‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಅಹಮದಾಬಾದ್ ನ ಕಸ್ತುರ ಬಾಯಿ ಲಾಲ್ ಬಾಯಿ ವಸ್ತು ಸಂಗ್ರಹಾಲಯದಲ್ಲಿ “ಆಲ್ಖೆಮಿ – ಎಕ್ಸ್ ಪ್ಲೊರೇಶನ್ಸ್ ಇನ್ ಇಂಡಿಗೋ" , ಪ್ರದರ್ಶನ ಆಯೋಜಿತವಾಗುತ್ತಿದೆ. ತಮ್ಮ ವಿಶೇಷ ಜ್ಞಾನಭಂಡಾರದೊಂದಿಗೆ, ಮೂವತ್ತಕ್ಕೂ ಹೆಚ್ಚು ಕಲಾವಿದರು ಮತ್ತು ಕುಶಲಕರ್ಮಿಗಳು ಸೇರಿ ವಿವಿಧ ಬಗೆಯ ಗಷ್ಟು ಮತ್ತು ಹೊಸ ಮಾಧ್ಯಮಗಳನ್ನು ಬಳಸಿಕೊಂಡು, ನೀಲಿ ಬಣ್ಣದ ಪ್ರಯೋಗವನ್ನು ಹಲವಾರು ವಸ್ತುಗಳ ಮೇಲೆ ಮಾಡಿದ್ದಾರೆ. ಸಂಜಯ್ ಲಾಲ್ ಭಾಯ್ ಅವರ ಸಂಕಲ್ಪನೆ, ವಿಫುಲ್ ಮಹದೇವಯ್ಯ ಅವರು ಈ ಪ್ರದರ್ಶನವನ್ನು ಸೃಜನಾತ್ಮಕವಾಗಿ ಸಜ್ಜು ಗೊಳಿಸಿದ್ದಾರೆ, ಅನುಪಾ ಮೆಹತಾ ಈ ಪರಿಯೋಜನೆಯ ಸಹಾಯಕ ಪರಿಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಲ್ಲಿಯವರೆಗೂ ಕೇವಲ ಬಟ್ಟೆಗಳಿಗೆ ಬಣ್ಣ ಹಾಕಲು ಇಂಡಿಗೋ ಬಳಸಲಾಗುತ್ತಿತ್ತು, ಈ ಪ್ರದರ್ಶನದಲ್ಲಿ, ಲೋಹಗಳು, ಶಿಲೆಗಳು, ಕಾಗದ, ಚರ್ಮಗಳ ಮೇಲೆ, ಪಾಲಿಸ್ಟರ್ ನೂಲು, ಗಾಜು, ಮರ ಮುಂತಾದ ವಿವಿಧ ವಸ್ತುಗಳ ಮೇಲೆ ಬಣ್ಣಗಳನ್ನು ಪ್ರಯೋಗಿಸಿ ಆಕೃತಿಗಳನ್ನು ರಚಿಸಬಹುದು ಎಂದು ತೋರಿಸಲಾಗಿದೆ. ಇಂಡಿಗೋ ಗಾಥೆಯು ಮೇಘಾ ತೋಡಿ ಯವರು ಸಂಯೋಜಿಸಿರುವ ಪಟ್ಟಿಗಳ ಸರಣಿ ಪ್ರದರ್ಶನ.
ವಸ್ತು ಸಂಗ್ರಹಾಲಯದ ಪರಿಚಯ
ಅಹಮದಾಬಾದ್ ನ ನರೋಡಾ ರಸ್ತೆಯಲ್ಲಿರುವ ಅರವಿಂದರ ಭಾರತದ ಮುಖ್ಯಾಲಯ ಆವರಣದಲ್ಲಿ ʼದಿ ಅರವಿಂದ್ ಇಂಡಿಗೊ ಮ್ಯೂಸಿಯಮ್ʼ ನಿರ್ಮಿಸುವ ಯೋಜನೆ ಇದೆ. ವಿವಿಧ ಪರಿಕಲ್ಪನೆಗಳು ಮತ್ತು ಪ್ರಕ್ರಿಯೆಗಳಲ್ಲಿ ಇಂಡಿಗೊ ಬಣ್ಣವನ್ನು ಪ್ರಯೋಗಿಸಿ, ತಮ್ಮ ಅಸ್ಥಿತ್ವವನ್ನು ವಿಸ್ತರಿಸುವ ಯೋಜನೆ ರೂಪಿಸಿದ್ದಾರೆ. ಈ ಸಂಗ್ರಹಾಲಯವನ್ನು ಅರವಿಂದ್ ಕಾರ್ಖಾನೆಯ ಆವರಣದಲ್ಲಿ ಸಂಘಟಿಸಲಾಗುವುದು. 1987ರಲ್ಲಿ ಅರವಿಂದ್ ಕಾರ್ಖಾನೆಯು ಭಾರತದಲ್ಲಿ ಮೊದಲ ಬಾರಿಗೆ ಡೆನಿಮ್ ವಸ್ತ್ರವನ್ನು ಉತ್ಪಾದಿಸಿತ್ತು.
ಕಲಾವಿದರ ಪರಿಚಯ
ಅಸ್ಸಾಂ ನ ಡಿಬ್ರುಘರ್ ನಲ್ಲಿ 1988 ರಲ್ಲಿ, ಮೇಘಾ ತೋಡಿ ಜನಿಸಿದರು. ಕಳೆದ 7 ವರ್ಷಗಳಿಂದ ವಸ್ತು ಸಂಗ್ರಹಣ ಸಂಶೋಧನೆಯಲ್ಲಿ ತೊಡಗಿದ್ದಾರೆ. ಗಾಂಧಿ ಮತ್ತು ಅವರ ಸಹಚರರ ಕೃತಿಗಳನ್ನು ಕುರಿತಂತೆ ʼಗಾಂಧಿ ಹೆರಿಟೇಜ್ ಪೋರ್ಟಲ್ʼ ಅನ್ನು ಆನ್ ಲೈನ್ ನಲ್ಲಿ ಪ್ರಕಾಶಿಸಿದ ತಂಡದ ಭಾಗಿಯಾಗಿದ್ದರು. ಮೇಘಾ ತೋಡಿಯವರು, ಡಾ. ತ್ರಿದೀಪ್ ಸುಹೃದ್ ಮತ್ತು ಕಿನ್ನರಿ ಭಟ್ ಅವರ ಜೊತೆಗೆ ʼಲೆಟರ್ಸ್ ಟು ಗಾಂಧಿʼ ಪರಿಯೋಜನೆಯ ಮೊದಲ ಸರಣಿಯ ಸಹ-ಸಂಪಾದನೆ ಮಾಡಿದ್ದಾರೆ, ಮೊದಲ ಸಂಕಲನವು 2017 ರಲ್ಲಿ ಪ್ರಕಟಗೊಂಡಿದೆ. ಬಿಡುವಿನ ವೇಳೆಯಲ್ಲಿ ತರಾವರಿ ಚಹಗಳನ್ನು ಬೆರೆಸಿ ಸವಿಯುವ ಹವ್ಯಾಸ ಹೊಂದಿದ್ದಾರೆ.