‘ಫೈಟೋಪಿಯ’ ಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಚಿಂತನೆ ಹಾಗೂ ಅನುಭವಗಳನ್ನು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
ಪಾಂಡುರಂಗ ಖಂಖೋಜೆ, ಕೃಷಿ ಶಾಸ್ತ್ರಜ್ಞರು ಮತ್ತು ರಾಜಕೀಯ ಕ್ರಾಂತಿಕಾರಿ , ಬ್ರಿಟಿಷ್ ಆಳ್ವಿಕೆಯ ವಿರುದ್ಧ ಚಳುವಳಿ ನೆಡೆಸಿ ಸ್ವಾತಂತ್ರ್ಯ ಹೋರಾಟಕ್ಕೆ ಗದ್ಧಾರ್ ಪಾರ್ಟಿಯನ್ನು ಸ್ಥಾಪಿಸಲು ಸಹಯೋಗ ನೀಡಿದವರು. ವಿಶ್ವದೆಲ್ಲೆಡೆ ಪರ್ಯಟನೆ ಮಾಡಿ, ಮೆಕ್ಸಿಕೋ ದೇಶದಲ್ಲಿ ನೆಲೆಸಿದರು. ಮೆಕ್ಸಿಕನ್ ಜನರಿಗಾಗಿ ಉಚಿತ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಿದರು. ವಿಭಿನ್ನ ಕಾಳು ತಳಿಗಳ ಮೇಲೆ ಸಫಲ ಸಂಶೋಧನೆ ನೆಡೆಸಿದ್ದಾರೆ. ಆ ದೇಶದ ರಾಜಕೀಯ, ಬೌದ್ಧಿಕ ಮತ್ತು ಕಲಾಲೋಕದ ಜಾಗೃತ ಅವಿಭಾಜ್ಯ ಅಂಗವಾಗಿದ್ದವರು.
ಸಾವಿತ್ರಿ ಸಾನೇ ಅವರು ತಮ್ಮ ತಂದೆ ಪಾಂಡುರಂಗ ಖಂಖೋಜೆಯವರ ಬಗೆಗೆ ಬರೆದಿರುವ ಹಲವಾರು ಪ್ರಬಂಧಗಳನ್ನು ಪ್ರದರ್ಶಿಸಲಾಗಿದೆ. ಖಂಖೋಜೆ ಯವರ ಭಾವ ಚಿತ್ರಗಳು, ಅವರ ಕೃಷಿ ಪ್ರಯೋಗಗಳು ಮತ್ತು ಇಟಲಿಯ ಛಾಯಾಗ್ರಾಹಕರಾದ ಟಿನ ಮೊದೊಟ್ಟಿ ಪ್ರಸ್ತುತ ಪಡಿಸಿರುವ ಎಶುಲಾಸ್ ಲಿಬ್ರೆಸ್ ಡೆ ಅಗ್ರಿಕಲ್ಚರ ಮೆಕ್ಸಿಕೋ (1924- 1928) ಜೆಲಾಟಿನ್ ಪ್ರಿಂಟ್ಸ್ ಪ್ರದರ್ಶನದಲ್ಲಿ ಒಳಗೊಂಡಿವೆ.
Article by Gabriela Soto Laveaga
ಮಾಧ್ಯಮ: ಬೆಳ್ಳಿಯ ಜೆಲಾಟಿನ್ ಪ್ರಿಂಟ್ಸ್
ಈ ಸಂಶೋಧಕ ಪರಿಯೋಜನೆಗೆ ದೀರ್ಘವಾದ ಇತಿಹಾಸವಿದೆ. ಕಾಲಮಾನದ ದೃಷ್ಟಿಯಿಂದಲ್ಲದೇ, ಮೆಕ್ಸಿಕಾ ದ ಅಗ್ರಮಾನ್ಯ ಕಲಾವಿದರು, ಇಟಲಿಯ ಹೆಸರಾಂತ ಮಹಿಳಾ ಛಾಯಾಚಿತ್ರಗಾರರು ಹಾಗೂ ಬಾರತೀಯ ವಿಜ್ಞಾನಿ, ಕ್ರಾಂತಿಕಾರಿ ಮತ್ತು ಮಾನವತಾವಾದಿ ವ್ಯಕ್ತಿತ್ವಗಳ ಸಮ್ಮಿಲನದ ಗಾಥೆ. ಈ ಕಲಾಕೃತಿ ಸುಮಾರು 100 ವರ್ಷ ಪುರಾತನವಾದುದು. ಅಂದಿನ ಕಾಲದಲ್ಲಿ, ಬೃಹದಾಕಾರವಾದ ಕ್ಯಾಮರಾಗಳನ್ನು ಬಳಸಿ ಬೆಳ್ಳಿ ಮಾಧ್ಯಮದ ಮೂಲಕ ಛಾಯಾಚಿತ್ರಗಳನ್ನು ಸಂವರ್ಧನೆಗೊಳಿಸುತ್ತಿದ್ದರು. ಛಾಯಾಗ್ರಹಣ ಸುಲಭ ವಿಷಯವಾಗಿರಲಿಲ್ಲ. ಬೆಳಕಿನ ಸರಿಯಾದ ಪ್ರಮಾಣವನ್ನು ಹಿಡಿದು, ಬೆಳಕು ಮತ್ತು ಕತ್ತಲೆಯ ನಡುವಣ ಸಮತೋಲನ ಕಾಪಾಡಿಕೊಂಡು, ನಿರ್ಜೀವ ತತ್ವಗಳಿಗೆ ಜೀವ ತುಂಬುವ ಕಲೆಯಾಗಿತ್ತು.
ಡಿಯಾಗೊ ರಿವೆರ, ಮೆಕ್ಸಿಕೋದ ಹೆಸರಾಂತ ಭಿತ್ತಿಚಿತ್ರಜ್ಞ, ಕಲಾಲೋಕದ ನಾಣ್ನುಡಿಯಾಗಿದ್ದರು. 1910 ರ ಬೃಹತ್ ಕ್ರಾಂತಿಯ ನಂತರ, ʼಮೆಕ್ಸಿಕೋʼ, ಕಲೆ, ವಿಜ್ಞಾನ ಮತ್ತು ಸಮಾಜದ ಅಭಿವೃದ್ಧಿಯನ್ನು ಕಂಡಿತು, ವಸಾಹತಿನಿಂದ ಮುಕ್ತವಾಗಿ, ನವ್ಯ, ಪಕ್ವ ಗಣತಂತ್ರವಾಗಿ ರೂಪಗೊಳ್ಳುತ್ತಿತ್ತು. ʼರಿವರʼ, ತಾವು ಕಂಡ ಮೆಕ್ಸಿಕೋವನ್ನು ವರ್ಣಗಳ ಮೂಲಕ ಬಣ್ಣಿಸಿದ್ದರು, ಅಂದಿನ ದಿನಗಳ ಸಾಮಾಜಿಕ ವ್ಯಸನಗಳು ಮತ್ತು ಪುರಾತನ ಬುಡಕಟ್ಟ ಇತಿಹಾಸವನ್ನು, ಹೊಸ ಪ್ರಪಂಚ ಹಾಗೂ ಅಭಿವೃದ್ಧಿಯನ್ನು ಬಣ್ಣಿಸುವ ವರ್ಣ ಚಿತ್ರ ರಚಿಸಿದ್ದರು. ಪಾಂಡುರಂಗ ಖಂಖೋಜೆ, ಕಷ್ಟ ಕಾರ್ಪಣ್ಯ, ಹಸಿವು ಎಲ್ಲವನ್ನೂ ಎದುರಿಸಿ, ಭಾರತ ಸ್ವತಂತ್ರದ ಅಭಿಲಾಶೆಯನ್ನು ಹೊತ್ತು, ಮೆಕ್ಸಿಕೋದ ತನ್ನ ಹಳೆಯ ಕ್ರಾಂತಿಕಾರಿ ಮಿತ್ರರ ಸಹಾಯ ಕೋರಿ ಮೆಕ್ಸಿಕೋ ನಗರಕ್ಕೆ ಬಂದಿದ್ದರು. ಇವರು ಭಾರತಕ್ಕೆ ಹಿಂತಿರುಗಿದ್ದರೆ ಮರಣ ಶಾಸನವನ್ನು ಎದುರಿಸಬೇಕಾಗಿತ್ತು. ಸಂಯುಕ್ತ ರಾಜ್ಯ ಸಂಘದಲ್ಲಿ ಗದ್ಧಾರ್ ಕ್ರಾಂತಿಕಾರಿಗಳ ತರಬೇತಿ ಮತ್ತು ಪ್ರೇರಣಾ ಕಾರ್ಯದಲ್ಲಿ ಭಾಗಿಯಾಗಿದ್ದಾಗ ಅನೇಕ ಮೆಕ್ಸಿಕನ್ನರು ಮಿತ್ರರಾಗಿದ್ದರು. ಕಾಲಿಫೋರ್ನಿಯಾದಲ್ಲಿ ಬಹಳಷ್ಟು ಕ್ರಾಂತಿಕಾರಿ ಮೆಕ್ಸಿನ್ನರು ವಾಸವಿದ್ದರು. ಈ ಸಮೂಹವು ಪಾಂಡುರಂಗ ಖಂಖೋಜೆಯವರನ್ನು ತಮ್ಮಲ್ಲಿ ಒಬ್ಬರಾಗಿ ಸೇರಿಸಿಕೊಂಡಿತ್ತು. ಜಪಾನ್ ದೇಶದಲ್ಲಿ ಗಡಿಪಾರಾಗಿದ್ದ, ಚೀನಾದ ಡಾ. ಸನ್‌ಯತ್ ಸೆನ್, ಅವರನ್ನು ಖಂಖೋಜೆ ಭೇಟಿಯಾಗಿದ್ದರು. ಅವರ ಕೃಷಿ-ತಂತ್ರದಿಂದ ಪ್ರಭಾವಿತರಾಗಿದ್ದರು. ಖಂಖೋಜೆ, ತಮ್ಮ ಬಿಡುವಿಲ್ಲದ ದಿನಚರಿಯಲ್ಲಿಯೂ, ಕೃಷಿಯ ಅಧ್ಯಯನ ಮಾಡುತ್ತಿದ್ದರು.
ಖಂಖೋಜೆಯವರು ಮುಖಂಡರಾಗಿ ದುಂಡು ಸಭೆಯನ್ನು ಉದ್ದೇಶಿಸುತ್ತಿರುವ, ವರ್ಣ ಚಿತ್ರವನ್ನು ಡಿಯಾಗೊ ರಿವೆರ ಬಿಡಿಸಿದ್ದಾರೆ. ರೊಟ್ಟಿಯನ್ನು ಖಡ್ಗದಿಂದ ತುಂಡರಿಸುತ್ತಿರುವ ಖಂಖೋಜೆಯವರನ್ನು ಹಿಂಬದಿಯಲ್ಲಿ ನಿಂತ ಸೈನಿಕ ಮತ್ತು ರೈತ ಬೆಂಬಲಿಸುತ್ತಿರುವಂತೆ ಈ ಚಿತ್ರ ರಚಿತವಾಗಿದೆ. ಈ ಚಿತ್ರದಲ್ಲಿ, ಮೆಕ್ಸಿಕೋ ಚಿಕ್ಕ ಮಗುವಂತೆ ತೋರುತ್ತಿದ್ದು, ಎಲ್ಲಾ ರಾಷ್ಟ್ರಗಳ ಜನ ಸುತ್ತಲೂ ಇದ್ದಾರೆ.
ಅಂದಿನ ಕಾಲ ಭಿನ್ನವಾಗಿತ್ತು, ಇಡೀ ವಿಶ್ವಕ್ಕೆ ಆಹಾರ ಒದಗಿಸುವ ಮಾನವೀಯ ದೃಷ್ಟಿಯಿಂದ, ಖಂಖೋಜೆಯವರು ಮೂವತ್ತು ಕೃಷಿ ಶಾಲೆಗಳನ್ನು ತೆರೆದರು. ದುರಂತವೆಂದರೆ, ಖಂಖೋಜೆಯವರು ಆಶಿಸಿದಂತೆ ತಮ್ಮ ಜೀವಮಾನದಲ್ಲಿ , ಪುನಃ ಭಾರತಕ್ಕೆ ಹಿಂರಿರುಗಲು ಆಗಲಿಲ್ಲ.
ಖಂಖೋಜೆಯವರು, ಮೆಕ್ಸಿಕೋ ದೇಶದಲ್ಲಿ ಅನವಂಶಿಕ ಅಧ್ಯಯನವನ್ನು ಪ್ರಾರಂಭಿಸಿದರು. ನಾರ್ಮನ್ ಬೋರ್ಲಾಗ್ ಮತ್ತು ಎಮ್.ಎಸ್.ಸ್ಡಾಮಿನಾಥನ್ ಅವರುಗಳು ಭಾರತದಲ್ಲಿ ಹಸಿರು ಕ್ರಾಂತಿಯನ್ನು ಪ್ರಾರಂಭಿಸಲು ಮೆಕ್ಸಿಕೋಯಿಂದ ತೆರಳಿದಾಗ, ಈ ಪ್ರಭಾವಶೀಲ ಅಧ್ಯಯನಗಳ ಲಾಭ ಭಾರತಕ್ಕೆ ದೊರೆಯಿತು. ಖಂಖೋಜೆಯವರ ಕನಸು ನನಸಾಯಿತು.
ಬರಹಗಾರರು - ಸಾವಿತ್ರಿ ಸಾಹ್ನೇ
ಬರಹಗಾರರ ಪರಿಚಯ
ಸಾವಿತ್ರಿ ಸಾಹ್ನೇ, ಸೇವಾ ನಿವೃತ್ತ ಮಕ್ಕಳ-ತಜ್ಞೆ, ಸಕ್ರಿಯ ಪ್ರಬಂಧಕರು, ಕವಿಯತ್ರಿ ಮತ್ತು ಜೀವನ-ಚರಿತ್ರೆ ಕೃತಿಗಾರರು. ʼಮೆಕ್ಸಿಕೋʼದಲ್ಲಿರುವ ʼಗ್ವಾಡಲಹಾರʼ ದಲ್ಲಿ ಇವರು ಜನಿಸಿದರು. ಪ್ರಸಕ್ತ, ಭಾರತದ ನವ ದೆಹಲಿಯ ನಿವಾಸಿಯಾಗಿದ್ದಾರೆ. ಇವರು ಪಾಂಡುರಂಗ ಖಂಖೋಜೆಯವರ ಸ್ಮರಣಾರ್ಥ ʼಐ ಶಲ್ ನೆವರ್ ಆಸ್ಕ್ ಫಾರ್ ಪಾರ್ಡನ್ ʼ, ಕೃತಿಯನ್ನು ರಚಿಸಿದ್ದಾರೆ. ಪಾಂಡುರಂಗ ಖಂಖೋಜೆಯವರು, ʼಒರೆಗಾಂವ್ʼ ವಿಶ್ವವಿದ್ಯಾಲಯದಲ್ಲಿ, ತಮ್ಮ ವಿದ್ಯಾರ್ಥಿ ಜೀವನದ ದಿನಗಳಲ್ಲಿ, ಭಾರತೀಯ ಸ್ವತಂತ್ರ ಚಳುವಳಿಯ ಮುಂಚೂಣಿಯಲ್ಲಿದ್ದರು. ಮೊದಲ ವಿಶ್ವ ಯುದ್ಧ, ಗದ್ಧಾರ್ ಕ್ರಾಂತಿ ಮತ್ತು ಜರ್ಮನಿ ಹಾಗೂ ರಷ್ಯಾ ದೇಶಗಳಲ್ಲಿ ಕ್ರಾಂತಿಕಾರಿ ಯತ್ನಗಳ ನಂತರ ಮೆಕ್ಸಿಕೋದಲ್ಲಿ ನೆಲೆಸಿದರು. ಇವರು ಅಧ್ಯಯನ ಮತ್ತು ಸಂಶೋಧನೆಯನ್ನು ನೆಡೆಸಿ ಅಭಿವೃದ್ಧಿ ಪಡಿಸಿದ ಮೆಕ್ಕೆ ಜೋಳದ ಕಸಿ ತಳಿಗಳು, ತುಕ್ಕು ರೋಗ ನಿರೋಧಕ ಗೋಧಿ ಬೆಳೆ ಮತ್ತು ಉತ್ತಮ ಫಸಲು ನೀಡುವ ಸೊಯಾ ಹಾಗೂ ಮೆಕ್ಸಿಕೋದ ಹುರುಳಿ ಮುಂತಾದವು, ಮೆಕ್ಸಿಕೋದಲ್ಲಿ ʼಹಸಿರು ಕ್ರಾಂತಿ’ ಗೆ ನಾಂದಿ ಹಾಡಿದವು. ಮೆಕ್ಸಿಕೋದ ಹೆಸರಾಂತ ಕಲಾವಿದ, ʼಡಿಯಾಗೊ ರಿವೆರʼ, ತಮ್ಮ ಭಿತ್ತಿಚಿತ್ರಗಳಲ್ಲಿ ಪಾಂಡುರಂಗ ಖಂಖೋಜೆಯವರ ಕೊಡುಗೆಯನ್ನು ಶ್ಲಾಘಿಸಿ ವರ್ಣಿಸಿ-ಬಣ್ಣಿಸಿದ್ದಾರೆ.