ರಿ ಕ್ರಿಯೇಟಿಂಗ್‌ ದಿ ರೋಈ: ದಿ ಶ್ರಬ್‌ ಲ್ಯಾಂಡ್‌ ಆಫ್‌ ಥಾರ್‌ ಡೆಸರ್ಟ್‌

ಪ್ರದೀಪ್‌ ಕ್ರಿಶನ್‌ ಸಂಜೆ | 6.30 | 21 ಆಗಸ್ಟ್‌, 2020

ಜೈಪುರ ಅಭಿವೃದ್ಧಿ ಪ್ರಾಧಿಕಾರವು (ಜೆಡಿಎ) , 2016 ರ ಜನವರಿಯಲ್ಲಿ ಪ್ರದೀಪ್‌ ಕ್ರಿಶನ್‌ ಅವರಿಗೆ ಜೈಪುರ ನಗರದ ಈಶಾನ್ಯ ಭಾಗದಲ್ಲಿ ಒಂದು ಬರಡು ಮರಳು ದಿಣ್ಣೆಯನ್ನು ಒಪ್ಪಿಸಿ, ಅದನ್ನು ಸಾರ್ವಜನಿಕ ಉದ್ಯಾನವನವನ್ನಾಗಿ ರೂಪಿಸಿ ಅಭಿವೃದ್ಧಿ ಪಡಿಸುವಂತೆ ಕೋರಿತು.

ಪ್ರದೀಪ್‌ ಕ್ರಿಶನ್‌ ಅವರು ಈ ಹೊತ್ತಿಗಾಗಲೇ ಜೋಧ್‌ಪುರದಲ್ಲಿ 70 ಹೆಕ್ಟೇರ್‌ ವಿಸ್ತೀರ್ಣದ ಬಂಡೆಕಲ್ಲಿನ ಬೆಟ್ಟವನ್ನು ʼರಾವ್‌ ಜೋಧಾ ಮರುಭೂಮಿ ಬಂಡೆ ಉದ್ಯಾನವನʼವಾಗಿ ರೂಪಿಸಿದ್ಧರು. ಇದೇ ಮಾದರಿಯಲ್ಲಿ , ಮರಳುಗಾಡನ್ನು ಪುನರುಜ್ಜೀವನಗೊಳಿಸುವ ಆಸಕ್ತಿ ಹೊಂದಿದ್ದರು.

ಬೆಂಗಳೂರು ವಿಜ್ಞಾನ ವೇದಿಕೆಯ ಈ ವಿಶೇಷ ಭಾಷಣದಲ್ಲಿ ಪ್ರದೀಪ್‌ ಕ್ರಿಶನ್‌ , ತಾವು ಅಭಿವೃದ್ಧಿ ಪಡಿಸಿರುವ ʼಕಿಶನ್‌ ಬಾಗ್”‌ ಉದ್ಯಾನವನವು, ಹೇಗೆ ಕಾಣ ಬಂದವರನ್ನು ಕೈಬೀಸಿ ಕರೆಯುತ್ತದೆ ಎಂದು ವಿವರಿಸುತ್ತಾರೆ, ಮುಖ್ಯವಾಗಿ ʼರೋಈ’ ಕುರುಚಲು ಭೂಮಿಗೆ ಸ್ವಂತ ವಾಗಿರುವ ಬಂಡೆಗಳು ಮತ್ತು ಗಿಡಗಳು, ಅಲ್ಲಿನ ಸಸ್ಯತಾಣದ ಹಲವು ಅಂಶಗಳನ್ನು ಒಳಗೊಂಡಂತೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಥಾರ್‌ ಮರುಭೂಮಿಯನ್ನು ನೆನೆಸಿಕೊಂಡರೆ , ʼ ರೋಈʼ ಶಬ್ದವು ಜನಮಾನಸದಲ್ಲಿ ಮರುಕಳಿಸುವಂತೆ ಮಾಡುವುದೇ ಕಿಶನ್‌ ಬಾಗ್ ಉದ್ಯಾನವನದ ಮೂಖ್ಯ ಉದ್ದೇಶ ಎಂದು ಹೇಳುತ್ತಾರೆ. ಈ ಉದ್ಯಾನವನಕ್ಕೆ ಭೇಟಿ ನೀಡಿ, ಛಾಯಾಚಿತ್ರಣ ಮಾಡಿ ಇಂತಹ ಭೂ ವಿನ್ಯಾಸವನ್ನು ಒಟ್ಟಾರೆ ಸಂರಕ್ಷಿಸಲು, ಇದು ಮೊದಲ ಹೆಜ್ಜೆಯಾಗಿದೆ


Pradip Krishen_b&w.jpg

ಭಾಷಣಕಾರರ ಪರಿಚಯ

ಪ್ರದೀಪ್‌ ಕ್ರಿಶನ್‌, ಮರಗಿಡಗಳ ಬಗೆಗೆ ಅನೇಕ ಬರಹ ಕೃತಿಗಳನ್ನು ರಚಿಸಿದ್ದಾರೆ, ಪರಿಸರ ಉದ್ಯಾನ ಶಾಸ್ತ್ರಜ್ಞರಾಗಿ ಪಶ್ಚಿಮ ಭಾರತದಲ್ಲಿ, ಮರುಭೂಮಿಯ ಹಲವು ಹಾಳುಬಿದ್ದ ಭೂಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ , ಅಲ್ಲಿನ ಸ್ಥಳೀಯ ಗಿಡಮರಗಳನ್ನು ಬೆಳೆಸಿ , ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರು ʼಟ್ರೀಸ್‌ ಆಫ್‌ ಡೆಲ್ಲಿ (2006) ʼ ಮತ್ತು ʼಜಂಗಲ್‌ ಟ್ರೀಸ್‌ ಆಫ್‌ ಸೆಂಟ್ರಲ್‌ ಇಂಡಿಯಾ ʼ (2015) ಕೃತಿಗಳನ್ನು ರಚಿಸಿದ್ದಾರೆ. ಪ್ರಸಕ್ತ, ದೆಹಲಿಯ ಮಧ್ಯಭಾಗದಲ್ಲಿನ ದಿಣ್ಣೆಗಳಲ್ಲಿ ಕಡೆಗಣಿಸಲಾದ ಕಾಡುಗಳ ಬಗೆಗೆ ಪತ್ರಿಕಾ ರೂಪದ ಪುಸ್ತಕ ಬರಹದಲ್ಲಿ ತೊಡಗಿದ್ದಾರೆ.

20 ನೇ ಶತಮಾನದಲ್ಲಿ, ಇವರು ಮೂರು ಚಲನಚಿತ್ರಗಳನ್ನೂ ತಯಾರಿಸಿದ್ದಾರೆ, ನಂತರ ಅದರಿಂದ ಬಹು ದೂರ ಸಾಗಿದ್ದಾರೆ. ಆ ಮೂರು ಚಲನ ಚಿತ್ರಗಳು , ಮಾಸೆ ಸಾಹಿಬ್‌ (1986), ಇನ್‌ ವಿಚ್‌ ಆನಿ ಗೇವ್‌ ಇಟ್‌ ದೋಸ್‌ ಒನ್ಸ್‌ (1989) ಮತ್ತು ಎಲೆಕ್ಟ್ರಿಕ್‌ ಮೂನ್‌ (1991).

ಪ್ರಸಕ್ತ ತಮ್ಮ ಹೆಣ್ಣು ಮಕ್ಕಳೊಂದಿಗೆ ದೆಹಲಿಯ ನಿವಾಸಿಯಾಗಿದ್ದಾರೆ, ಶ್ವಾನಗಳು ಇವರ ಒಡನಾಡಿಗಳು.