ಆನ್ ಆರ್ಖೈವಿಂಗ್ ಈಡನ್: ವಿಶ್ವದೆಲ್ಲೆಡೆ ಇರುವ ಬೀಜ ಕೋಟೆಗಳ ದಾಖಲಿಸುವ ಕಾರ್ಯದಲ್ಲಿ ಎದುರಾಗುವ ತೊಡಕುಗಳು
ಡಾರ್ನಿತ್ ಡೋಹರ್ತಿ | ಗಿಯೋವನ್ನಿ ಅಲೋಯ್ | ಸಂಜೆ 6.30 ಗಂಟೆ | 23 ಆಗಸ್ಟ್ 2020
ಡಾರ್ನಿತ್ ಡೋಹರ್ತಿಯವರು, ವಿಶ್ವದೆಲ್ಲೆಡೆ ಇರುವ ಸಮಗ್ರ ಅಂತರ್ರಾಷ್ಟ್ರೀಯ ಬೀಜ ಕೋಟೆಗಳು ಮತ್ತು ಪ್ರಖ್ಯಾತ ಜೀವ=ವಿಜ್ಞಾನಿಗಳ ಸಹಭಾಗಿತ್ವದಲ್ಲಿ 2008 ರಿಂದ ಸತತ ಸಂಶೋಧನೆ ಮುಂದುವರಿಸಿದ್ದಾರೆ. ಇವುಗಳಲ್ಲಿ ದಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟಮೆಂಟ್ ಆಫ್ ಅಗ್ರಿಕಲ್ಚರ್ , ಕೊಲಾರಾಡೋ ದಲ್ಲಿರುವ ಅಗ್ರಿಕಲ್ಚರಲ್ ರಿಸರ್ಚ್ ಸರ್ವಿಸಸ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ರಿಸೋರ್ಸಸ್ ಪ್ರಿಸರ್ವೇಶನ್, ದಿ ಮಿಲೇನಿಯಮ್ ಸೀಡ್ ಬ್ಯಾಂಕ್, ಇಂಗ್ಲೈಂಡ್ ನ ಕ್ಯೂ ಪ್ರದೇಶದ ರಾಯಲ್ ಬಟಾನಿಕ್ ಗಾರ್ಡನ್ಸ್ ಮತ್ತು ಆಸ್ಟ್ರೇಲಿಯಾದ ಪ್ಲಾಂಟ್ ಬ್ಯಾಂಕ್, ತ್ರೆಟಂಡ್ ಫ್ಲೋರಾ ಸೆಂಟರ್ ಹಾಗೂ ಕಿಂಗ್ಸ್ ಪಾರ್ಕ್ ಬಟಾನಿಕ್ ಗಾರ್ಡನ್ಸ್ ಪ್ರಮುಖವಾದವು.
ಹವಾಮಾನ ವೈಪರಿತ್ಯ ಮತ್ತು ಕ್ಷೀಣಿಸುತ್ತಿರುವ ಜೀವ ವೈವಿದ್ಯತೆಯ ಈ ಯುಗದಲ್ಲಿ, ಬೀಜ ಕೋಟೆಗಳು ಬಹು ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ಬೀಜಗಳ ಸಂಗ್ರಹಣೆ, ಬೀಜಗಳ ಜೀವ ವಿಜ್ಞಾನ ಅಧ್ಯಯನ, ಸಂಶೋಧನೆ ಹಾಗೂ ಸುರಕ್ಷಿತ ಕಪಾಟು, ಕೋಟೆಗಳಲ್ಲಿ ಅರಣ್ಯ ಸಸ್ಯಕುಲ ಮತ್ತು ಕೃಷಿ ಸಂಪದದ ಬೀಜ ನಮೂನೆಗಳನ್ನು ಸಂರಕ್ಷಿಸುವುದು, ಅನುವಂಶಿಕ ಜೀವ ವೈವಿದ್ಯತೆಯನ್ನು ಕಾಪಾಡಿಕೊಳ್ಳಲು ಅನಿವಾರ್ಯ. ಸಂಗ್ರಹಾಲಯಗಳಲ್ಲಿ ಕಲೆ ಹಾಕಿ ಸಂರಕ್ಷಿಸಲಾದ ವಿವಿಧ ಬೀಜ ನಮೂನೆಗಳು ಮತ್ತು ಟಿಷ್ಯೂ ನಮೂನೆಗಳನ್ನು ಸಂಗ್ರಹಿಸುವಾಗ, ಅವುಗಳ ಜೀವ ಸದೃಢತೆಯನ್ನು ಪರೀಕ್ಷಿಸಲು ಬಳಸುವ ಎಕ್ಸ್-ರೇ ಉಪಕರಣದ ಮೂಲಕ ದೊರೆತ ವಿವರಗಳನ್ನು, ಸಂಯೋಜಿಸುತ್ತಾರೆ. ಮಾನವ ಕಣ್ಣಿಗೆ ನಿಲುಕದ ಈ ಚಿತ್ರಗಳನ್ನು ಎಕ್ಸ್-ರೇ ತಂತ್ರಜ್ಙಾನದ ಮೂಲಕ ಸೆರೆ ಹಿಡಿಯಲಾಗುತ್ತದೆ. ಈ ಚಿತ್ರಗಳು , ವಂಶವಾಹಕ ಒಕ್ಕೂಟಕ್ಕೆ ಸಂಬಂಧಿಸಿದಂತೆ, ದರ್ಶನಶಾಸ್ತ್ರ, ಮಾನವಶಾಸ್ತ್ರ ಮತ್ತು ಪರಿಸರದ ಅನೇಕ ಜಟಿಲ ವಿಷಯಗಳಲ್ಲಿ ಅಡಗಿರುವ ವಿಜ್ಞಾನ ಮತ್ತು ಮಾನವ ಪಾತ್ರದ ಬಗೆಗೆ ಬೆಳಕು ಹರಿಸುವುದಲ್ಲದೆ, ಜೀವನ ಹಾಗೂ ಕಾಲಮಾನದ ಬಗ್ಗೆ ಸ್ಥೂಲ ಮತ್ತು ಸೂಕ್ಷ್ಮ ರೂಪದಲ್ಲಿ ಕಾವ್ಯಾತ್ಮಕ ಪ್ರಶ್ನೆ ಗಳಿಗೂ ಎಣೆ ಮಾಡಿಕೊಡುತ್ತವೆ.
ಕಲಾ ಇತಿಹಾಸಕಾರರಾದ ಗಿಯೋವನ್ನಿ ಅಲೋಯ್ ಪ್ರಕೃತಿಯ ಸೊಬಗನ್ನು ʼವಿಜುಯಲ್ ಕಲ್ಚರ್ʼ ನಲ್ಲಿ ವರ್ಣಿಸಿದ್ದಾರೆ, ಡೊರ್ನಿತ್ ಡೊಹರ್ತಿ ಮತ್ತು ಗಿಯೋವನ್ನಿ ಅಲೋಯ್ ನಡುವಣ ಈ ಸಂಭಾಷಣೆಯಲ್ಲಿ, ಡೊರ್ನಿತ್ ತಮ್ಮ ಕಲಾ ಅಭ್ಯಾಸ, ಆರ್ಥಿಕ ವ್ಯವಸ್ಥೆ, ರಾಜಕೀಯ ಇತಿಹಾಸ, ವಲಸೆ ಮಾರ್ಗಗಳು ಇವೇ ಮುಂತಾದ ಕ್ಷೇತ್ರಗಳೊಂದಿಗೆ ಹೇಗೆ ಬೀಜ ಕೋಟೆಗಳು ಬೆಸೆದುಕೊಂಡಿವೆ ಮತ್ತು ಜೀವ ವೈವಿದ್ಯತೆಯನ್ನು ಕಾಪಾಡಿಕೊಳ್ಳಲು ಜೀವ ವಿಜ್ಞಾನಿಗಳು, ಸಂಗೋಪನ ಸಂಸ್ಥೆಗಳು ಮಾಡುತ್ತಿರುವ ಪ್ರಯಾಸ ಇವುಗಳ ಬಗ್ಗೆ ಚರ್ಚಿಸುತ್ತಾರೆ.
ಸಂಭಾಷಣಕಾರರ ಪರಿಚಯ
ಡೊರ್ನಿತ್ ಡೊಹರ್ತಿ, ಅಮೇರಿಕದ ಕಲಾಕಾರರು, 2012 ರಿಂದ ಗುಗ್ಗೆನ್ ಹೈಮ್ ಫೌಂಡೇಶನ್ ಫೆಲೋ, ಇವರು ಛಾಯಾಗ್ರಹಣ, ವೀಡಿಯೋ ಮತ್ತು ವೈಜ್ಞಾನಿಕ ಪ್ರತಿಕೃತಿ ಮುಂತಾದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇಗವಾಗಿ ಸಾಗುತ್ತಿರುವ ಮಾನವನ ಜೀವನಶೈಲಿಯಿಂದಾಗಿ, ಗೌಣವಾಗಿರುವ ಸಂಸ್ಕೃತಿ, ತತ್ವಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಿಗೆ ತಮ್ಮ ಅಧ್ಯಯನದಲ್ಲಿ ಆದ್ಯತೆ ನೀಡಿದ್ದಾರೆ.
ಗಿಯೋವನ್ನಿ ಅಲೋಯ್, ಆಧುನಿಕ ಮತ್ತು ಸಮಕಾಲೀನ ಕಲಾ ಇತಿಹಾಸಕಾರರು. ಮಿಲನ್ ನಲ್ಲಿ, ಕಲಾ ಇತಿಹಾಸ ಮತ್ತು ಕಲಾ ಅಭ್ಯಾಸದ ವ್ಯಾಸಂಗ, 1997ರಲ್ಲಿ ಲಂಡನ್ ನ ಗೋಲ್ಡ್ ಸ್ಮಿತ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗವನ್ನು ಮುಂದುವರಿಸಿ, ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ವಿಜುಯಲ್ ಕಲ್ಚರ್ಸ್‌ನಲ್ಲಿ ಮಾಸ್ಟರ್ಸ್ ಪದವಿ, ʼಸಮಕಾಲೀನ ಕಲೆಯ ಪ್ರಾಕೃತಿಕ ಇತಿಹಾಸʼ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಪ್ರಸಕ್ತ, ಶಿಕಾಗೋದ ʼಸ್ಕೂಲ್ ಆಫ್ ಆರ್ಟ್ ಇಂಸ್ಟಿಟ್ಯೂಟ್” ಸಂಸ್ಥೆ, ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿರುವ ʼಸೊಥೆಬೀಸ್ ಇಂಸ್ಟಿಟ್ಯೂಟ್ ಆಫ್ ಆರ್ಟ್ʼ ಹಾಗೂ ಟೆಟೆ ಗ್ಯಾಲರಿಯಲ್ಲಿ ಭೋದಕರಾಗಿದ್ದಾರೆ. ಇವರ ಮೊದಲ ಪುಸ್ತಕ ಆರ್ಟ್ ಆಂಡ್ ಅನಿಮಲ್ 2011 ರಲ್ಲಿ ಪ್ರಕಟವಾಯಿತು, 2006 ರಿಂದ ʼಆಂಟನೆ, ದಿ ಜರ್ನಲ್ ಆಫ್ ನೇಚರ್ ಇನ್ ವಿಜುಯಲ್ ಕಲ್ಚರ್ʼ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ.