೇಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಅನುವಂಶಿಕ ಸಂಪನ್ಮೂಲ ಕೇಂದ್ರ, ಮೆಕ್ಸಿಕೋ ದಲ್ಲಿ ಆವಾಸೀಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಲಾಸ್ ಏಂಜಲ್ಸ್ ಸಸ್ಟೇನಬಿಲಿಟಿ ಕೊಲಾಬರೇಟಿವ್, ಕ್ಲಿಫ್‌ಟನ್ ವೆಬ್ಬ್ ಸ್ಕಾಲರ್‌ಶಿಪ್ ಫಾರ್ ಆರ್ಟ್ಸ್ ಮತ್ತು ಫಂಡೇಷಿಯನ್ ಜುಮೆಕ್ಸ್ ಸಂಸ್ಥೆಗಳಿಂದ ಪುರಸ್ಕಾರ ಪಡೆದಿದ್ದಾರೆ.